ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನೆನಪಿನಲ್ಲಿ ಅಭಿಮಾನಿಗಳಂತೂ ಪ್ರತಿ ದಿನ ಒಂದಲ್ಲ ಒಂದು ಒಳ್ಳೆಯ ಕೆಲಸಗಳು ಆರೋಗ್ಯ ಶಿಬಿರ ಹೆಲ್ತ್ ಕ್ಯಾಂಪ್ ಸೇರಿದಂತೆ ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಕುಟುಂಬದ ಸದಸ್ಯರು ಕೂಡ ಪುನೀತ್ ರಾಜಕುಮಾರ್ ಅವರ ಆಸೆ ಕನಸುಗಳನ್ನು ಈಡೇರಿಸುವಲ್ಲಿ ಗಮನಹರಿಸಿದ್ದಾರೆ. ಅಲ್ಲದೆ ಸಾಕಷ್ಟು ಮಂದಿ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಪುನೀತ್ ರಾಜಕುಮಾರ್ ಅವರ ಬಗ್ಗೆ ಅವರ ಸ್ವಭಾವದ ಬಗ್ಗೆ ಮಾತುಗಳನ್ನು ನೆನಪುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಅಂತೆಯೇ ಇದೀಗ ಸ್ಯಾಂಡಲ್ ವುಡ್ ನ ನಟ ರಿಷಿ ಕೂಡ ಪುನೀತ್ ಅವರ ಬಗ್ಗೆ ಅಚ್ಚರಿಯ ವಿಷಯವೊಂದನ್ನು ಹಂಚಿಕೊಂಡಿದ್ದಾರೆ.

ಖಾಸಗಿ ಚಾನೆಲ್ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಪುನೀತ್ ರಾಜಕುಮಾರ್ ಸರ್ ಅವರು ತನಗೆ ಹೇಳಿದ್ದ ಒಂದು ಕಿವಿ ಮಾತಿನ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದನ್ನು ಪುನೀತ್ ಅವರಿಗೆ ಪಾರ್ವತಮ್ಮ ರಾಜಕುಮಾರ್ ಅವರು ಹೇಳಿ ಕೊಟ್ಟಿದ್ದರಂತೆ. ಪಾರ್ವತಮ್ಮನವರು ತನ್ನ ಮಕ್ಕಳಿಗೆ ಡಾಕ್ಟರ್ ರಾಜ್ ಅವರ ಆದರ್ಶಗಳನ್ನು ಪಾಲಿಸಲು ಹೇಳೋದು ಅಲ್ಲದೆ ಪರರಿಗೆ ಹೇಗೆ ನೆರವಾಗಬೇಕು ಅನ್ನೋದನ್ನು ಹೇಳಿಕೊಟ್ಟಿದ್ದರು. ಅದಕ್ಕೆ ಒಂದು ನಿದರ್ಶನ ಎಂದರೆ ನಟ ರಿಷಿ ಹಂಚಿಕೊಂಡಿರುವ ಈ ಮಾತುಗಳು, ಪಾರ್ವತಮ್ಮನವರು ಅಪ್ಪು ಅವರಿಗೆ ಹೇಳಿರುವ ಮಾತು ಇದು ಅದನ್ನು ಪುನೀತ್ ರಾಜಕುಮಾರ್ ಅವರು ನಟ ರಿಷಿ ಬಳಿ ಹೇಳಿಕೊಂಡಿದ್ದರಂತೆ.

ಅದೇನೆಂದರೆ ನೀನು ಸಿನಿಮಾಗೆ ದುಡಿಧಾಗ ಬರುವ ದುಡ್ಡನ್ನು ಹೇಗೆ ಬೇಕಾದರೂ ಖರ್ಚು ಮಾಡು. ಆದರೆ ಸಿನಿಮಾದಲ್ಲಿ ಹಾಡುವಾಗ ಬರುವಂತಹ ಸಂಭಾವನೆಯನ್ನು ನಿನಗಾಗಿ ಖರ್ಚು ಮಾಡಬೇಡ ಒಳ್ಳೆಯ ಕೆಲಸಕ್ಕೆ ಬಡವರಿಗಾಗಿ ಮೀಸಲಿಡು ಎಂದಿದ್ದರಂತೆ ಇದೇ ಕಾರಣಕ್ಕೆ ಪುನೀತ್ ರಾಜಕುಮಾರ್ ಅವರು ಹೆಚ್ಚೆಚ್ಚು ಸಿನಿಮಾಗಳಲ್ಲಿ ಹಾಡುತ್ತಿದ್ದರು ಹಾಗೆಯೇ ಅದರಿಂದ ಬಂದ ಹಣವನ್ನು ಬಡ ಮಕ್ಕಳಿಗೆ ಸಮಾಜ ಸೇವೆಗಾಗಿ ಮೀಸಲಿಡುತ್ತಿದ್ದರು ಪುನೀತ್ ಅಮ್ಮನ ಮಾತು ಯಾವತ್ತು ಮೀರಿದವರಲ್ಲ ಅಪ್ಪು, ಪುನೀತ್ ಅವರ ಈ ಗುಣದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ..