Advertisements

ಅಪ್ಪು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಿದ್ದವಾಗಿದ್ದ ಮೂವಿ! ಹೇಗಿದೆ ನೋಡಿ..

Cinema

ಪ್ರಿಯ ಸ್ನೇಹಿತರೆ ಅಪ್ಪು ಎಂದರೆ ಅಚ್ಚಳಿಯದ ಹಾಗೆ ಉಳಿದಿರುವ ನೆನಪು. ಆರು ತಿಂಗಳ‌ ಮಗುವಿರುವಾಗಲೇ ಕ್ಯಾಮರಾ‌ ಮುಂದೆ ನಟಿಸಿದ್ದು ನಮ್ಮಲ್ಲರ ನೆಚ್ಚಿನ ಅಪ್ಪು. ಹೀಗೆ ಬಾಲ್ಯಾವಸ್ಥೆಯಿಂದಲೇ ನಟನೆ, ನೃತ್ಯ, ಪೈಟಿಂಗ್ ಎಲ್ಲದರಲ್ಲಿಯೂ ಇವರದ್ದು ಒಂದು ಹೆಜ್ಜೆ ಮುಂದೆಯೇ ಇರ್ತಾರೆ.ಹೀಗೆ ನಾಯಕ ನಟನಾಗಿ ನಟಿಸಿ ಅಪಾರ ಅಭಿಮಾನಿಗಳ ಹೊಂದಿದ್ದು ಅಪ್ಪು. ಇಷ್ಟೆಲ್ಲ ಮಾಡಿದ್ದ ಅಪ್ಪು ಇಂದು ನಮ್ಮೊಂದಿಗಿಲ್ಲ. ಹೌದು ಅವರಿಲ್ಲ ಎಂಬ ಸಂಗತಿಯನ್ನು ನಂಬುವುದು ಕಷ್ಟವಾದರೂ ಅದು ಸತ್ಯ. ಅಪ್ಪು ಇನ್ನು ನಮ್ಮೆಲ್ಲರಿಗೆ ನೆನಪು ಮಾತ್ರ. ಅಪ್ಪು ಕೊನೆಯಲ್ಲಿ ನಟಿಸಿ ತರೆಕಂಡ ಚಿತ್ರ ಯುವರತ್ನ. ಇದಷ್ಟೆ ಅಲ್ಲದೆ ಅಪ್ಪು ಇನ್ನು ಕೆಲವು ಚಿತ್ರಗಳಲ್ಲಿ ನಟಿಸಲು ಒಪ್ಪಿಗೆ ಕೂಡ ನೀಡಿದ್ದರು. ಕೊನೆಯಲ್ಲಿ ಅಪ್ಪು ಒಪ್ಪಿದ್ದು ವಿಲನ್ ಆಗಿ‌ ನಟಿಸಲು.

[widget id=”custom_html-5″]

Advertisements
Advertisements

ಹಾಗಾದರೆ ಅಪ್ಪು ನಟಿಸಲು ಒಪ್ಪಿದ ಆ ಮೂವಿ ಯಾವುದು? ಯಾರ ನಿರ್ದೇಶನದಲ್ಲಿ ಈ ಸಿನೆಮಾ ಮೂಡಿ ಬರಲಿದೆ ಎಂಬ ಮಾಹಿತಿ ತಿಳಿಯಬೇಕಾದರೆ ಈ ಸ್ಟೋರಿನಾ ಪೂರ್ತಿ ಓದಿ.. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೇಮ್ಸ್, ಗಂಧದಗುಡಿ ಸೇರಿದಂತೆ ಹಲವಾರು ಸಿನಿಮಾಗಳನ್ನು ಒಪ್ಪಿಕೊಂಡು ಅರ್ಧದಷ್ಟು ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ್ದರು. ಆದರೆ ಯಾರಿಗೆ ತಿಳಿದಿರುತ್ತದೆ ಈ ವಿಧಿಯಾಟ. ನಾವು ಅಂದುಕೊಳ್ಳುವುದೇ ಒಂದು ಈ ಜೀವನ ನಮ್ಮ ಮುಂದೆ ವಿಭಿನ್ನವಾದ ಸವಾಲುಗಳನ್ನು ತಂದೊಡ್ಡುತ್ತದೆ. ಅಪ್ಪು ಅವರ ಬದುಕಿನಲ್ಲಾಗಿದ್ದು ಅದೇ. ನಮ್ಮೆಲ್ಲರ ಪ್ರೀತಿಯ ಬೆಟ್ಟದ ಹೂವುವಾದ ಪುನೀತ್ ರಾಜಕುಮಾರ್ ಅಕಾಲಿಕ ನಿ’ಧ’ನ.

[widget id=”custom_html-5″]

ಇಂದು ಪುನೀತ್ ರಾಜಕುಮಾರ್ ನಮ್ಮೊಂದಿಗಿಲ್ಲ. ಒಳ್ಳೆಯ ಕಥೆಯುಳ್ಳ ಹಾಗೂ ಅವರು ಅಭಿನಯಿಸುವ ಹಲವು ಚಿತ್ರಗಳನ್ನು‌ ನೋಡುವ ಅವಕಾಶ ನಮ್ಮದಾಗಿರುತ್ತಿತ್ತು. ಆದರೀಗ ಅಪ್ಪುಗಾಗಿ ಬರೆದ ಕಥೆಯಲ್ಲಿ ಬೇರೆ ಬೇರೆ ನಟರು ಅಭಿನಯಿಸಲು ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಪುನೀತ್ ರಾಜಕುಮಾರ್ ಅವರ ಕುರಿತು ಮತ್ತೊಂದು ವಿಶೇಷ ಸುದ್ದಿ ಹೊರಬಂದಿದ್ದು, ಅದೊಂದು ಸಿನಿಮಾದಲ್ಲಿ ಅಪ್ಪು ವಿಲನ್ ರೋಲ್ನಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದರಂತೆ. ಹೌದು ಖ್ಯಾತ ‌ನಿರ್ದೇಶಕ ನಿರ್ದೇಶಕ ಮನಸೂರೆ ಅವರ ಡೈರೆಕ್ಷನ್ನಲ್ಲಿ ತಯಾರಾಗುತ್ತಿರುವ ಮಿಷಿನ್ ಕೊಲಂಬಸ್ ಎಂಬ ಚಿತ್ರದಲ್ಲಿ ವಿಲನ್ ಆಗಿ ಅಭಿನಯಿಸಲು ವರ್ಷಗಳಿಂದ ಪ್ಲಾನ್ ರೆಡಿ ಮಾಡಿದ್ದಾರಂತೆ. ಇದಷ್ಟೆ ಅಲ್ಲದೆ ಈ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಇರುವಂತಹ ಪೋಸ್ಟರ್ ಒಂದನ್ನು ಕೂಡಾ ರಿಲೀಸ್ ಮಾಡಿದ್ದರು.

[widget id=”custom_html-5″]

ಇದು ವಿಭಿನ್ನ ಕಥೆಯುಳ್ಳ ಚಿತ್ರವಾಗಿದ್ದು ಅದರಲ್ಲಿ ನಾಯಕನಿಗಿಂತ ವಿಲನ್ ಪಾತ್ರ ತುಂಬಾ ಸ್ಟ್ರಾಂಗ್ ಆಗಿ ಇದ್ದ ಕಾರಣ ಇದಕ್ಕೆ ಅಪ್ಪು ಅವರನ್ನು ಆಯ್ಕೆ ಮಾಡಲಾಗಿತ್ತು. ಇನ್ನು ಈ‌ ಚಿತ್ರದಲ್ಲಿ ನಟಿಸುವ ಕುರಿತು ಖುದ್ದಾಗಿ ನಿರ್ದೇಶಕ ಮನಸೂರೆ ಮತ್ತು ಟಿ.ಕೆ ದಯಾನಂದರವರು ಪುನೀತ್ ರಾಜಕುಮಾರ್ ಅವರ ಬಳಿ ಮಾತನಾಡಿದಾಗ ಸದ್ಯ 2, 2 ಸಿನಿಮಾಗಳನ್ನು ಒಪ್ಪಿಕೊಂಡು ಅದರಲ್ಲಿ ಬ್ಯುಸಿ ಇರುದಾಗಿ ತಿಳಿಸಿದ ಅಪ್ಪು ಬೇರೆ ಸಿನಿಮಾಗಳ ಶೂಟಿಂಗ್ ಕೆಲಸ ಮುಗಿದ ನಂತರ ನನ್ನ ಕಂಪ್ಲೀಟ್ ಕಾನ್ಸಂಟ್ರೇಷನ್ ನಿಮ್ಮ ಸಿನಿಮಾದ ಮೇಲೆ ಇರುತ್ತದೆ, ಅದ್ಭುತವಾಗಿ ಮಾಡೋಣ ಎಂದು ಭರವಸೆ ನೀಡಿದರಂತೆ.

[widget id=”custom_html-5″]

ಈ ಕುರಿತು ಮನಸೂರಿ ಅವರು ಪುನೀತ್ ರಾಜ್ಕುಮಾರ್ ಅಗಲಿದ ನಂತರ ಮಾಧ್ಯಮಗಳ ಮುಂದೆ ಮಾತನಾಡಿ ಅಪ್ಪುಗಾಗಿ ಮೀಸಲಿಟ್ಟು ಮಾಡಿದ ಕಥೆಗೆ ಬೇರೆ ನಾಯಕನನ್ನು ಹುಡುಕುವುದು ಬಹಳ ಕಷ್ಟವಾಗಿದೆ, ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ನಮ್ಮ ಕನ್ನಡ ಚಲನಚಿತ್ರ ರಂಗಕ್ಕೆ ಭರಿಸಲಾಗದ ನಷ್ಟ ಎಂದು ಸಂತಾಪ ವ್ಯಕ್ತಪಡಿಸಿದರು. ಇನ್ನು ಅಪ್ಪು ಅವರು ಮಾಡಬೇಕಿದ್ದ ಪಾತ್ರಕ್ಕೆ ಯಾರು ಜೀವ ತುಂಬುವರು ಎಂದು ಕಾದು ನೋಡಬೇಕಿದೆ.

[widget id=”custom_html-5″]