Advertisements

ಪುನೀತ್ ರಾಜಕುಮಾರ್ ಅವರ ಐಷಾರಾಮಿ ಹೊಸ ಮನೆ ಯಾವ ರೀತಿ ಇದೆ ಗೊತ್ತಾ! ಮನೆಯ ಒಳಗಡೆ ಏನ್ ಏನ್ ಇದೇ ಗೊತ್ತಾ..?

Cinema

ನಮಸ್ತೆ ಸ್ನೇಹಿತರೆ, ಅಣ್ಣಾವ್ರ ಮಗ, ಅಭಿಮಾನಿಗಳ ಮೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸರಳತೆಯಿಂದಲೇ ಬಹುದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಣ್ಣಾವ್ರು ಮತ್ತು ಪಾರ್ವತಮ್ಮ ದಂಪತಿಯ ಮಗನಾಗಿ, ತಂದೆ ತಾಯಿ ತೋರಿಸಿದ ಸರಳತೆ, ಸಜ್ಜನಿಕೆ, ಮತ್ತು ಸಹಾಯ ಮನೋಭಾವದಿಂದಲೇ ಬೆಳೆದು ಬಂದಿದ್ದಾರೆ ಪುನೀತ್ ರಾಜಕುಮಾರ್. ಅಪ್ಪು ಅವರ ನಡವಳಿಕೆ ಮತ್ತು ಸರಳತೆ ಕುರಿತು ಅನೇಕರು ಮಾತನಾಡುವುದನ್ನು ನಾವು ಕೇಳಿರುತ್ತೇವೆ. ಅಪ್ಪು ಅವರು ನಿಜ ಜೀವನದಲ್ಲಿ ಪಕ್ಕಾ ಫ್ಯಾಮಿಲಿ ಮ್ಯಾನ್. ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರ ಮುದ್ದಿನ ಮಗ ಅಪ್ಪು. ಇವರ ಲೈಫ್ ಸ್ಟೈಲ್ ಹೇಗಿದೆ ನೋಡೋಣ ಬನ್ನಿ.

Advertisements
Advertisements

ಸಿನಿಮಾ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ, ತಮ್ಮ ಕುಟುಂಬಕ್ಕಾಗಿ ಸಮಯ ಕೊಡುವುದನ್ನು ಮರೆಯುವುದಿಲ್ಲ ಅಪ್ಪು. ಪತ್ನಿ ಮತ್ತು ಮಕ್ಕಳೊಡನೆ ಆಗಾಗ ಟ್ರಾವೆಲ್ ಮಾಡಿ ಹೊಸ ಜಾಗಗಳಿಗೆ ಹೋಗಿ ಎಂಜಾಯ್ ಮಾಡುತ್ತಾರೆ.
ಫ್ಯಾಮಿಲಿ ಜೊತೆ ಅಪ್ಪು ಅವರು ಟ್ರಾವೆಲ್ ಮಾಡುತ್ತಿರುವ ಹಲವಾರು ಫೋಟೋ ಮತ್ತು ವಿಡಿಯೋಗಳನ್ನು ನಾವು ಸೋಷಿಯಲ್ ಮೀಡಿಯಾಗಳಲ್ಲಿ ಕಂಡಿರುತ್ತೇವೆ. ನಮಗೆಲ್ಲ ತಿಳಿದಿರುವ ಹಾಗೆ ಅಪ್ಪು ಅವರು ಇರುವುದು ಬೆಂಗಳೂರಿನ ಸದಾಶಿವ ನಗರದಲ್ಲಿ. ರಾಘಣ್ಣನ ಕುಟುಂಬ ಮತ್ತು ಅಪ್ಪು ಕುಟುಂಬ ಜೊತೆಯಾಗಿ ವಾಸ ಮಾಡುತ್ತಾರೆ. ಈ ಮನೆಯಲ್ಲದೆ ಅಪ್ಪು ಅವರು ಹೊಸ ಮನೆಯೊಂದನ್ನು ಕಟ್ಟಿಸಿದ್ದಾರೆ. ಆ ಮನೆ ಹೇಗಿದೆ ? ಆ ಮನೆಯ ಬೆಲೆ ಎಷ್ಟು ? ಯಾವ ಸ್ಥಳದಲ್ಲಿ ಮನೆ ಇದೇ ಗೊತ್ತಾ! ಅದನ್ನು ತಿಳಿಯಲು ಮುಂದೆ ಓದಿ..

ತಮ್ಮ ಇಚ್ಛೆಗೆ ತಕ್ಕ ಹಾಗೆ ಹೊಸ ಮನೆಯನ್ನು ಕಟ್ಟಿಸಿದ್ದಾರೆ ಪುನೀತ್ ರಾಜಕುಮಾರ್. ಪುನೀತ್ ಅವರ ಪತ್ನಿ ಅಶ್ವಿನಿ ಅವರು ತಮ್ಮ ಇಷ್ಟದ ಹಾಗೆ ಇಡೀ ಮನೆಯನ್ನು ಅಚ್ಚುಕಟ್ಟಾದ ವಿನ್ಯಾಸದಲ್ಲಿ ನಿರ್ಮಿಸಿದ್ದಾರೆ. ಅಪ್ಪು ಅವರ ಹೊಸ ಮನೆ ಬಹಳ ಸುಂದರವಾಗಿದೆ. ಜೊತೆಗೆ ಆಧುನಿಕ ರೀತಿಯಲ್ಲಿ ಹೊಸ ಮನೆಯನ್ನು ಕಟ್ಟಿಸಿದ್ದಾರೆ. ಇನ್ನು ಅಪ್ಪು ಅವರನ್ನು ಅಭಿಮಾನಿಗಳು ಭೇಟಿ ಮಾಡಬೇಕೆಂದರೆ ಸದಾಶಿವ ನಗರದ ಮನೆಯಲ್ಲಿ ಭೇಟಿ ಮಾಡಬೇಕು. ತಮ್ಮನ್ನು ನೋಡಲು ಬರುವ ಅಭಿಮಾನಿಗಳನ್ನು ಬಹಳ ಪ್ರೀತಿಯಿಂದ ಮಾತನಾಡಿಸುತ್ತಾರೆ ಅಪ್ಪು. ಎಲ್ಲರೊಡನೆ ಬಹಳ ಪ್ರೀತಿ ವಿಶ್ವಾಸದಿಂದ ಇದ್ದಾರೆ.

ಪುನೀತ್ ರಾಜಕುಮಾರ್ ಅವರ ಈ ಹೊಸ ಮನೆಯು ಸಹ ಸದಾಶಿವನಗರದಲ್ಲೇ ಇದೆ. ಈ ಹೊಸ ಮನೆಯ ಬೆಲೆ ಬರೋಬ್ಬರಿ 15 ಕೋಟಿ ಎಂದು ಹೇಳಲಾಗಿದೆ. ಅಪ್ಪು ಅವರು ಆಗಾಗ ಈ ಹೊಸ ಮನೆಯಲ್ಲೇ ಕಾಲ ಕಳೆಯುತ್ತಾರೆ. ಅವರ ಹೊಸ ಮನೆಯನ್ನು ತುಂಬಾ ಆಧುನಿಕವಾಗಿ ಕಟ್ಟಿಸಿದ್ದಾರೆ ಪುನೀತ್ ರಾಜಕುಮಾರ್. ಪುನೀತ್ ರಾಜಕುಮಾರ್ ಅವರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಸ್ನೇಹಿತರೆ..