Advertisements

ನಿಮ್ಗೆಲ್ಲಾ ಅಪ್ಪು ಮಾಮಾ ಬಗ್ಗೆ ಒಂದು ಸಿಕ್ರೇಟ್ ಹೇಳ್ಬೆಕು! ಪುನೀತ್ ಬಗ್ಗೆ ವಿಜಯ್ ರಾಘವೇಂದ್ರ ಅವರು ಹೇಳಿದ್ದೇನು ಗೊತ್ತಾ?

Cinema

ನಮಸ್ಕಾರ ವೀಕ್ಷಕರೇ ಕನ್ನಡ ಸಿನಿ ಪ್ರಿಯರ ಪ್ರೀತಿಯ ಚಿನ್ನಾರಿ ಮುತ್ತು ವಿಜಯ ರಾಘವೇಂದ್ರ ಇದೀಗ ಕನ್ನಡ ಕಿರುತೆರೆಯ ಡ್ಯಾನ್ಸಿಂಗ್ ರಿಯಾಲಿಟಿ ಶೋ ಒಂದರಲ್ಲಿ ತೀರ್ಪುಗಾರರಾಗಿ ಮಿಂಚುತ್ತಿದ್ದಾರೆ. ಡ್ಯಾನ್ಸ್ ಕಾರ್ಯಕ್ರಮವಿರಲಿ ಅಥವಾ ಕಾಮಿಡಿ ಶೋ ಇರಲಿ ವಿಜಯ್ ಅಲ್ಲಿ ಇರಲೇಬೇಕೆಂದು ಪ್ರೇಕ್ಷಕರು ಹೇಳುತ್ತಿದ್ದಾರೆ ಬೆಳ್ಳಿತೆರೆ ಮತ್ತು ಕಿರುತೆರೆ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿರುವ ವಿಜಯ್ ರಾಘವೇಂದ್ರ ಅವರು ತಮಗೆ ಡ್ಯಾನ್ಸ್ ಜೊತೆಗೆ ಇರುವಂತಹ ಸಂಬಂಧದ ಬಗ್ಗೆ ಹಂಚಿಕೊಂಡಿದ್ದಾರೆ. ನಾನು ಬಾಲ್ಯದಿಂದಲೂ ಸಂಗೀತ ಮತ್ತು ನೃತ್ಯದ ಜೊತೆಗೆ ಬೆಳೆದಿರುವುದು ನಾನು ಖಂಡಿತವಾಗಿಯೂ ಪ್ರತಿಕ್ಷಣವು ಪುನೀತ್ ರಾಜಕುಮಾರ್ ಮಾಮ ಅವರನ್ನು ನೆನಪಿಸಿಕೊಳ್ಳಲು ಇಷ್ಟಪಡುತ್ತೇನೆ ಅವರು ನನ್ನ ಕಜಿನ್..

[widget id=”custom_html-5″]

Advertisements
Advertisements

ಬ್ರೇಕ್ ಡ್ಯಾನ್ಸ್ ಗೆ ನನ್ನನ್ನು ಪರಿಚಯಿಸಿ ಕೊಟ್ಟಿದ್ದೆ ಅಪ್ಪು ಅವರು
ಆವಾಗಿನಿಂದಲೂ ಸಂಗೀತ ಕೇಳಿದರೆ ನೃತ್ಯ ನೋಡಿದರೆ ನನ್ನ ದೇಹ ಹಾಗೆ ಸ್ವಿಂಗ್ ಮಾಡಲು ಶುರುಮಾಡುತ್ತದೆ. ನನ್ನ ಜರ್ನಿಯಲ್ಲಿ ಡ್ಯಾನ್ಸ್ ದೊಡ್ಡಪಾಲು ಪಡೆದುಕೊಳ್ಳುತ್ತದೆ ಎಂದು ವಿಜಯ್ ರಾಘವೇಂದ್ರ ಅವರು ಹೇಳಿಕೊಂಡಿದ್ದಾರೆ. ಸ್ಪರ್ಧಿಗಳು ಪುನೀತ್ ರಾಜಕುಮಾರ್ ಅವರ ಹಾಡಿಗೆ ಡ್ಯಾನ್ಸ್ ಮಾಡುವಾಗ ನಾನು ಅಪ್ಪು ಅವರನ್ನು ನೆನಪಿಸಿಕೊಳ್ಳುತ್ತೇನೆ. ಯಾವುದೇ ಎನರ್ಜಿ ಡ್ಯಾನ್ಸ್ ನೋಡಿದರೂ ನನಗೆ ಮೊದಲು ಅಪ್ಪು ಅವರೂ ನೆನಪಾಗುತ್ತಾರೆ ನಾನು ಅವರ ಹಾಡಿಗೆ ಹಲವಾರು ವೇದಿಕೆಗಳಲ್ಲಿ ಡ್ಯಾನ್ಸ್ ಮಾಡಿದ್ದೇನೆ ಅವರ ಜೊತೆ ಒಂದೇ ವೇದಿಕೆ ಮೇಲೆ ನಾನು ಡ್ಯಾನ್ಸ್ ಮಾಡಿರುವುದಕ್ಕೆ ತುಂಬಾನೇ ಸಂತೋಷವಿದೆ ಎಂದು ಹೇಳುತ್ತಾ ತಮ್ಮ ಜೀವನದ ಮರೆಯಲಾಗದ ಘಟನೆಯೊಂದು ವಿವರಿಸಿದ್ದಾರೆ.

[widget id=”custom_html-5″]

ಈ ಒಂದು ಘಟನೆ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ ದುಬೈನಲ್ಲಿ ನಾನು ಒಂದು ಅವಾರ್ಡ್ ಶೋ ಗೆ ನಿರೂಪಣೆ ಮಾಡಿದೆ. ಅಪ್ಪು ಮಾಮ ಅವರ ರಾಜಕುಮಾರ ಚಿತ್ರದ ಅಪ್ಪು ಡ್ಯಾನ್ಸ್ ಹಾಡಿನ ಸಿಗ್ನೇಚರ್ ಸ್ಟೆಪ್ ಕಲಿಯಬೇಕು ಎಂದು ನನಗೆ ಆಸೆ ಇತ್ತು. ಅಪ್ಪು ಮಾಮ ವೇದಿಕೆ ಮೇಲೆ ಬಂದಾಗ ಆ ಸಮಯವನ್ನು ನಾನು ಬಳಸಿಕೊಂಡು ಅವರಿಗೆ ಮನವಿ ಮಾಡಿಕೊಂಡೆ. ನನಗೆ ಆ ಸ್ಟೆಪ್ ಹೇಳಿಕೊಡಲು ಕೇಳಿಕೊಂಡೆ ಅಪ್ಪು ಅವರು ತುಂಬಾ ಹಂಬಾಲಾಗಿ ತಕ್ಷಣವೇ ಹೇಳಿಕೊಟ್ಟರು. ಅವರ ವಿಭಿನ್ನ ಸ್ಟೆಪ್ ಗಳನ್ನು ಮಾಡುವುದನ್ನು ನೋಡೋಕೆ ಖುಷಿಯಾಗುತ್ತದೆ.

[widget id=”custom_html-5″]

ಅವರು ಏನೇ ಹೇಳಿಕೊಟ್ಟರು ಅವರ ಎನರ್ಜಿ ಮ್ಯಾಚ್ ಮಾಡಿ ಡ್ಯಾನ್ಸ್ ಮಾಡಲು ಆಗುವುದಿಲ್ಲ ನೋಡಲು ಸುಲಭವೆನಿಸುತ್ತದೆ ಮಾಡುವಾಗ ಸ್ವಲ್ಪ ಕಷ್ಟ ಇರುತ್ತದೆ. ನಾನು ಸುಮ್ಮನೆ ನಿಂತು ಅವರ ಡ್ಯಾನ್ಸ್ ನೋಡುತ್ತಿದ್ದೆ ಎಂದು ವಿಜಯ್ ರಾಘವೇಂದ್ರ ಹೇಳಿದ್ದಾರೆ.ಅಪ್ಪು ಮಾಮ ಜೊತೆ ಕಳೆದ ಪ್ರತಿಯೊಂದು ಕ್ಷಣವನ್ನು ಜೀವನಪೂರ್ತಿ ನೆನಪಿಸಿಕೊಳ್ಳುವೆ. ಬಾಲ್ಯದಿಂದಲೂ ಅವರನ್ನು ನೋಡಿಕೊಂಡು ಬೆಳೆದಿರುವ ನಾನು ಪುಣ್ಯ ಮಾಡಿದ್ದೆ. ನಮ್ಮ ಜೊತೆ ಅವರು ಸ್ಪಿಸಿಕಲಿ ಇಲ್ಲ ಆದರೆ ರಿಮೆಂಬರ್ ಇಂಗ್ ಎಂದು ಬಳಸಲು ನನಗೆ ಇಷ್ಟವಿಲ್ಲ ಅವರನ್ನು ನೆನಪಿಸಿಕೊಳ್ಳದ ದಿನವೆ ಇಲ್ಲಾ ಅವರು ನಮ್ಮ ಜೊತೆ ಸದಾ ಇರುತ್ತಾರೆ ಎಂದು ವಿಜಯ್ ರಾಘವೇಂದ್ರ ಅವರು ಹೇಳಿದ್ದಾರೆ ಇದರ ಬಗ್ಗೆ ನಿಮ್ಮ ಅನಿಸಿಕೆ ಕಾಮೆಂಟ್ ಮೂಲಕ ತಿಳಿಸಿ..

[widget id=”custom_html-5″]