ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕರ್ನಾಟಕ ಯುವ ರತ್ನ ಯೂತ್ ಐಕಾನ್ ಯುವಕರ ಪಾಲಿನ ಸ್ಪೂರ್ತಿಯ ಚಿಲುಮೆ, ಅಪ್ಪಟವಾದ ಬಂಗಾರದಂತಹ ವ್ಯಕ್ತಿತ್ವ ನಿಷ್ಕಲ್ಮಶ ನಗು ಸಹಾಯಹಸ್ತ ಸಾಮಾಜಿಕ ಕಳಕಳಿ ಸಮಾಜಸೇವೆ ಅತಿ ಸರಳ ವ್ಯಕ್ತಿತ್ವ ಯಾರಿಗೂ ತಿಳಿಯದಂತೆ ಮಾಡುತ್ತಿದ್ದ.. ದಾನ ಧರ್ಮ ಇಂತಹ ಇನ್ನು ಹತ್ತಾರು ಗುಣಗಳಿಂದ ಕೂಡಿದ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡ ಕನ್ನಡಿಗರು ಇಂದಿಗೂ ಅಪ್ಪು ಅವರನ್ನು ನೆನಪಿಸಿಕೊಂಡು ಅಳುತ್ತಲೇ ಇದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಕಿರಿಯರಿಂದ ಹಿರಿಯರವರೆಗೂ ಎಲ್ಲಾ ವಯೋಮಾನದ ಅಭಿಮಾನಿಗಳನ್ನು ಹೊಂದಿರುವ ಕನ್ನಡದ ಏಕೈಕ ಪವರ್ ಸ್ಟಾರ್ ಎಂಬುದಕ್ಕೆ ಯಾವುದೆ ಅನುಮಾನವಿಲ್ಲ,
[widget id=”custom_html-5″]

ಇನ್ನು ಅಪ್ಪು ಸಣ್ಣ ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು. ಯಾರ ಮಕ್ಕಳೇ ಆಗಿರಲಿ ಬಡವ, ಶ್ರೀಮಂತ ಸೆಲೆಬ್ರಿಟಿ ಎನ್ನುವ ಯಾವುದೇ ಭೇದ ಭಾವವಿಲ್ಲದೆ ಎಲ್ಲರ ಮಕ್ಕಳ ಪುಟಾಣಿಗಳ ಜೊತೆ ಪ್ರೀತಿಯಿಂದ ಬೆರೆತು ತಾವು ಕೂಡ ಚಿಕ್ಕಮಗು ಆಗುತ್ತಿದ್ದರು. ಯಾರ ಮಕ್ಕಳೆ ಆದರೂ ಎತ್ತಿ ಮುದ್ದಾಡುತ್ತಿದ್ದರು. ಪ್ರೀತಿ ವಾತ್ಸಲ್ಯ ತೋರುತ್ತಿದ್ದರು.ಇದೇ ಕಾರಣಕ್ಕೆ ಅಪ್ಪು ಸಣ್ಣ ಮಕ್ಕಳಿಗೂ ತುಂಬಾ ಇಷ್ಟ ವಾಗಿದ್ದರು. ಅಪ್ಪು ಮಕ್ಕಳನ್ನು ಎಷ್ಟು ಇಷ್ಟಪಡುತ್ತಿದ್ದರು ಎಂಬುದಕ್ಕೆ ಅಪ್ಪು ಮಕ್ಕಳ ಜೊತೆ ಆತ್ಮೀಯವಾಗಿರುವ ಈ ಫೋಟೋಗಳು ಸಾಕ್ಷಿ ಎನ್ನಬಹುದು.
[widget id=”custom_html-5″]
