Advertisements

ಹೊಸ ತಂತ್ರಜ್ಞಾನದ ಮೂಲಕ ಡೈಲಾಗ್ ಹೊಡೆದ ಅಪ್ಪು…ಚಿಂದಿ ವಿಡಿಯೋ ನೋಡಿ

Cinema

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಹಾಗೂ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ರವರು ಪೂರ್ಣ ಪ್ರಮಾಣದ ನಾಯಕ ನಟನಾಗಿ ನಟಿಸಿದ ಕೊನೆಯ ಕನ್ನಡ ಸಿನಿಮಾ ಜೇಮ್ಸ್ ಅನ್ನು ಅದ್ಭುತವಾಗಿ ಗೆಲ್ಲಿಸಿದ್ದಾರೆ ಜನ. ಆದರೆ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆ ಸಿನಿಮಾ ಇದಲ್ಲ. ಪುನೀತ್ ರಾಜ್‌ಕುಮಾರ್ ನಟಿಸಿದ ಕೊನೆಯ ಸಿನಿಮಾ ಲಕ್ಕಿ ಮ್ಯಾನ್ ಈ ಸಿನಿಮಾ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗುತ್ತಿದೆ. ಜೇಮ್ಸ್ ನಂತರ ಈಗ ಮತ್ತೊಮ್ಮೆ ಪುನೀತ್ ರಾಜ್‌ಕುಮಾರ್ ಅವರನ್ನು ತೆರೆಯ ಮೇಲೆ ಕಣ್ತುಂಬಿಕೊಳ್ಳಬಹುದಾಗಿದೆ ಅಭಿಮಾನಿಗಳು. ಅದರೇ ಇದೇ ಕೊನೆಯಲ್ಲ ಇನ್ನು ಮುಂದೆ ಕೂಡ ಅಪ್ಪು ಸಿನಿಮಾಗಳು ತೆರೆಕಾಣಲಿವೆ. ಅದು ಹೇಗೆ ಅಂತೀರ? ಲೇಖನಿಯನ್ನ ಸಂಪೂರ್ಣವಾಗಿ ಓದಿ.

ಲಕ್ಕಿ ಮ್ಯಾನ್ ಚಿತ್ರ ದಲ್ಲಿ ಅಪ್ಪು ಜೊತೆ ತಮಿಳು ನಟ ಪ್ರಭುದೇವಾ ಕೂಡ ನಟಿಸಿದ್ದು ಹಾಡೊಂದರಲ್ಲಿ ಇವರಿಬ್ಬರೂ ಸಖತ್ ಸ್ಟೆಪ್ ಹಾಕಿದ್ದಾರೆ. ನಾನಾ ನೀನಾ ಎನ್ನುವ ಹಾಗೆ ಇಬ್ಬರೂ ಸೇರಿ ಸಿಗ್ನೇಚರ್ ಸ್ಟೆಪ್ಸ್ ಹಾಕಿ ಭರ್ಜರಿ ಡ್ಯಾನ್ಸ್ ಮಾಡಿರುವ ಈ ಹಾಡಿನ ಬಗ್ಗೆ ಭಾರಿ ನಿರೀಕ್ಷೆ ಇದ್ದು ಜಾನಿ ಮಾಸ್ಟರ್ ಅವರ ನೃತ್ಯ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡನ್ನು ಬೆಂಗಳೂರಿನಲ್ಲೇ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ. ಹೌದು ಇದೇ ಮೊದಲಬಾರಿಗೆ ಪುನೀತ್ ರಾಜಕುಮಾರ್ ಹಾಗೂ ಪ್ರಭುದೇವಾ ಅವರು ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರಲ್ಲದೆ ಅದ್ಭುತವಾದ ಹಾಡೊಂದರಲ್ಲಿ ಸಖತ್ ಸ್ಟೆಪ್ಸ್ ಹಾಕಿದ್ದಾರೆ.

ಪುನೀತ್ ರಾಜ್‌ಕುಮಾರ್ ಅಗಲಿದ ಬಳಿಕ ಬಿಡುಗಡೆ ಆಗುತ್ತಿರುವ ಅವರ ಎರಡನೇ ಸಿನಿಮಾ ಇದು.ಜೇಮ್ಸ್ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕ ನಟನಾಗಿ ಅಪ್ಪು ನಟಿಸಿದ್ದರು. ಆದರೆ ಲಕ್ಕಿ ಮ್ಯಾನ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಷ್ಟೆ ನಟಿಸಿದ್ದಾರೆ. ಅದೂ ದೇವರಾಗಿ. ಲಕ್ಕಿ ಮ್ಯಾನ್ ಹೊರತಾಗಿ ಪುನೀತ್ ರಾಜ್‌ಕುಮಾರ್ ಅವರ ಇನ್ನೊಂದು ಮಾಸ್ಟರ್ ಪೀಸ್ ತೆರೆಗೆ ಬರಬೇಕಿದೆ ಅದುವೇ ಗಂಧದ ಗುಡಿ ಇದು ಸಿನಿಮಾ ಅಲ್ಲ ಬದಲಿಗೆ ಡಾಕ್ಯುಸಿನಿಮಾ ಆಗಿದೆ. ಇದರಲ್ಲಿ ಪುನೀತ್ ರಾಜ್‌ಕುಮಾರ್ ಅವರು ಸ್ವತಃ ಪುನೀತ್ ರಾಜ್‌ಕುಮಾರ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ ತಿಂಗಳಲ್ಲಿ ತೆರೆಗೆ ಬರಲಿದೆ.

ಸದ್ಯ ಅಚ್ಚರಿಯ ವಿವಾರವೇನೆಂದರೆ ಇನ್ನುಮುಂದೆ ನಮ್ಮ ಸರಳತೆಯ ಸಾಮ್ರಾಟ ಪುನೀತ್ ರಾಜ್ ಕುಮಾರ್ ರವರನ್ನ ತೆರೆಯ ಮೇಲೆ ವಿ ಎಫ್ ಎಕ್ಸ್ ಮುಖಾಂತರ ನೋಡಬಹುದು ಎಂದು ಅಭಿಮಾನಿಗಳು ಸಂತಸ ಪಟ್ಟಿದ್ದಾರೆ. ಇನ್ನು ಜೆಮ್ಸ್ ಸಿನಿಮಾದಲ್ಲಿ ಈಗಾಗಲೇ ಅಪ್ಪು ಅವರ ಧ್ವನಿಯನಚನ್ನು ರೀಕ್ರಿಯೇಟ್ ಮಾಡಲಾಗಿತ್ತು. ಸದ್ಯ ಇದೀಗ ಪುನೀತ್ ರಾಜ್ ಕುಮಾರ್ ರವರು ನೈಜ್ಯವಾಗಿ ಕಾಣುವಂತೆ ವಿ ಎಫ್ ಎಕ್ಸ್ ಅನ್ನು ಎರಡು ಅಂತರರಾಷ್ಟ್ರೀಯ ವಿ ಎಫ್ ಎಕ್ಸ್ ಕಂಪನಿಗಳು ಸೇರಿ ಡೆವಲಂಪ್ ಮೆಂಟ್ ಮಾಡುತ್ತಿವೆ. ಇನ್ನು ಆ ವಿ ಎಫ್ ಎಕ್ದ್ ಕಂಪನಿ ಹೇಗೆ ಅಪ್ಪು ಅವರನ್ನ ಡೆವಲಂಪ್ ಮೆಂಟ್ ಮಾಡುತ್ತಿದೆ ಎಂಬುವ ವಿಡಿಯೋ ವನ್ನ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಮೂಲಕಗಳ ಪ್ರಕಾರ ಕೇವಲ 10 % ರೆಂಡರಿಂಗ್ ಆಗಿರುವ ವಿಡಿಯೋ ಇದಾಗಿದ್ದು ಮುಂದಿನ ವರುಷ ಮಾರ್ಚ್ 17 ಅಪ್ಪು ಅವರ ಹುಟ್ಟುಹಬ್ಬದಂದು ಅಪ್ಪು ವಿ ಎಫ್ ಎಕ್ಸ್ ಸಿನಿಮಾ ಬಿಡಿಗಡೆ ಮಾಡುವುದಾಗಿ ಈ ಕಂಪನಿ ಹೇಳಿಕೊಂಡಿದೆ.