Advertisements

ರಾರಾ ರಕ್ಕಮ್ಮ ಹಾಡಿಗೆ ಡ್ಯಾನ್ಸ್ ಮಾಡಿದ ಅಪ್ಪು! ಚಿಂದಿ ಡ್ಯಾನ್ಸ್ ನೋಡಿ!

Cinema

ಪುನೀತ್​ ರಾಜ್​ಕುಮಾರ್ ಇಲ್ಲ ಎಂಬ ನೋವನ್ನು ಅರಗಿಸಿಕೊಳ್ಳೋಕೆ ಇನ್ನೂ ಸಾಧ್ಯವಾಗುತ್ತಿಲ್ಲ. ಪವರಸ್ಟಾರ್ ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕನಟ. ಅಭಿಮಾನಿಗಳಿಂದ ಅಪ್ಪು ಎಂದೇ ಕರೆಯಿಸಿಕೊಳ್ಳುವ ಪುನೀತ್ ನಟನೆಯಲ್ಲದೇ ಹಿನ್ನಲೆ ಗಾಯಕರಾಗಿ ,ನಿರ್ಮಾಪಕರಾಗಿಯೂ ಪ್ರಸ್ತುತರು. ಸುಮಾರು ನಾಲ್ಕು ದಶಕಗಳ ತಮ್ಮ ಸಿನಿಜೀವನದಲ್ಲಿ ಬಾಲ ಕಲಾವಿದನಾಗಿ 14 ಮತ್ತು ನಾಯಕನಾಗಿ 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಬಹುಮುಖ ಪ್ರತಿಭೆ ಗಾಯಕನಾಗಿ ಸುಮಾರು ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಡಿರುವ ಪುನೀತ್, ಗಾಯನದಿಂದ ಬರುವ ಸಂಪೂರ್ಣ ಹಣವನ್ನು ಸಮಾಜಸೇವೆಗೆ ವಿನಿಯೋಗಿಸುತ್ತಾರೆ. ಕಿರುತೆರೆಯಲ್ಲಿ ನಿರೂಪಕರಾಗಿ ಕನ್ನಡದ ಕೋಟ್ಯಾಧಿಪತಿಯ ಎರಡು ಸೀಸನ್ಗಳನ್ನು ಮತ್ತು ಫ್ಯಾಮಿಲಿ ಪವರ್ ಎಂಬ ರಿಯಾಲಿಟಿ ಶೋಗಳನ್ನು ನಿರೂಪಿಸಿದ್ದಾರೆ. ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದ ಮೊಟ್ಟಮೊದಲ ಅತಿಥಿಯಾಗಿ ಭಾಗವಹಿಸಿದ್ದು ವಿಶೇಷ. ಚಿತ್ರ ನಿರ್ಮಾಪಕರಾಗಿ `ಕವುಲುದಾರಿ’, `ಮಯಾಬಜಾರ್’ ಎಂಬ ಚಿತ್ರಗಳನ್ನು ತಮ್ಮ ಹೋಮ್ ಬ್ಯಾನರ್ನಲ್ಲಿಯೇ ನಿರ್ಮಸಿರುವ ಪುನೀತ್ ತಮ್ಮ ಪ್ರೋಡಕ್ಸನ್ ಹೌಸ್ ಮೂಲಕ ಕಿರುತೆರೆ ಧಾರಾವಾಹಿ ಕೂಡ ನಿರ್ಮಿಸಿದ್ದಾರೆ.

ಮೈಸೂರಿನ ಶಕ್ತಿ ಧಾಮ ಆಶ್ರಮದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವ ಪುನೀತ್ `ಬೆಂಗಳೂರು ಪ್ರೀಮೀಯರ್ ಪುಟ್‌ಬಾಲ್ ತಂಡದ ಒಡೆತನವನ್ನು ಹೊಂದಿದ್ದಾರೆ. ಕೂಡ ಪ್ರಸ್ತುತರು. ಒಂದು ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಾಯಭಾರಿಯಾಗಿದ್ದರು. ಇಷ್ಟೇಲ್ಲ ಬಹುಮುಖ ಪ್ರತಿಭೆ ನಮ್ಮನಗಲಿದ್ದು ತುಂಬಲಾರದ ನಷ್ಟವಿದ್ದಂತೆ. 2021 ಆಕ್ಟೋಬರ್ 29 ರ ಬೆಳಿಗ್ಗೆ ಜಿಮ್ ಮಾಡುವಾಗ ಲಘು ಹೃದಯಾಘಾತದಿಂದ ಕುಸಿದು ಬಿದ್ದ ಪುನೀತ್, ಹತ್ತಿರದ ರಮಣಶ್ರೀ ಆಸ್ಪತ್ರೆಗೆ ದಾಖಲಾದರು. ತುರ್ತು ಚಿಕಿತ್ಸೆಯ ನಂತರ ಪುನೀತ್ ರನ್ನು ವಿಕ್ರಮ್ ಆಸ್ಪತ್ರೆಯ ತೀವ್ರ ನಿಘಾ ಘಟಕಕ್ಕೆ ದಾಖಲಾಯಿಸಿತು.

ಚಿಕಿತ್ಸೆ ಫಲಕಾರಿಯಾಗದೇ 11.45 ಘಂಟೆಯ ಸುಮಾರಿಗೆ ನಿಧನರಾದರು. ಕನ್ನಡ ಚಿತ್ರರಂಗದ ಟಾಪ್ ನಟನೊಬ್ಬ ತನ್ನ ಜೀವನ ಮತ್ತು ಸಿನಿ ಜೀವನದ ಉತ್ತುಂಗುದ ಕಾಲದಲ್ಲಿಯೇ ನಿಧನವಾಗಿದ್ದು ಕನ್ನಡ ಚಿತ್ರರಂಗದ ಪಾಲಿಗೆ ದುರ್ದೈವವೇ ಸರಿ. ಅವರು ನಮ್ಮನಗಲಿ ತುಂಬಾ ತಿಂಗಳೇ ಕಳೆದರೂ ಮರೆಯಲಾರದ ನೆನಪು ನೀಡಿದವರು. ಬಹುಶಃ ಅವರು ಬದುಕಿದ್ದರೆ ಇದಕ್ಕೆ ನರ್ತಿಸುತ್ತಿದ್ದರೇನೊ ಅದೇ ರೀತಿ ಓರ್ವ ಅಭಿಮಾನಿಯೂ ಅವರ ವೀಡಿಯೋ ಒಂದನ್ನು ಈ ಹಾಡಿಗೆ ಎಡಿಟ್ ಮಾಡಿದ್ದು ಅದೀಗ ಎಲ್ಲೆಡೆ ವೈರಲ್ ಆಗಿದೆ.

ರಾ ರಾ ರಕ್ಕಮ್ಮನೆಂದು ಅಪ್ಪು ಡ್ಯಾನ್ಸ್ ಮಾಡಿದ್ದಾರೆ. ಈ ವೀಡಿಯೋ ಅಪ್ಪು ನೃತ್ಯ ಮಾಡಿದ ತಮ್ಮದೇ ಸಿನೆಮಾ ವೀಡಿಯೋ ಆಗಿದ್ದು ಸಾಂಗ್ ಮಾತ್ಯ ರಾ ರಾ ರಕ್ಕಮ್ಮನದ್ದಾಗಿದೆ. ಹಾಗಿದ್ದರೂ ಅವರು ಹಾಕಿದ ಸ್ಟೆಪ್ ಈಗ ಫುಲ್ ವೈರಲ್ ಆಗಿದೆ‌. ಈ ಮೂಲಕ ಅಭಿಮಾನಿಗಳ ಪಾಲಿಗೆ ಒಂದು ಖುಷಿಯ ವೀಡಿಯೋ ಎನ್ನಬಹುದು. ವೀಡಿಯೋ ನೋಡಲು ಈ ಕೆಳಗಿನ ಲಿಂಕ್ ನೋಡಿ.