Advertisements

ಪುನೀತ್ ಅವರ 11 ನೇ ದಿನದ ಕಾರ್ಯದಂದೇ ಅಶ್ವಿನಿ ಅವರು ದೊಡ್ಡ ಕೆಲಸಕ್ಕೆ ಕೈ ಹಾಕಲಿದ್ದಾರೆ.. ಅದೇನು ಗೊತ್ತಾ?

Cinema

ನೋಡು ನೋಡುತ್ತಾ ಇದ್ದಂತ್ತೆಯೆ ಹತ್ತು ದಿನಗಳು ಕಳೆದು ಹೋದವು.ಕುಟುಂಬ ಮಾಡಬೇಕಾದ ಕಾರ್ಯಗಳನ್ನು ಮಾಡಲೆ ಬೇಕಿತ್ತು. ನೋವಿನ ಮುಂದೆ ಎಲ್ಲ ತಯಾರಿ ನಡಿತಿದೆ ಇನ್ನೂ ನಾಳೆ ಪುನೀತ್ ರಾಜ್ ಕುಮಾರ್ ಹನ್ನೊಂದನೆ ದಿನದ ಕಾರ್ಯ ನಡೆಯಲಿದ್ದು ಕುಟುಂಬ ಪುನೀತ್ ಅವರ ಪೂಜೆಗೆ ತಯಾರಿ ನಡೆಸುತ್ತಿದೆ.ಇನ್ನೂ ಮನೆಯಲ್ಲಿ ಪೂಜೆಗೆ ಬೇಕಾದ ತಿನಿಸುಗಳನ್ನ ಮಾಡಬೇಕಾದ ಕಾರಣ ಪುನೀತ್ ಸಹೋದರಿಯವರ ಕುಟುಂಬ ಹಾಗೂ ರಾಘಣ್ಣ ಶಿವಣ್ಣ ಅವರ ಕುಟುಂಬವೂ ಸಹ ಆಗಲೆ ಪುನೀತ್ ನಿವಾಸಕ್ಕೆ ಆಗಮಿಸಿದ್ದು. ಮಡಿಯಲ್ಲಿ ಪೂಜೆಗೆ ಸಕಲ ತಯಾರಿ ನಡೆಸುತ್ತಿದ್ದು ಪುನೀತ್ ಅವ್ರಿಗೆ ಇಷ್ಟವಾದಂತಹ ಅಡುಗೆಗಳನ್ನು ಮಾಡುತ್ತಿದ್ದಾರೆ. ಕ’ರೋ’ನ ಸಮಯದಲ್ಲಿ ಮುಖ್ಯಮಂತ್ರಿ ಪರಿಹಾರ ನಿದಿಗೆ ಐವತ್ತು ಲಕ್ಷ ಈ ವರ್ಷದ ಕಲಾವಿದರಿಗಾಗಿ ಹತ್ತು ಲಕ್ಷ.. ತಾವು ವಾಕ್ ಮಾಡುವ ಪಾರ್ಕ್ ಆಗಲಿ ಜಿಮ್ ಮಾಡುವ ಜಾಗವಾಗಲಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳಿಗಾಗಲಿ ಕ್ಯೆ ತುಂಬಾ ದಾನ ಮಾಡುವ ಪುಣ್ಯಾತ್ಮ ಎಲ್ಲಿಯೂ ಸಹ ಒಂದಿಷ್ಟು ಬಗ್ಗೆ ಪ್ರಚಾರ ಪಡಿಯುತ್ತಿರಲಿಲ್ಲ. ನಿಜ ಹೇಳ ಬೇಕಂದ್ರೆ ಅಣ್ಣ ಶಿವಣ್ಣ ಬಳಿ ಯಾವುದೇ ಪ್ರಚಾರವನ್ನು ಹಂಚಿಕೊಂಡಿರಲಿಲ್ಲ.

Advertisements
Advertisements

ಈ ಬಗ್ಗೆ ಇನ್ನೂ ಮೊನ್ನೆಯಷ್ಟೇ ಶಿವಣ್ಣ ಮಾತನಾಡಿ ನನ್ನ ತಮ್ಮನ ಬಗ್ಗೆ ನಿಜಕ್ಕೂ ಹೆಮ್ಮೆ ಇದೆ ಮತ್ತೊಬ್ಬರಿಗೆ ನೆರವಾಗಬೇಕಾಗಿರೋದು ಪ್ರತಿಯೊಬ್ಬರ ಕರ್ತವ್ಯ ಅಂದಿದ್ರು ಇನ್ನೂ ಇದರ ಬಗ್ಗೆ ಇದೀಗ ಪುನೀತ್ ಅವರ ಪತ್ನಿ ಅಶ್ವಿನಿಯವರು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.. ಹೌದು ಅಪ್ಪು ಇಲ್ಲವಾದ ಬಳಿಕ ಈ ಎಲ್ಲ ವಿಚಾರಗಳು ಹೊರಬಂದಾಗ ಆದಾಗಲೇ ಅಪ್ಪು ಮೇಲೆ ಗೌರವ ಸಾವಿರ ಪಟ್ಟು ಹೆಚ್ಚಾಯಿತು. ಅನೇಕರು ಅಪ್ಪುವಿನ ಕಾರ್ಯಕ್ಕೆ ಕೈಜೋಡಿಸಲು ಮುಂದಾದರು ತಮಿಳು ನಟ ವಿಶಾಲ್ ಅಪ್ಪು ವಿದ್ಯಾಭ್ಯಾಸ ನೀಡುತ್ತಿದ್ದ ಸಾವಿರ ಎಂಟನೂರು ವಿದ್ಯಾರ್ಥಿಗಳ ಜವಾಬ್ದಾರಿ ಇನ್ನುಮುಂದೆ ನನ್ನದು. ಇದು ನನ್ನ ಸ್ನೇಹಿತನಿಗೆ ನಾನು ನೀಡುವ ಗೌರವ ಎಂದಿದ್ದರು. ಅಷ್ಟೇ ಅಲ್ಲದೆ ಅನೇಕರು ಅಪ್ಪು ಕಾರ್ಯಕ್ಕೆ ಕೈಜೋಡಿಸುವುದಾಗಿ ತಿಳಿಸಿದರು ಆದರೆ ಇದರ ಬಗ್ಗೆ ಅಶ್ವಿನಿ ಅವರ ನಿರ್ಧಾರ ಬೇರೆಯೇ ಇದೆ..

ಹೌದು ಈ ಎಲ್ಲ ಕೆಲಸಗಳು ಅಪ್ಪು ತನ್ನ ಆತ್ಮ ತೃಪ್ತಿಗಾಗಿ ಮಾಡುತ್ತಿದ್ದ ಕೆಲಸಗಳು.. ಈ ಕೆಲಸಗಳು ಯಾವುದೇ ಸಮಯದಲ್ಲಿ ನಿಲ್ಲಬಾರದೆಂದು ಅದಾಗಲೇ ಎಂಟು ಕೋಟಿ ಇರುವ ಹಣವನ್ನ ಎಫ್ ಡಿ ಮಾಡಿದ್ದಾರೆ. ಅದರಿಂದ ಬಂದ ಹಣದಲ್ಲಿ ಎಲ್ಲ ಕೆಲಸಗಳನ್ನು ಮಾಡಿ ಸಂತೋಷಪಡುತ್ತಿದ್ದರು. ಎಲ್ಲಿಯೂ ಈ ವಿಚಾರಗಳು ಹೊರಗೆ ತಿಳಿಯಬಾರದೆಂದು ತಾಕೀತು ಮಾಡುತ್ತಿದ್ದರು. ಈಗ ಎಲ್ಲ ಕೆಲಸಗಳಿಗೆ ಕೈಜೋಡಿಸಲು ಮುಂದಾಗಿರುವವರಿಗೆ ಧನ್ಯವಾದಗಳು ಅರ್ಪಿಸಿರುವ ಅಶ್ವಿನಿ ಅವರು ತನ್ನ ಪತಿ ಆತ್ಮ ತೃಪ್ತಿಗಾಗಿ ಮಾಡುತ್ತಿದ್ದ ಕೆಲಸಗಳನ್ನ ತಾವೆ ಮುಂದುವರಿಸಿಕೊಂಡು ಹೋಗುವ ನಿರ್ಧಾರ ಮಾಡಿದ್ದಾರೆ.. ಕುಟುಂಬದವರ ಸಲಹೆ ಮೇರೆಗೆ ಅಪ್ಪು ಇಷ್ಟಪಟ್ಟು ಮಾಡುತ್ತಿದ್ದ ಎಲ್ಲ್ಯಾ ಕೆಲಸಗಳು ಸಹ ಹಾಗೆಯೆ ಮುಂದುವರೆಯಲಿದೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದು ಅಪ್ಪು ಮಾಡುತ್ತಿದ್ದ ಸಣ್ಣ ಕೆಲಸವನ್ನು ಕೈಬಿಡದೆ ಮುಂದುವರಿಸಿಕೊಂಡು ಹೋಗುವ ನಿರ್ಧಾರ ಮಾಡಿದ್ದಾರೆ..