Advertisements

ಮಗನಿಗಾಗಿ ತನ್ನ ಪ್ರಾಣವನ್ನೇ ಕೊಟ್ಟ ತಂದೆ.. ಪತ್ನಿಯ ಕಣ್ಣೆದುರೇ.. ನಿಜಕ್ಕೂ ಮನಕಲಕುತ್ತದೆ..

Kannada News

ಜೀವನದಲ್ಲಿ ಒಮ್ಮೊಮ್ಮೆ ಸಂತೋಷದ ಸಂಭ್ರಮದ ನೆನಪುಗಳನ್ನು ಕೊಡಬೇಕಾದ ಕ್ಷಣಗಳು ಕರಾಳ ನೆನಪುಗಳನ್ನು ಮರೆಯಲಾಗದ ನೋವುಗಳನ್ನು ಕೊಟ್ಟು ಬಿಡುತ್ತವೆ.. ಅಂತಹುದೇ ಒಂದು ಘಟನೆ ಇಲ್ಲಿ ನಡೆದಿದ್ದು ಮಗನಿಗಾಗಿ ತಂದೆ ತನ್ನ ಜೀವವನ್ನೇ ನೀಡಿರುವ ಘಟನೆ ನಡೆದಿದ್ದು ನಿಜಕ್ಕೂ‌ ಮನಕಲಕುವಂತಿದೆ.. ಹೌದು ಅಮ್ಮ ಎಂದರೆ ಭೂಮಿಯ ಮೇಲೆ ಯಾವುದಕ್ಕೂ ಹೋಲಿಕೆ ಮಾಡಲಾಗದ ಒಂದು ಅಮೂಲ್ಯವಾದ ಸಂಬಂಧ.. ತಾಯಿಯ ಪ್ರೀತಿಗೆ ಬೆಲೆ ಕಟ್ಟಲಾಗದು.. ತಾಯಿಯ ಪ್ರೀತಿ ತ್ಯಾಗ ಎಲ್ಲವೂ ಸಾಮಾನ್ಯವಾಗಿ ಮುನ್ನೆಲೆಗೆ ಬರುತ್ತದೆ.. ಆದರೆ ತಂದೆಯ ತ್ಯಾಗ ಕೆಲವೊಮ್ಮೆ ತೆರೆಯ ಹಿಂದೆ ಉಳಿಯುವಂತೆ ಮರೆಯಾಗಿಯೇ ಇರುತ್ತದೆ..

Advertisements
Advertisements

ಆದರೆ ಸಮಯ ಬಂದಾಗ ಆತ ಮಕ್ಕಳಿಗಾಗಿ ತನ್ನ ಕುಟುಂಬಕ್ಕಾಗಿ ಮಾಡುವ ತ್ಯಾಗ ಪಡುವ ಪರಿಶ್ರಮ ನಿಜಕ್ಕೂ ಊಹೆಗೂ ನಿಲುಕದ್ದು.. ಹೌದು ಇಲ್ಲೊಬ್ಬ ಪುಣ್ಯಾತ್ಮ ತಂದೆ ತನ್ನ ಮಗನಿಗಾಗಿ ತನ್ನ ಜೀವವನ್ನೇ ನೀಡಿರುವ ಘಟನೆ ನಡೆದಿದ್ದು ತನ್ನ ಕಣ್ಣೆದುರೇ ಗಂಡನನ್ನು ಕಳೆದುಕೊಂಡ ಆತನ ಪತ್ನಿಯ ಆಕ್ರಂದನ ಮುಗಿಲು ಮುಟ್ಟಿದೆ.. ಹೌದು ಇವರ ಹೆಸರು ಪುರುಷೋತ್ತಮ್.. ಆಂಧ್ರಪ್ರದೇಶದ ಕೊಡಗುಡೆಂ ಜಿಲ್ಲೆಯ ದಮ್ಮಪೇಟೆಯ ಭದ್ರಾದ್ರಿ ಕಕ್ಕಿರಾಳ ಪ್ರದೇಶದ ನಿವಾಸಿ.. ಇವರು ಹದಿಮೂರು ವರ್ಷದ ಹಿಂದೆ ಅಶ್ವರಪೇಟ ಮಂಡಲದ ನಾರಾಯಣ ಪುರದ ನಿವಾಸಿ ಸಂತೋಷಿನಿ ಎಂಬುವಬರನ್ನು ಮದುವೆಯಾಗಿದ್ದರು.. ಮದುವೆಯಾಗಿ ಹದಿಮೂರು ವರ್ಷ ಕಳೆದಿತ್ತು..

ಸಂತೋಷಿನಿ ಅವರು ಪುರುಷೋತ್ತಮ್ ಅವರ ಜೀವನಕ್ಕೆ ಬಂದ ನಂತರ ಹೆಸರಿಗೆ ತಕ್ಕಂತೆ ಅವರ ಜೀವನ ಸಂತೋಷದಿಂದ ತುಂಬಿತ್ತು.. ಇವರಿಗೆ ಮುದ್ದಾದ ಎರಡು ಮಕ್ಕಳೂ ಇದ್ದವು.. ಹನ್ನೆರೆಡು ವರ್ಷದ ದಿಲೀಪ್ ಹಾಗೂ ಹತ್ತು ವರ್ಷದ ದೀಪಕ್ ಎಂಬ ಇಬ್ಬರು ಮಕ್ಕಳಿದ್ದು ಸುಖ ಸಂಸಾರ ಅವರದ್ದಾಗಿತ್ತು.. ಮೊನ್ನೆಯಷ್ಟೇ ಪುರುಷೋತ್ತಮ್ ಹಾಗೂ ಸಂತೋಷಿನಿ ಅವರ ವಿವಾಹ ವಾರ್ಷಿಕೋತ್ಸವ ವಿತ್ತು.. ಈ ಸಂತೋಷದ ದಿನವನ್ನು ಮತ್ತಷ್ಟು ವಿಶೇಷವಾಗಿಸಲು ಆ ದಿನ ಪ್ರವಾಸಕ್ಕೆ ಹೋಗಲು ನಿರ್ಧರಿಸಿದ್ದರು..

ನಾಲ್ವರ ಈ ಪುಟ್ಟ ಕುಟುಂಬ ಸಂತೋಷವಾಗಿ ಸಮಯ ಕಳೆದು ವಿವಾಹ ವಾರ್ಷಿಕೋತ್ಸವ ಆಚರಿಸುವ ಸಲುವಾಗಿ ಪೂರ್ವ ಗೋದಾವರಿ ಜಿಲ್ಲೆಯ ಚಿಂತೂರು ವಲಯದ ಮೋಟುಗುಡೆಂ ಬಳಿಯ ಜಲಪಾತಕ್ಕೆ ತೆರಳಿದ್ದರು..ಜಲಪಾತದ ಕೆಳಗೆ ನಾಲ್ವರು ಸಂತೋಷವಾಗಿ ಕಾಲ ಕಳೆಯುತ್ತಿದ್ದರು.. ಸಂಭ್ರಮದ ಸವಿ ನೆನಪಾಗಿ ಉಳಿಯಬೇಕಾದ ಆ ದಿನ ಮರೆಯಲಾಗದ ನೋವಿನ ದಿನವಾಗಿ ಹೋಯ್ತು.. ಹೌದು ಸಂತೋಷದಿಂದ ಆಟವಾಡುತ್ತಿದ್ದ ಸಮಯದಲ್ಲಿ ಪುರುಷೋತ್ತಮ್ ಅವರ ದೊಡ್ಡ ಮಗ ದೀಪಕ್ ನೀರಿಗೆ ಬಿದ್ದಿದ್ದಾನೆ.. ತಕ್ಷಣ ನೀರಿಗಿಳಿದ ಪುರುಷೋತ್ತಮ್ ಮಗನನ್ನು ರಕ್ಷಣೆ ಮಾಡಿ ಪತ್ನಿ ಸಂತೋಷಿನಿ ಕೈಗೆ ಮಗನನ್ನು ನೀಡಿದ್ದಾರೆ..

ಆದರೆ ಮಗನನ್ನು ರಕ್ಷಣೆ ಮಾಡಿದ ಪುರುಷೋತ್ತಮ್ ಅವರಿಗೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.. ನೀರಿನ ರಭಸಕ್ಕೆ ನೀರಿನಿಂದ ಹೊರ ಬರಲಾಗದೇ ನೀರಿನ ಜೊತೆಯೇ ಹೊರಟು ಹೋದರು.. ಮಗನನ್ನು ರಕ್ಷಣೆ ಮಾಡಲು ತಮ್ಮ ಜೀವವನ್ನೇ ನೀಡಿ ಬಿಟ್ಟರು.. ಇತ್ತ ಮಗ ಉಳಿದನೆಂದು ಸಂತೋಷ ಪಡಬೇಕಿದ್ದ ಸಂತೋಷಿನಿ ಅವರು ತಮ್ಮ ಕಣ್ಣೆದುರೆ ಗಂಡನನ್ನು ಕಳೆದುಕೊಂಡು ಬಿಟ್ಟರು.. ತಮ್ಮ ಜೀವನಕ್ಕೆ ಕಾಲಿಟ್ಟು ಹೊಸ ಜೀವನ ರೂಪಿಸಿಕೊಂಡಿದ್ದ ಮದುವೆಯ ದಿನವೇ ಗಂಡನನ್ನು ಕಳೆದುಕೊಳ್ಳುವಂತಹ ನೋವು ಯಾರಿಗೂ ಬೇಡ ಎನ್ನುವಂತಾಗಿತ್ತು.. ವಿಚಾರ ತಿಳಿದ ಸ್ಥಳೀಯರು ಎರಡು ಗಂಟೆಗಳ ಕಾಲ ಸತತವಾಗಿ ಕಾರ್ಯಚರಣೆ ನಡೆಸಿ ಪುರುಷೋತ್ತಮ್ ರನ್ನು ಹೊರ ತೆಗೆದಿದ್ದಾರೆ..

ಸ್ನೇಹಿತರೆ ಈ ವೀಡಿಯೋ ನೋಡಿ ಯುಟ್ಯೂಬ್ ಚಾನಲ್ ಅನ್ನು ದಯವಿಟ್ಟು Subscribe ಮಾಡಿ..

ತಾನು ಉಳಿಯೋದಿಲ್ಲ ಎನ್ನುವುದು ತಿಳಿದಿದ್ದರೂ ಸಹ ಅದನ್ನು ಲೆಕ್ಕಿಸದೇ ಮಗನನ್ನು ನೀರಿನಿಂದ ರಕ್ಷಿಸಿ ತಾನು‌ ನೀರಿನ ಜೊತೆಯೇ ಹೊರಟುಬಿಟ್ಟು ಮಹಾನ್ ತ್ಯಾಗ ಮಾಡಿದರು.. ನಿಜಕ್ಕೂ ತಂದೆ ಎನ್ನುವ ಪದ ಮಕ್ಕಳ‌ ಜೀವನದ ಒಂದು ಶಕ್ತಿ‌ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.. ಆದರೆ ಸಂತೋಷದ ದಿನ ಈ ರೀತಿ ನೋವಿನ ದಿನವಾದದ್ದನ್ನು ಜೀವನ ಪೂರ್ತಿ ಅನುಭವಿಸುತ್ತಲೇ ಜೀವನ ಸಾಗಿಸಬೇಕಿದ್ದು ನಿಜಕ್ಕೂ ಆ ಕುಟುಂಬವನ್ನು ನೆನೆದರೆ ಸಂಕಟವಾಗುತ್ತದೆ.. ಆ ಕುಟುಂಬಕ್ಕೆ ಇದೆಲ್ಲವನ್ನೂ ತಡೆಯುವ ಧೈರ್ಯ ನೀಡಲಿ ಅಷ್ಟೇ.. ಮತ್ತಿನ್ನೇನನೂ ಹೇಳಲಾಗದು..