Advertisements

ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಉಮಾಶ್ರೀ ಅವರಿಗೆ ಒಂದು ದಿನಕ್ಕೆ ಕೊಡುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

Cinema Entertainment

ಪುಟ್ಟಕ್ಕನ ಮಕ್ಕಳು ಸದ್ಯ ಕನ್ನಡ ಕಿರುತೆರೆಯಲ್ಲಿ ಈ ವಾರವಷ್ಟೇ ಪ್ರಸಾರ ಶುರು ಮಾಡಿ ಯಶಸ್ವಿಯಾಗಿ 5 ಸಂಚಿಕೆಗಳನ್ನು ಪೂರ್ತಿಗೊಳಿಸಿದೆ. ಸದ್ಯ ಸಾಕಷ್ಟು ವಿಶೇಷತೆಗಳಿಂದ ಜನರ ಮನಗೆದ್ದ ಪುಟ್ಟಕ್ಕನ ಮಕ್ಕಳು ಇದೀಗ ಮತ್ತೊಂದು ವಿಚಾರದಲ್ಲಿ ಸುದ್ದಿಯಾಗಿದೆ . ಪುಟ್ಟಕ್ಕನ ಮಕ್ಕಳು ಧಾರಾವಾಹಿಗಾಗಿ ಹಿರಿಯ ನಟಿ ಉಮಾಶ್ರೀ ಅವರಿಗೆ ನೀಡುತ್ತಿರುವ ಸಂಭಾವನೆ ಎಷ್ಟು ಅಂತ ತಿಳಿದ್ರೆ ನಿಜಕ್ಕೂ ಆಶ್ಚರ್ಯವಾಗುತ್ತೆ ನೋಡಿ, ಜೀ ಕನ್ನಡ ವಾಹಿನಿಯಲ್ಲಿ ಸಾಲು ಸಾಲು ಸೂಪರ್ ಹಿಟ್ ಧಾರಾವಾಹಿಗಳು ಪ್ರಸಾರವಾಗುತ್ತಿದ್ದು ಆ ಸಾಲಿಗೆ ಇದೀಗ ಪುಟ್ಟಕ್ಕನ ಮಕ್ಕಳು ಸೇರಿದೆ ಜೊತೆ ಜೊತೆಯಲಿ ನಿರ್ದೇಶಕರಾದ ಆರೂರು ಜಗದೀಶ್ ಅವರೇ ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಿದ್ದು ಇತ್ತ ನಿರ್ಮಾಣದ ಜವಾಬ್ದಾರಿಯನ್ನು ಸಹ ಅವರದ್ದೇ, ಜೆಎಸ್ ಪ್ರೋಡಕ್ಷನ್ ಸಂಸ್ಥೆ ವಹಿಸಿಕೊಂಡಿದೆ..

[widget id=”custom_html-3″]

Advertisements
Advertisements

ಇತ್ತೀಚಿನ ದಿನಗಳಲ್ಲಿ ನಿರ್ದೇಶಕರು ಅಥವಾ ಧಾರಾವಾಹಿಯ ಹೀರೋಗಳೆ ನಿರ್ಮಾಣ ಸಂಸ್ಥೆಯನ್ನು ನಡೆಸುತ್ತಿದ್ದು ತಮ್ಮ ತಮ್ಮ ಧಾರಾವಾಹಿಗೆ ಬೇಕಾದ ಪ್ರೀತಿಯಲ್ಲಿ ಹಣ ವಿನಿಯೋಗ ಮಾಡಿ ಲಾಭ ಪಡೆಯುತ್ತಿದ್ದಾರೆ. ಇನ್ನು ಇತ್ತ ಸಂಭಾವನೆ ವಿಚಾರಕ್ಕೆ ಬಂದರೆ ನಿರ್ದೇಶಕ ಆರೂರು ಜಗದೀಶ್ ಅವರದ್ದೆ ನಿರ್ಮಾಣವಾದ್ದರಿಂದ ಈ ಹಿಂದೆಯೂ ಸಹ ಅನಿರುದ್ಧ್ ಅವರಿಗೆ ಒಂದು ದಿನಕ್ಕೆ ಮೂವತ್ತೈದು ಸಾವಿರ ರೂಪಾಯಿ ದುಬಾರಿ ಸಂಭಾವನೆ ಕೊಟ್ಟು ಸುದ್ದಿಯಾಗಿತ್ತು. ಆಗ ಕಿರುತೆರೆಗೆ ಅದೇ ಹೆಚ್ಚಿನ ಸಂಭಾವನೆ ಆಗಿತ್ತು. ಇನ್ನು ಇದೀಗ ಅದೆಲ್ಲವನ್ನೂ ಮೀರಿ ಸಂಭಾವನೆ ವಿಚಾರದಲ್ಲಿ ಎಲ್ಲ ಕಿರುತೆರೆಯ ಖ್ಯಾತ ಹೀರೋಗಳನ್ನು
ಹಿಂದಿಕ್ಕಿದ್ದಾರೆ ನಮ್ಮ ಪುಟ್ಟಕ್ಕ ಹೌದು ಪುಟ್ಟಕ್ಕ ನಿಗೆ ಎಲ್ಲಾ ನಟ ನಟಿಯರಿಗಿಂತ ಅತಿ ಹೆಚ್ಚು ಸಂಭಾವನೆ ನೀಡಲಾಗುತ್ತಿದೆ. ಹೌದು ಇವರಿಗೆ ಎಲ್ಲರ ರೀತಿಯ ದಿನದ ಸಂಭಾವನೆಯನ್ನು ನೀಡಲಾಗುತ್ತಿದ್ದು ಒಂದು ದಿನಕ್ಕೆ ಬರೋಬ್ಬರಿ 45 ಸಾವಿರ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ.

[widget id=”custom_html-3″]

ಧಾರವಾಹಿಯಲ್ಲಿ ಉಮಾಶ್ರೀಯವರ ಪರಕಾಯ ಪ್ರವೇಶದ ನಟನೆ ನೋಡೋದೆ ಒಂದು ರೀತಿಯ ಆನಂದ ಅವರ ನಟನೆ ನೋಡಿ ಸ್ವತಹ ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್ ಅವರೆ ನಿಬ್ಬೆರಗಾಗಿದ್ದರಂತೆ. ಇನ್ನು ಇಂತಹ ದೊಡ್ಡ ನಟಿ ಕಿರುತೆರೆಗೆ ಬಂದಿದ್ದು ಸದ್ಯ ಅವರಿಗೆ ತಕ್ಕಂತೆ ಸಂಭಾವನೆ ನೀಡಲಾಗುತ್ತಿದೆ. ಇನ್ನು ಧಾರಾವಾಹಿ ಶುರುವಿನಲ್ಲಿ ತಿಂಗಳಲ್ಲಿ
20 ರಿಂದ 25 ದಿನಗಳ ಕಾಲ ಚಿತ್ರೀಕರಣ ವಿರುತ್ತದೆ. ನಂತರದಲ್ಲಿ ಸಂಚಿಕೆಗಳ ಬ್ಯಾಂಕಿಂಗ್ ಆದ ಬಳಿಕ
ಹದಿನೈದರಿಂದ ಇಪ್ಪತ್ತು ದಿನಗಳ ಕಾಲ ದಾರವಾಹಿ ಚಿತ್ರೀಕರಣವಿದ್ದ ತಿಂಗಳಿಗೆ ಅಂದಾಜು 9 ರಿಂದ ಹತ್ತು ಲಕ್ಷ ರೂಪಾಯಿ ಸಂಭಾವನೆಯನ್ನು ಉಮಾಶ್ರೀ ಅವರಿಗೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ

[widget id=”custom_html-3″]