Advertisements

ಮುಖ ಮುಚ್ಚಿಕೊಂಡು ಯಾರಿಗೂ ತಿಳಿಯದಂತೆ ಆ ಒಂದು ಗೌಪ್ಯ ಸ್ಥಳಕ್ಕೆ ಒಬ್ಬಂಟಿಯಾಗಿ ಹೋಗಿ ಬಂದ ನಟಿ ರಚಿತಾ ರಾಮ್! ಅಬ್ಬಬ್ಬಾ ಆ ಸ್ಥಳ ಯುವುದು ಗೊತ್ತಾ?

Kannada News

ಸದ್ಯಕ್ಕೆ ಸ್ಯಾಂಡಲ್ ವುಡ್’ನಲ್ಲಿ ಬಹುಬೇಡಿಕೆಯ ನಟಿ ಅಂದರೆ ಅದು ಡಿಂಪಲ್ ಕ್ವೀನ್ ರಚಿತಾ ರಾಮ್. ತನ್ನ ಮುದ್ದಾದ ನಗುವಿನಿಂದಲೇ ಹುಡುಗರ ಮನಕದ್ದಿರುವ ಚೆಲುವೆ ಅಂದರೆ ಅದು ರಚಿತಾ ರಾಮ್. ಇವರ ಮೂಲ ಹೆಸರು ಬಿಂದ್ಯಾ ರಾಮ್. ಮೊತ್ತ ಮೊದಲು ಕನ್ನಡದ ಕಿರುತೆರೆಯ ಅರಸಿ ಧಾರವಾಹಿಯಲ್ಲಿ ನಟಿಸಿದ್ದರು. ಆ ನಂತರ ಅವರು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು ದರ್ಶನ್ ಅವರ ಬುಲ್ ಬುಲ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಆಮೇಲೆ ದಿಲ್ ರಂಗೀಲಾ, ಅಂಬರೀಶಾ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗದ ಅಭು ಬೇಡಿಕೆಯ ನಟಿಯಾಗಿ ಮಿಂಚಿದ್ದರು.

Advertisements
Advertisements

ಇತ್ತೀಚೆಗೆ ಏಕ್ ಲವ್ ಯಾ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ, ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕ್ ಅನ್ನುವ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದ ರಚಿತಾ ರಾಮ್ ಕೈಯಲ್ಲಿ 14 ಕ್ಕೂ ಹೆಚ್ಚು ಸಿನಿಮಾಗಳಿವೆ. ಬ್ಯಾಡ್ ಮ್ಯಾನರ್ಸ್, ಕ್ರಾಂತಿ, ಮಾನ್ಸೂನ್ ರಾಜ, ವೀರಂ, ಲಿಲ್ಲಿ, ಲವ್ ಮಿ ಆರ್ ಹೇಟ್ ಮಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ರಚಿತಾ ರಾಮ್ ಬ್ಯುಸಿ ಆಗಿದ್ದಾರೆ. ಸದ್ಯಕ್ಕೆ ನಿನಾಸಂ ಸತೀಶ್ ಅವರ ಜೊತೆ ಮ್ಯಾಟ್ನಿ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಈ ನಡುವೆ ರಚಿತಾ ರಾಮ್ ಅವರು ಇದ್ದಕ್ಕಿದ್ದಂತೆ ಮುಖಕ್ಕೆ ಕಪ್ಪು ಬಟ್ಟೆ ಧರಿಸಿ ಎಲ್ಲಿಗೋ ಹೋಗಿದ್ದಾರೆ.

ಹೌದು, ರಚಿತಾ ರಾಮ್ ಅವರು ದೊಡ್ಡ ಆಂಜನೇಯ ಭಕ್ತೆ. ಹೀಗಾಗಿ ಅವರು ತಮ್ಮ ಗೆಳೆಯರಾದ ನಿರ್ದೇಶಕ ಮಯೂರ್ ರಾಘವೇಂದ್ರ ಜೊತೆ ಬೆಂಗಳೂರಿನ ಗಿರಿನಗರದಲ್ಲಿರುವ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನಕ್ಕೆ ಹೋಗಿದ್ದಾರೆ. ಅಲ್ಲಿ ತನ್ನ ಪರಿಚಯ ಯಾರಿಗೂ ಆಗಬಾರದು, ಗೊತ್ತಾದರೆ ಜನ ಮುಗಿ ಬೀಳ್ತಾರೆ ಎಂದು ರಚಿತಾ ರಾಮ್ ಅವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರು. ಅಲ್ಲಿ ಆಂಜನೇಯನ ದೊಡ್ಡ ಮೂರ್ತಿ ಮುಂದೆ ಸೆಲ್ಫಿ ತೆಗೆದುಕೊಂಡಿರುವುದನ್ನು ರಚಿತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಆ ನಂತರ ಗಾಂಧಿ ಬಜಾರ್ ನಲ್ಲಿರುವ ವಿದ್ಯಾರ್ಥಿ ಭವನದಲ್ಲಿ ದೋಸೆ ತಿನ್ನಲು ಹೋಗಿದು, ಅಲ್ಲಿಯೂ ಫೋಟೋ ತೆಗೆದಿರೋದನ್ನು ಶೇರ್ ಮಾಡಿದ್ದಾರೆ. ದೊಡ್ಡ ನಟಿಯಾಗಿದ್ದರೂ ಸಿಂಪಲ್ ಲೈಫ್ ಇಷ್ಟ ಪಡುವ ರಚಿತಾ ರಾಮ್ ಅವರು ಜನರಿಗೆ ಇಷ್ಟವಾಗುವುದೇ ಈ ಕಾರಣಕ್ಕೆ. ಇನ್ನು ರಚಿತಾ ಅವರು ಇದೇ ಮೊದಲಲ್ಲ, ಹಲವು ಬಾರಿ ಮುಖಕ್ಕೆ ಸ್ಕಾರ್ಫ್ ಕಟ್ಟಿಕೊಂಡು ನಗರದಲ್ಲಿ ಓಡಾಡಿದ್ದಾರೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.