Advertisements

ಮಗು ಆಗುವ ವಿಚಾರವನ್ನೂ ಮೊದಲೇ ಹೇಳಿದ್ರು.. ಎಲ್ಲಾ ವಿಚಾರ ಬಿಚ್ಚಿಟ್ಟ ರಾಧಿಕಾ ಕುಮಾರಸ್ವಾಮಿ..

Cinema

ಯುವರಾಜ್.. ಸದ್ಯ ಇಂದು ಭಾರಿ ಸದ್ದು ಮಾಡುತ್ತಿರುವ ವಿಚಾರದಲ್ಲಿ ಕೇಳಿ ಬರುತ್ತಿರುವ ಹೆಸರು.. ಹೌದು ರಾಜಕಾರಣಿಗಳ ಹೆಸರಿನಲ್ಲಿ ಮೋಸ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಪೊಲೀಸರು ವಶಕ್ಕೆ ಪಡೆದಿರುವ ಯುವರಾಜ್ ಎಂಬುವವರಿಂದ ನಟಿ ರಾಧಿಕಾ ಕುಮಾರಸ್ವಾಮಿ ಅವರ ಖಾತೆಗೆ ಒಂದೂ ಕಾಲು ಕೋಟಿ ಹಣ ವರ್ಗಾವಣೆ ಮಾಡಿದ್ದಾರೆಂಬ ವಿಚಾರ ಹೊರ ಬಂದಿದೆ.. ವಿಚಾರ ದೊಡ್ಡ ಸುದ್ದಿಯಾಗುತ್ತಿದ್ದಂತೆ ರಾಧಿಕಾ ಕುಮಾರಸ್ವಾಮಿ ಅವರು ಇಂದು ಸುದ್ದಿ ಗೋಷ್ಠಿ ನಡೆಸಿ ಎಲ್ಲಾ ವಿಚಾರವನ್ನು ಬಿಚ್ಚಿಟ್ಟಿದ್ದಾರೆ..

ಹೌದು ರಾಧಿಕಾ ಕುಮಾರಸ್ವಾಮಿ ಅವರಿಗೂ ಹಾಗೂ ಯುವರಾಜ್ ಅವರಿಗೂ ಸಂಭದವಿದೆ ಎಂದು ಸುದ್ದಿಯಾಗುತ್ತಿದ್ದಂತೆ ತಮ್ಮ ಹಾಗೂ ಯುವರಾಜ್ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.. ಹೌದು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ರಾಧಿಕಾ ಕುಮಾರಸ್ವಾಮಿ ಅವರು ಯುವರಾಜ್ ಅವರು ನನಗೆ ಹದಿನೇಳು ವರ್ಷದಿಂದ ಪರಿಚಯ.. ನಮ್ಮ ತಂದೆಯ ಕಾಲದಿಂದಲೂ ಅವರನ್ನು ನೋಡುತ್ತಿದ್ದೇವೆ..

ಬಹಳಷ್ಟು ವಿಚಾರಗಳಲ್ಲಿ ಅವರು ಹೇಳಿದಂತೆಯೇ ಆಗಿದೆ.. ನಮ್ಮ ತಂದೆಯ ಕೊನೆಯ ದಿನಗಳ ಬಗ್ಗೆಯೂ ನಮಗೆ ಎಚ್ಚರಿಕೆ ನೀಡಿ ಪೂಜೆಯೊಂದನ್ನು ಮಾಡಲು ತಿಳಿಸಿದ್ದರು.. ಆದರೆ ನಾವು ಆ ಪೂಜೆ ಮಾಡಿರಲಿಲ್ಲ.. ಈಗಲೂ ಅದರ ಬಗ್ಗೆ ಯೋಚಿಸುತ್ತೇವೆ.. ಪೂಜೆ ಮಾಡಿದ್ದರೆ ನಮ್ಮ ತಂದೆ ಉಳಿಯುತ್ತಿದ್ದರೇನೋ ಎಂದು.. ನನಗೆ ಹೆಣ್ಣು ಮಗು ಆಗುವ ವಿಚಾರವನ್ನೂ ಸಹ ಅವರು ಹೇಳಿದ್ದರು..

ಇನ್ನು ಹಣ ಕಾಸಿನ ವಿಚಾರಕ್ಕೆ ಬಂದರೆ.. ನನ್ನ ಖಾತೆಗೆ ಹಣ ಬಂದಿರುವುದು ನಿಜ.. ಯುವರಾಜ್ ಅವರ ಹೆಂಡತಿ ಹೆಸರಿನಲ್ಲಿ ಪ್ರೊಡಕ್ಷನ್ ಹೌಸ್ ಇದೆ.. ಸಿನಿಮಾ ಮಾಡುವ ಸಲುವಾಗಿ ನನಗೆ ಮುಂಗಡವಾಗಿ ಹದಿನೈದು ಲಕ್ಷ ಹಣ ನೀಡಿದ್ದರು.. ಅದನ್ನು ಬಿಟ್ಟು ಬೇರೆ ಯಾವ ಹಣವೂ ಅವರಿಂದ ಬಂದಿಲ್ಲ.. ಅದಾದ ಬಳಿಕ ಸಿನಿಮಾ ನಿರ್ಮಾಪಕರೊಬ್ಬರು ಸಿನಿಮಾ ಮಾಡುವ ಸಲುವಾಗಿ ಅರವತ್ತು ಲಕ್ಷ ಹಣ ಹಾಕಿದ್ದರು.. ಎರಡೂ ಸೇರಿ ಎಪ್ಪತ್ತೈದು ಲಕ್ಷ ಹಣ ನನ್ನ ಖಾತೆಗೆ ಬಂದಿದೆ.. ನನಗೆ ಮುಂಗಡವಾಗಿ ಹಣ ನೀಡಿರುವುದಕ್ಕೆ ನಾವು ಯಾವುದೇ ಅಗ್ರಿಮೆಂಟ್ ಮಾಡಿಕೊಂಡಿಲ್ಲ.. ಇದುವರೆಗೂ ನಾನು ಯಾವುದೇ ಸಿನಿಮಾದಲ್ಲಿಯೂ ಸಹ ಅಗ್ರಿಮೆಂಟ್ ಮಾಡಿಕೊಂಡು ಸಿನಿಮಾ ಮಾಡಿಲ್ಲ.. ಅದೇ ರೀತಿ ಯುವರಾಜ್ ಅವರ ಜೊತೆಯೂ ಬಾಯಿ ಮಾತಲ್ಲೇ ಮಾತನಾಡಿ ಅಡ್ವಾನ್ಸ್ ಹಣ ತೆಗೆದುಕೊಂಡಿದ್ದೇನೆ..

ಇನ್ನು ರಾಜಕಾರಣಿಗಳನ್ನು ಭೇಟಿ ಮಾಡುವ ವಿಚಾರಕ್ಕೆ ಬಂದರೆ.. ನಾನು ಸಿನಿಮಾ ಸಂಬಂಧಪಟ್ಟ ವಿಚಾರವಾಗಿ ರಾಜಕಾರಣಿಗಳ‌ನ್ನು ಭೇಟಿ ಮಾಡಿರುವುದು ನಿಜ… ಇನ್ನು ನನಗೆ ಉಳಿದ 60 ಲಕ್ಷ ಹಣ ಯಾರು ಹಾಕಿದ್ದಾರೆ ಎಂಬುದು ಸಹ ಗೊತ್ತಿಲ್ಲ.. ಕಳೆದ ವರ್ಷ 2019 ರಲ್ಲಿ ಮಾರ್ಚ್ ತಿಂಗಳಿನಲ್ಲಿ ನನ್ನ ಖಾತೆಗೆ ಅರವತ್ತು ಲಕ್ಷ ಹಣವನ್ನು ಹಾಕಿದ್ದಾರೆ ಎಂದಿದ್ದಾರೆ..

ಅಷ್ಟೇ ಅಲ್ಲದೇ ಯುವರಾಜ್ ಅವರ ಬಗ್ಗೆ ಮಾತನಾಡಿ ಅವರು ಹೇಳಿದ್ದೆಲ್ಲಾ ನನ್ನ ಜೀವನದಲ್ಲಿ ನಿಜವಾಗಿದೆ.. ನನ್ನ ಜೀವನದಲ್ಲಿ ಹೀಗೀಗೆ ಆಗತ್ತೆ ಎಂದಿದ್ದರು.. ಅದೇ ರೀತಿ ಆಗಿದೆ.. ನನಗೆ ಹೆಣ್ಣು ಮಗು ಆಗುವ ವಿಚಾರವನ್ನೂ ಸಹ ಮುಂಚೆಯೇ ತಿಳಿಸಿದ್ದರು.. ಅದು ನಿಜವಾಯಿತು.. ಅಷ್ಟೇ ಅಲ್ಲದೇ ಈ ಡಿಸೆಂಬರ್ ನಲ್ಲಿ ನಿಮ್ಮ ಸಮಯ ಸರಿ ಇಲ್ಲ ಎಂದಿದ್ದರು.. ಈಗ ನೋಡಿದ್ರೆ ಈ ರೀತಿ ಆಗಿದೆ.. ಫೆಬ್ರವರಿ ನಂತರ ಶುಕ್ರದೆಸೆ ಬರಲಿದೆ ಎಂದಿದ್ರು.. ಆದರೆ ಅವರಿಂದಲೇ ಈರೀತಿ ಆಗತ್ತೆ ಅಂತ ಅಂದುಕೊಂಡಿರಲಿಲ್ಲ ಎಂದಿದ್ದಾರೆ.. ಜೀವನದಲ್ಲಿ ಈವರೆಗೆ ನಮಗೆ ಮೋಸ ಆಗಿದೆಯೋ ಹೊರತು ನಾವು ಯಾರಿಗೂ ಇದುವರೆಗೂ ಮೋಸ ಮಾಡಿಲ್ಲ ಎಂದು ರಾಧಿಕಾ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ