Advertisements

ಗುಲಾಬಿ ಬಣ್ಣದ ಸೀರೆಯಲ್ಲಿ ಮಿಂಚಿದ ನಟಿ ರಾಧಿಕಾ ಕುಮಾರಸ್ವಾಮಿ.!ಹುಚ್ಚೆದ್ದು ಕುಣಿಯುವಂತಿದೆ ವಿಡಿಯೋ..

Kannada News

ಸಿನಿಮಾರಂಗ ಅಂದ್ರೆ ಹಾಗೇನೇ, ಯಾವಾಗ ಯಾವ ಸ್ಟಾರ್ ನಟ ನಟಿಯರು ಹೆಚ್ಚು ಬೆಳಕಿಗೆ ಬರುತ್ತಾರೆ ಎಂಬುದಾಗಿ ನಾವು ಹೇಳಲಿಕ್ಕೆ ಆಗದು. 90 ರ ದಶಕದಲ್ಲಿ 2000 ಆಸು ಪಾಸಿನ ನಟಿಯರಲ್ಲಿ ಹೆಚ್ಚು ಬೇಡಿಕೆ ಇದ್ದ ನಟಿಯರ ಪೈಕಿ ನಟಿ ರಾಧಿಕಾ ಕುಮಾರಸ್ವಾಮಿ ಕೂಡ ಅವರು ಬರುತ್ತಾರೆ ಎಂದು ಹೇಳಬಹುದು. ರಾಧಿಕಾ ಕುಮಾರಸ್ವಾಮಿ ಅವರು ಮಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಇವರಿಗೆ ಬಾಲ್ಯ ವಿವಾಹವಾಗಿದೆ ಎಂದು ತಿಳಿದು ಬಂದಿದ್ದು ಅವರ ಹೆಸರು ರತ್ತನ್ ಎಂದು ಹೇಳಲಾಗುತ್ತಿದೆ. ಈ ರತನ್ ಎಂಬುವ ವ್ಯಕ್ತಿ 2002ರಲ್ಲಿ ನಿಧನ ಹೊಂದಿದ್ದಾರಂತೆ. ನಂತರದ 2006ರಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಮದುವೆಯಾಗುತ್ತಾರೆ ಎಂದು ತಿಳಿದುಬಂದಿತು. ಹಾಗೆ ಈ ವಿಚಾರ ಎಲ್ಲೆಡೆ ತುಂಬಾ ಸದ್ದು ಸಹ ಆಗಿತ್ತು.

Advertisements
Advertisements

ಜೊತೆಗೆ ಕುಮಾರಸ್ವಾಮಿ ಅವರನ್ನು ಮದುವೆಯಾದ ರಾಧಿಕಾ ಕುಮಾರಸ್ವಾಮಿ ಅವರ ವಿರುದ್ಧವಾಗಿ ಕೆಲವರು ಟೀಕೆಯ ಮಾತುಗಳನ್ನು ಕೂಡ ಆಡಿದರು. ಇದೀಗ ರಾಧಿಕಾ ಕುಮಾರಸ್ವಾಮಿ ಮತ್ತು ಕುಮಾರಸ್ವಾಮಿ ಜೋಡಿಗೆ ಒಬ್ಬ ಮುದ್ದಾದ ಮಗಳಿದ್ದಾಳೆ. ಆಕೆಯ ಹೆಸರು ಶಮಿಕ. ರಾಧಿಕಾ ಕುಮಾರಸ್ವಾಮಿ 2002ರಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ವೇಳೆಗೆ ನಟ ಶಿವಣ್ಣ ಅವರ ಜೊತೆ ಮೊದಲ ಬಾರಿ ತೆರೆ ಹಂಚಿಕೊಂಡವರು. ಅಣ್ಣ ತಂಗಿ ಚಿತ್ರದ ಮೂಲಕ ಶಿವಣ್ಣನ ಜೊತೆ ನಟನೆ ಮಾಡಿ ಹೆಚ್ಚು ಪ್ರಖ್ಯಾತಿ ಹೊಂದಿದ ನಟಿ ಇವರು. ಹೌದು ಇದೀಗ ರಾಧಿಕಾ ಕುಮಾರಸ್ವಾಮಿ ಅವರು ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ..ನಟನೆಯನ್ನು ನಿಲ್ಲಿಸಿದರೂ ಕೂಡ ಸಿನಿಮಾಗಳ ನಿರ್ಮಾಣ ಮಾಡುತ್ತಾ ಮುಂಚೂಣಿಯಲ್ಲಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅವರು ಇತ್ತೀಚಿಗೆ ದಮಯಂತಿ ಎನ್ನುವ ಚಿತ್ರದ ಮೂಲಕ ಮತ್ತೆ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡಿದ್ದರು. ಸ್ವೀಟಿ ಎನ್ನುವ ಸಿನಿಮಾ ಮೂಲಕ 2013ರಲ್ಲಿ ಮತ್ತೆ ಹೊಸ ಸಂಚಲ ಸೃಷ್ಟಿಸಿದ ನಟಿ ರಾಧಿಕಾ ಕುಮಾರಸ್ವಾಮಿ ಇದೀಗ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೆಚ್ಚು ಮಾದಕ ಡಾನ್ಸ್ ವಿಡಿಯೋಗಳನ್ನ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಹೌದು ಈ ಹಿಂದೆ ಇದೆ ಸ್ವೀಟಿ ಸಿನಿಮಾ ಬಿಡುಗಡೆ ವೇಳೆ ಸೃಜನ್ ನಡೆಸಿಕೊಡುತ್ತಿದ್ದ ಮಜಾ ಟಾಕೀಸ್ ಗೆ ಆಗಮಿಸಿದ್ದರು. ಅಂದು ರಾಧಿಕಾ ಕುಮಾರಸ್ವಾಮಿ ಅವರು ಗುಲಾಬಿ ಬಣ್ಣದ ಸೀರೆ ತೊಟ್ಟು ಎಲ್ಲರ ಗಮನ ಸೆಳೆದಿದ್ದರು ಎಂದು ಹೇಳಬಹುದು. ಸ್ವೀಟ್ ಹಾಡದ ಸ್ವೀಟೀ ಚಿತ್ರದ ಹಾಡಿಗೆ ಹೆಜ್ಜೆ ಹಾಕಿ ಸಕ್ಕತ್ ಸದ್ದು ಮಾಡಿದ್ದರು ರಾಧಿಕಾ. ಅವರ ಈ ಡಾನ್ಸನ್ನು ನೋಡಿ ಎಲ್ಲರೂ ಕೂಡ ಬೆರಗಾದರು. ಕಾರಣ 35 ವಯಸ್ಸು ಆದರೂ ಕೂಡ 20ರ ಹರೆಯದಂತೆ ಕಾಣವ ನಟಿ ರಾಧಿಕಾ ಕುಮಾರಸ್ವಾಮಿ ಅವರ ಬೋಲ್ಡ್ ನೃತ್ಯ ಹಾಗೆ ಅವರ ಸೌಂದರ್ಯ ಹಾಗೆಯೇ ಇಂದಿಗೂ ಇದೆ.ಇತ್ತೀಚಿಗೆ ಹೆಚ್ಚು ನೃತ್ಯದ ವಿಡಿಯೋ ಶೇರ್ ಮಾಡಿಕೊಳ್ಳುವ ನಟಿ ರಾಧಿಕಾ ಕುಮಾರಸ್ವಾಮಿ ಈ ನೃತ್ಯದಲ್ಲೂ ಸಹ ಸಕ್ಕತ್ ಆಗಿ ಮಿಂಚಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ. ನಿಮಗೂ ನಟಿ ರಾಧಿಕಾ ಕುಮಾರಸ್ವಾಮಿ ಅವರ ಈ ನೃತ್ಯ ಇಷ್ಟ ಆದ್ರೆ ಒಂದು ಮೆಚ್ಚುಗೆ ನೀಡಿ.