Advertisements

ರಾಧಿಕಾ ಪಂಡಿತ್ ಪಕ್ಕದಲ್ಲೇ ಹಾರಿದ ದೈತ್ಯ ಡಾಲ್ಫಿನ್ ಮೀನು…ನೋಡಿ ಕ್ಯೂಟ್ ವಿಡಿಯೋ

Kannada News

ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಫ್ಯಾಮಿಲಿ ಕೆಲ ದಿನಗಳ ಕಾಲ ಮಾಲ್ಡೀವ್ಸ್‌ ಪ್ರವಾಸ ಮಾಡಿದ್ದರು. ಮಕ್ಕಳ ಜೊತೆ ಇದು ಮೊದಲ ಇಂಟರ್‌ನ್ಯಾಷನಲ್‌ ಟ್ರಿಪ್‌ ಆದ ಕಾರಣ ಸಖತ್‌ ಮೆಮೋರಬಲ್ ಆಗಿರಬೇಕೆಂದು ಐಷಾರಾಮಿ ಹೋಟೆಲ್‌ನಲ್ಲಿ ವಾಸವಿದ್ದು ಸಾಮಾನ್ಯರಂತೆ ಮಣ್ಣಿನಲ್ಲಿ ಆಟವಾಡಲು ಬಿಟ್ಟರು. ಹೌದು ಇಷ್ಟು ದಿನ ಐರಾ ಹಾಗೂ ಯಥರ್ವ್‌ ಫೋಟೋಗಳನ್ನು ನೋಡುತ್ತಿದ್ದ ನಮಗೆ ಇದೇ ಮೊದಲು ಅಮ್ಮ-ಮಗಳು ಡಾಲ್ಫಿನ್‌ ಜಂಪ್ ಎಂಜಾಯ್ ಮಾಡುತ್ತಿರುವ ವಿಡಿಯೋನ ಸರ್ಪ್ರೈಸ್ ಆಗಿ ಅಪ್ಲೋಡ್ ಮಾಡಿದ್ದರು.

ನಾವು ಎಗ್ಸೈಟ್ ಆದಷ್ಟೆ ಎಗ್ಸೈಟ್ ಆಗಿದ್ದ ಡಾಲ್ಫಿನ್‌ಗಳಿವು. ಹಳೆ ನೆನೆಪುಗಳ ವಿಡಿಯೋ ಎಂದು ರಾಧಿಕಾ ಬರೆದುಕೊಂಡಿದ್ದಾರೆ. ಐರಾ ಹಾಗೂ ರಾಧಿಕಾ ಹಡಗಿನಲ್ಲಿ ಕುಳಿತು ಡಾಲ್ಫಿನ್‌ ನೋಡುತ್ತಿದ್ದರೆ ಯಶ್ ವಿಡಿಯೋ ಸೆರೆ ಹಿಡಿದಿದ್ದು ಡಾಲ್ಫಿನ್ ನೀರಿನಿಂದ ಹೊರಗೆ ಜಂಪ್ ಮಾಡಿದಾಗಲೆಲ್ಲಾ Ohooo Ohooo ಎಂದು ಕೂಗುತ್ತಾ ಸಂಭ್ರಮಿಸುತ್ತಿದ್ದರು.ಐರಾ ಹಾಗೂ ಯಥರ್ವ್‌ ಸೋಷಿಯಲ್ ಮೀಡಿಯಾಗೆ ಎಂಟ್ರಿ ಆದಾಗಿನಿಂದಲೂ ಅವರದ್ದೇ ಹವಾ. ರಾಧಿಕಾ ಹಾಗೂ ಯಶ್ ಮಕ್ಕಳ ಬಗ್ಗೆ ಏನೇ ಪೋಸ್ಟ್ ಮಾಡಿದರು ಕ್ಷಣದಲ್ಲಿ ವೈರಲ್ ಅಗುತ್ತಿದ್ದು ಅದರಲ್ಲೂ ಐರಾ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ಕಿಡ್.

ಹೀಗೆ ಮಕ್ಕಳ ಫೋಟೋ ಹಾಗೂ ವಿಡಿಯೋ ಶೇರ್ ಮಾಡುತ್ತಿರಿ ಎಂದು ಅಭಿಮಾನಿಗಳು ಆಗಾಗ ಡಿಮ್ಯಾಂಡ್ ಮಾಡುತ್ತಾರೆ.
ಇನ್ನು ಮಕ್ಕಳ ಜೊತೆಗಿನ ಮಾಲ್ಡೀವ್ಸ್ ಈ ವಿಡಿಯೋ ವನ್ನ ತಾವು ಕೂಡ ಲೇಖನಿಯ ಕೆಳಗೆ ನೋಡಬಹುದು.ಇನ್ನು ಯಶ್ ಅವರ ಕೆಜಿಎಫ್ 2 ತೆರೆಗೆ ಬಂದು ಮೂರು ತಿಂಗಳ ಮೇಲಾಗಿದೆ. ಅವರ ಮುಂದಿನ ಸಿನಿಮಾ ಯಶ್ 19ರ ಬಗ್ಗೆ ಅಪ್​​ಡೇಟ್ ಪಡೆಯಲು ಫ್ಯಾನ್ಸ್ ಕಾದಿದ್ದಾರೆ. ಈ ಮಧ್ಯೆ ರಾಧಿಕಾ ಪಂಡಿತ್-ಯಶ್​ ವಿದೇಶಕ್ಕೆ ಹಾರಿದ್ದಾರೆ. ಹೌದು ಯಶ್ ಜೊತೆ ವೆಕೇಶನ್ ಕಳೆಯುತ್ತಿರುವ ಫೋಟೋಗಳನ್ನು ರಾಧಿಕಾ ಪಂಡಿತ್ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳು ಸಖತ್ ವೈರಲ್ ಆಗಿದೆ. ಬ್ಯೂಟಿಫುಲ್ ಕಪಲ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಇನ್ನು ಯಶ್​​ ಹಾಗೂ ರಾಧಿಕಾ ಪಂಡಿತ್​ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಮೊಗ್ಗಿನ ಮನಸು ಸಿನಿಮಾ ಮೂಲಕ. ಈ ಚಿತ್ರ ತೆರೆಗೆ ಬಂದು 14 ವರ್ಷ ಕಳೆದಿದೆ. ಇದನ್ನು ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಿಸಿದ್ದರು. ಇದಾದ ಬೆನ್ನಲ್ಲೇ ಅವರು ಯಶ್​ ಜತೆ ವಿದೇಶಕ್ಕೆ ಹಾರಿದ್ದಾರೆ. ಈ ದಂಪತಿ ತೆರಳಿದ್ದು ಸ್ಲೊವೇನಿಯಾ ದೇಶಕ್ಕೆ. ಸ್ಲೋವೆನಿಯಾ ಇರೋದು ಯುರೋಪ್​ನಲ್ಲಿ. ಸ್ಲೋವೆನಿಯಾದಲ್ಲಿರುವ ಲೇಕ್ ಬ್ಲೆಡ್ ಚರ್ಚ್​ ಎದುರು ರಾಧಿಕಾ ಪಂಡಿತ್ ಮತ್ತು ಯಶ್ ಪೋಸ್ ನೀಡಿದ್ದಾರೆ. ಕೆಜಿಎಫ್​’ ತೆರೆಗೆ ಬಂದ ನಂತರದಲ್ಲಿ ಯಶ್ ಕೂದಲು ಹಾಗೂ ಗಡ್ಡಕ್ಕೆ ಕತ್ತರಿ ಹಾಕಿದ್ದರು. ಆದರೆ ಕೆಜಿಎಫ್ 2 ರಿಲೀಸ್ ಆಗಿ ಮೂರು ತಿಂಗಳು ಕಳೆದರೂ ಅವರು ಕೂದಲು ಹಾಗೂ ಗಡ್ಡಕ್ಕೆ ಕತ್ತರಿ ಹಾಕಿಲ್ಲ.

ಇನ್ನು ನರ್ತನ್ ಜತೆಗಿನ ಸಿನಿಮಾ ವಿಳಂಬ ಆಗುತ್ತಿದ್ದು ಯಶ್ ಅವರು ಕೆಜಿಎಫ್ 3 ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ವದಂತಿ ಇದೆ. ಆದರೆ ಈ ಬಗ್ಗೆ ಯಾವುದೇ ಅಪ್​​ಡೇಟ್​ ಇಲ್ಲ. ಈಗ ಅವರು ಗಡ್ಡಕ್ಕೆ ಕತ್ತರಿ ಹಾಕಿಲ್ಲ ಎಂಬ ವಿಚಾರದಿಂದ ಅವರು ಕೆಜಿಎಫ್ 3 ಕೆಲಸಗಳಲ್ಲಿ ಪಾಲ್ಗೊಳ್ಳುತ್ತಾರಾ ಎಂಬ ಕುತೂಹಲ ಮೂಡಿದೆ.ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಈ ಮೊದಲು ಹಲವು ಕಡೆಗಳಲ್ಲಿ ವೆಕೇಶನ್​ಗೆ ತೆರಳಿದ್ದರು. ಕೆಲ ವರ್ಷಗಳ ಹಿಂದೆ ಈ ದಂಪತಿ ಮಾಲ್ಡೀವ್ಸ್​​ಗೆ ಭೇಟಿ ನೀಡಿದ್ದರು. ಕೆಜಿಎಫ್ 2 ತೆರೆಕಂಡ ನಂತರ ಯಶ್ ಹಾಗೂ ರಾಧಿಕಾ ಪಂಡಿತ್ ಗೋವಾಗೆ ತೆರಳಿದ್ದರು. ಈ ಫೋಟೋಗಳು ವೈರಲ್ ಆಗಿದ್ದವು.