Advertisements

ಮಾತು ತಪ್ಪಿದ ರಾಘಣ್ಣ! ಏನು ಮಾಡಿದ್ದಾರೆ ನೋಡಿ..

Cinema

ನಮಸ್ಕಾರ ವೀಕ್ಷಕರೇ ಜೇಮ್ಸ್ ಚಿತ್ರದ ಪ್ರೀ ರಿಲೀಸ್ ಈವೆಂಟ್ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ನೆರವೇರಿದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಸಿನಿಮಾ ಆದ ಕಾರಣ ಚಿತ್ರರಂಗದ ಬಹುತೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.. ಕಾರ್ಯಕ್ರಮ ಎಷ್ಟೇ ಅದ್ದೂರಿಯಾಗಿ ಮಾಡಿದರು ಕೂಡ ಅಪ್ಪು ಇಲ್ಲದ ಅಂದಕಾರ ಎಲ್ಲರನ್ನೂ ಕಾಡುತ್ತಿತ್ತು ಜೇಮ್ಸ್ ಮೂಲಕ ಪುನೀತ್ ರಾಜಕುಮಾರ್ ಅವರನ್ನು ಕಣ್ತುಂಬಿಕೊಳ್ಳಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ ಜೇಮ್ಸ್ ಸಿನಿಮಾ ನಾಳೆ ರಿಲೀಸ್ ಆಗುತ್ತಿದೆ ಹಾಗಾಗಿ ಚಿತ್ರದ ಬಗ್ಗೆ ಹಲವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಚಿತ್ರತಂಡವನ್ನು ಹೊರತುಪಡಿಸಿ ಪುನೀತ್ ರಾಜಕುಮಾರ್ ಅಭಿಮಾನಿಗಳೆ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ ಸದ್ಯ ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೆದಿದ್ದು ಸಾಕಷ್ಟು ವಿಚಾರಗಳನ್ನು ಚಿತ್ರತಂಡ ಮತ್ತು ಡಾಕ್ಟರ್ ರಾಜಕುಮಾರ್ ಕುಟುಂಬ ಹಂಚಿಕೊಂಡಿದೆ

Advertisements
Advertisements

ಆದರೆ ವೇದಿಕೆ ಮೇಲೆ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಮಾತನಾಡುವುದನ್ನು ಕಂಡು ಎಲ್ಲರ ಕಣ್ಣು ಒದ್ದೆಯಾದವು ಆದರೆ ಅವರು ಕೊಟ್ಟ ಮಾತು ತಪ್ಪುವಂತೆ ಮಾಡಿತು ಪುನೀತ್ ರಾಜಕುಮಾರ್ ಅವರ ಮೇಲಿನ ಪ್ರೀತಿ ಇನ್ನು ಕಾರ್ಯಕ್ರಮದಲ್ಲಿ ನಟ ರಾಘವೇಂದ್ರ ರಾಜಕುಮಾರ್ ನಾನು ಭಾವುಕ ಆಗಬಾರದೆಂದು ಎಂದು ಕೊಂಡಿದ್ದೇನೆ ಎಂದು ಹೇಳುತ್ತಲೆ ಮಾತು ಶುರು ಮಾಡಿದರು ನನಗೆ ಈಗ ಅನಿಸಿದ್ದು ಚೆನ್ನಾಗಿ ಓಡುತ್ತಿದ್ದ ಗಾಡಿಯನ್ನು ನಿಲ್ಲಿಸಿಬಿಟ್ಟ ನಾನು ನೋಡಿ ಕುಂಟುತ್ತಾ ಓಡಾಡುತ್ತಿದ್ದೇನೆ ನಾನು ಇನ್ನೂ ಇದ್ದೀನಿ ಅಂದರೆ ಎಷ್ಟು ಬೇಜಾರಾಗುತ್ತದೆ ನನಗೆ ಸ್ಟ್ರೋಕ್ ಆಗಿ ಹಾರ್ಟ್ ಪ್ರಾಬ್ಲಮ್ ಆದರೂ ಇದೀನಿ ಇದನ್ನೆಲ್ಲ ನೋಡಿದಾಗ ಯಾಕೆ ಇರಬೇಕು ಅನಿಸಿತು ನಾನು ಅವನನ್ನು ಹುಡುಕಿಕೊಂಡು ಹೋಗುತ್ತೇನೆ ನಾನು ಅವನು ಇರುವ ಕಡೆ ಹೋಗುತ್ತೀನಿ ನಾನು ಹೊರಡೋಕೆ ರೆಡಿ ಎಂದು ಅವರು ಮಾತನಾಡಿದರು

ಈ ಸಂದರ್ಭದಲ್ಲಿ ಅವರಿಗೆ ದುಃಖ ತಡೆಯಲು ಆಗಲೇ ಇಲ್ಲ ಕೈ ನಡುಕ ಬಂದಿತ್ತು ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ಶಿವರಾಜ್ ಕುಮಾರ್ ಅವರು ಅಳು ತಡೆಯಲಾರದೆ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟರು ನಂತರ ಶಿವರಾಜಕುಮಾರ್ ಅವರು ವೇದಿಕೆ ಮೇಲೆ ಬಂದಾಗ ಕಣ್ಣೀರು ನಿಲ್ಲಲೇ ಇಲ್ಲ ಅಳುತ್ತಲೆ ಮಾತು ಆರಂಭಿಸಿದರು ಈ ವೇಳೆ ಶಿವಣ್ಣ ರಾಘಣ್ಣನನ್ನು ತಬ್ಬಿಕೊಂಡು ಸಮಾಧಾನ ಮಾಡಿ ವೇದಿಕೆಯಿಂದ ಕೆಳಗೆ ಇಳಿದರು ಪುನೀತ್ ರಾಜಕುಮಾರ್ ಅಗಲಿಕೆ ಹಿನ್ನೆಲೆ ಕಾರ್ಯಕ್ರಮದಲ್ಲಿ ನೋವಿನ ಕ್ಷಣಗಳೆ ಹೆಚ್ಚಾಗಿದ್ದವು ಇದು ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ಹಾಗಾಗಿ ಸಂಭ್ರಮದಿಂದ ಕಾರ್ಯಕ್ರಮ ಮಾಡಿದರು ಎಲ್ಲರಲ್ಲೂ ದುಃಖ ಮರಗಟ್ಟಿತ್ತು ಸಿನಿಮಾ ತಂಡ ಕಲಾವಿದರು ರಾಜಕುಟುಂಬ ಅಭಿಮಾನಿಗಳು ಅತಿಥಿಗಳು ಎಲ್ಲರಲ್ಲೂ ಕೂಡ ದುಃಖದ ವಾತಾವರಣ ಮೂಡಿತ್ತು.. ಆದರೆ ಇದರೆಲ್ಲದರ ನಡುವೆ ಜೇಮ್ಸ್ ಮೂಲಕ ಅಪ್ಪು ಅವರನ್ನು ಬರಮಾಡಿಕೊಳ್ಳಲು ಎಲ್ಲರೂ ಸಜ್ಜಾಗಿದ್ದಾರೆ ನೀವು ಕೂಡ ಅಪ್ಪು ಅಭಿಮಾನಿಯಾಗಿದ್ದರೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ..