Advertisements

ತಂಗಿಯ ಜೊತೆ ಸೋಷಿಯಲ್ ಮೀಡಿಯಾ ನಡುಗಿ ಹೋಗುವಂತೆ ಮಸ್ತ್ ಡಾನ್ಸ್ ಮಾಡಿದ ಪ್ರಜ್ವಲ್ ಪತ್ನಿ ರಾಗಿಣಿ! ವಿಡಿಯೋ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ ನೋಡಿ!!

Kannada News

ಸಿನಿಮಾ ನಾಯಕಿಯರು ಅಂದ್ರೆ ಜನರಿಗೆ ವಿಶೇಷವಾದ ಪ್ರೀತಿ ಆಸಕ್ತಿ ಗೌರವ ಇರುತ್ತೆ. ಅವರ ಜೀವನದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಬಂತು ತುಸು ಹೆಚ್ಚಾಗಿಯೇ ಇರುತ್ತೆ ಇಂದು ಇದೆಲ್ಲಾ ಪ್ರಶ್ನೆಗಳಿಗೆ ಜನರ ಕುತೂಹಲಕ್ಕೆ ಉತ್ತರವಾಗಿ ನಿಂತಿದ್ದು ಸೋಶಿಯಲ್ ಮೀಡಿಯಾ. ಒಂದೆರಡು ಸಿನಿಮಾಗಳಲ್ಲಿ ನಟಿಸಿ ಮದುವೆಯ ನಂತರ ಸಿನಿಮಾದಿಂದ ದೂರ ಉಳಿದ ಸಾಕಷ್ಟು ನಟಿಯರು ಇದ್ದಾರೆ ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ತಮ್ಮ ಪ್ರತಿಭೆಯನ್ನು ತೋರಿಸುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ.

ಹೀಗೆ ಸೋಶಿಯಲ್ ಮೀಡಿಯಾದ ಮೂಲಕವೇ ಹೆಚ್ಚು ಜನಪ್ರಿಯತೆಯನ್ನು ಗಳಿಸಿಕೊಂಡಿರುವ ನಟಿ ರಾಗಿಣಿ ಚಂದ್ರನ್. ಸ್ಯಾಂಡಲ್ ವುಡ್ ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್. ರಾಗಿಣಿ ಚಂದ್ರನ್ ಅವರು ಜುಲೈ 12 1990ರಲ್ಲಿ ಜನಿಸಿದರು ಇವರ ತಂದೆ ಚಂದ್ರನ್ ಬಾಲು ಹಾಗೂ ತಾಯಿ ರಮಾ. ಮಾಡೆಲ್ ಆಗಿದ್ದ ರಾಗಿಣಿ ನಂತರ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ರು.

ಹೀಗೆ ನಟಿಸುತ್ತಾ ಇರುವ ಸಮಯದಲ್ಲಿಯೇ ಪ್ರಜ್ವಲ್ ದೇವರಾಜ್ ಹಾಗು ರಾಗಿಣಿ ನಡುವೆ ಪ್ರೇಮಾಂಕಾರವಾಗಿತ್ತು. ರಾಗಿಣಿ ಹಾಗೂ ಪ್ರಜ್ವಲ್ 2015 ರಲ್ಲಿ ಮನೆಯವರ ಒಪ್ಪಿಗೆಯನ್ನು ಪಡೆದು ಸಪ್ತಪದಿ ತುಳಿದರು. ಇದೀಗ ಅತ್ಯಂತ ಅನಯುನ್ಯವಾಗಿ ಜೀವನ ನಡೆಸುತ್ತಿರುವ ರಾಗಿಣಿ ಹಾಗೂ ಪ್ರಜ್ವಲ್ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಜೊತೆ ಜೊತೆಯಲಿ ಡ್ಯಾನ್ಸ್ ಮಾಡಿ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾರೆ. ಇದು ಅಭಿಮಾನಿಗಳಿಗೆ ಬಹಳ ಖುಷಿ ನೀಡುತ್ತೆ.

ರಾಗಿಣಿ ಚಂದ್ರನ್ ಈ ಹಿಂದೆ ಅಭಿನಯಿಸಿದ್ದರು ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಬ್ರೇಕ್ ನೀಡಿದ್ದು ಪುನೀತ್ ರಾಜಕುಮಾರ್ ನಿರ್ಮಾಣದ ಲಾ ಎನ್ನುವ ಚಿತ್ರದಲ್ಲಿ. ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ರಾಗಿಣಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ರಚಿತಾ ರಾಮ್ ನಿರ್ಮಾಣದ ವೃಷಭ ಪ್ರಿಯ ಎನ್ನುವ ಮೂವಿಯಲ್ಲಿಯೂ ಕೂಡ ರಾಗಿಣಿ ಸಾಂಪ್ರದಾಯಿಕ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

ಅಲ್ಲದೆ ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್ಪೆಕ್ಟರ್ ವಿಕ್ರಂ ಸಿನಿಮಾದಲ್ಲಿಯೂ ಕೂಡ ರಾಗಿಣಿ ವಿಶೇಷ ಪಾತ್ರ ಒಂದರಲ್ಲಿ ನಟಿಸಿದ್ದಾರೆ. ಈ ಮೂಲಕ ತನ್ನ ಪತಿಯ ಜೊತೆಗೆ ಅಭಿನಯಿಸಬೇಕು ಎನ್ನುವ ರಾಗಿಣಿಯ ಕನಸು ನನಸಾಗಿದೆ. ಇನ್ನು ನಟಿ ರಾಗಿಣಿ ಚಂದ್ರನ್ ಕಥಕ್ ನೃತ್ಯಗಾರ್ತಿ ಕೂಡ ಹೌದು. ಅಷ್ಟೇ ಅಲ್ಲ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ನೀಡುವ ರಾಗಿಣಿ ಸ್ವತಃ ನ್ಯೂಟ್ರಿಷಿಯನ್ ಕೂಡ ಆಗಿದ್ದಾರೆ. ರಾಗಿಣಿ ಅವರಿಗೆ ಕನಿಕ ಚಂದ್ರನ್ ಎನ್ನುವ ಸಹೋದರಿ ಇದ್ದಾರೆ. ಕನಿಕ ಚಂದ್ರನ್ ಅತ್ಯುತ್ತಮ ಡ್ಯಾನ್ಸರ್.

ಸೋಶಿಯಲ್ ಮಿಡಿಯಾ ಇನ್ಸ್ಫೂಯೆನ್ಸರ್ ಕೂಡ ಹೌದು. ಸಾಕಷ್ಟು ಪ್ರಮೋಷನ್ ವಿಡಿಯೋಗಳನ್ನೂ ಕೂಡ ಮಡುತ್ತಾರೆ. ಕನಿಕ ಹಾಗೂ ರಾಗಿಣಿ ಆಗಾಗ ತಾವಿಬ್ಬರೂ ವರ್ಕೌಟ್ ಮಾಡಿದ ವಿಡಿಯೋಗಳನ್ನು, ಜೊತೆಗೆ ಫೋಟೋಗಳನ್ನು ಹಾಗೂ ಜೊತೆಗೆ ನೃತ್ಯ ಮಾಡಿದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಇತ್ತೀಚಿಗೆ ಅಕ್ಕ ತಂಗಿ ಖುಷಿಯಿಂದ ಫ್ರೀ ಸ್ಟೆಪ್ ಹಾಕಿ ನೃತ್ಯ ಮಾಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ. ರಾಗಿಣಿ ಹಾಗೂ ಕನಿಕ ಇಬ್ಬರು ಅತ್ಯುತ್ತಮ ನೃತ್ಯಗಾರ್ತಿಯರು ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.