Advertisements

ಕಾಂತಾರ ಚಿತ್ರದ ಸಿಂಗಾರ ಸಿರಿಯೇ ಹಾಡಿಗೆ ನವಿಲು ನಾಚುವಂತೆ ಹೆಜ್ಜೆ ಹಾಕಿದ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ! ಮಸ್ತ್ ಡಾನ್ಸ್ ಇಲ್ಲಿದೆ ನೋಡಿ!!

Kannada News

ಪ್ರೀಯ ಓದುಗರೇ ಒಂದೆರೆಡು ಸಿನಿಮಾದಲ್ಲಿ ನಟಿಸಿದ ಕೂಡಲೇ ಎಲ್ಲರೂ ಬದಲಾಗೋದು ಕಾಮನ್. ಆದ್ರೆ ಇನ್ನೂ ಕೆಲವರು ಇದ್ದಾರೆ ಸಾಧನೆಯ ಉತ್ತುಂಗದಲ್ಲಿದ್ದರು ಕೂಡಾ ಗೆಲುವಿನ ಇಗೋ ಅನ್ನು ತೆಲೆಗೆ ಏರಿಸಿಕೊಂಡಿರುವದಿಲ್ಲ. ಇಂತಹ ನಟಿಯರಲ್ಲಿ ನಟಿ ರಾಗಿಣಿ ಕೂಡಾ ಒಬ್ಬರು. ತುಪ್ಪದ ಹುಡುಗಿ ರಾಗಿಣಿ ಅಲ್ಲ. ಇವರು ಶ್ರೀಮತಿ ಪ್ರಜ್ವಲ್ ದೇವರಾಜ್. ಹೌದು ರಾಗಿಣಿ ದೇವರಾಜ್ ಉತ್ತಮ ನಟಿ ಹಾಗೂ ಡ್ಯಾನ್ಸರ್ ಆಗಿದ್ದಾರೆ. ಈವರ ಬಗ್ಗೆ ಸಂಕ್ಷಿಪ್ತ ಮಾಹಿತಿ ನಿಮಗಾಗಿ.


ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ರಾಗಿಣಿ ಪ್ರಜ್ವಲ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಮದುವೆ ಆದ ಮೇಲೆ ಸಿನಿಮಾದಿಂದ ದೂರ ಉಳಿಯದೆ ಈಗ್ಲೂ ಸಿನಿಮಾದಲ್ಲಿ ಆಕ್ಟಿವ್ ಆಗಿದ್ದಾರೆ. ಡೈನಾಮಿಕ್ ಹೀರೊ ಪ್ರಜ್ವಲ್ ಹಾಗೂ ರಾಗಿಣಿಯರದು ಲವ್ ಕಮ್ ಅರೇಂಜ್ ಮ್ಯಾರೇಜ್.
ಹೌದು ಓದುಗರೇ …

ರಾಗಿಣಿ ಮೊದಲು ಒಬ್ಬ ಮಾಡಲ್ ಆಗಿದ್ದರು. ನಂತರ ಸಿನಿಮಾ ರಂಗಕ್ಕೆ ಕಾಲಿಟ್ಟರು. ಇದಾದ ಮೇಲೆ ಪ್ರಜ್ವಲ್ ಅವರ ಪ್ರೀತಿಯಲ್ಲಿ ಬಂಧಿಯಾಗಿ 2015 ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟರು. ರಾಗಿಣಿ ಹಾಗೂ ಪ್ರಜ್ವಲ್ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಜೊತೆ ಜೊತೆಯಲಿ ಡ್ಯಾನ್ಸ್ ಮಾಡಿ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾರೆ. ಇದನ್ನ ನೋಡಿದ ಅಭಿಮಾನಿಗಳು ಹಾರೈಕೆಯ ಸುರಿಮಳೆಯನ್ನೇ ಗೈಯ್ಯುತ್ತಾರೆ.

ರಾಗಿಣಿ ಈ ಹಿಂದೆ ನಟಿಯಾಗಿ ಅಭಿನಯಿಸಿದ್ದರು. ಇದೀಗ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಬ್ರೇಕ್ ನೀಡಿದ್ದು, ಪುನೀತ್ ರಾಜಕುಮಾರ್ ನಿರ್ಮಾಣದ ” ಲಾ ” ಎನ್ನುವ ಚಿತ್ರದಲ್ಲಿ ಅಭಿನಯಿಸಿದ್ದರು. ಒಬ್ಬ ಲಾಯರ್ ಆಗಿ ರಾಗಿಣಿ ಡಿಫರೆಂಟ್ ಆಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ರಚಿತಾ ರಾಮ್ ನಿರ್ಮಾಣದ ವೃಷಭ ಪ್ರಿಯ ಎನ್ನುವ ಸಿನಿಮಾದಲ್ಲಿ ರಾಗಿಣಿ ಸಾಂಪ್ರದಾಯಿಕ ಹುಡುಗಿಯಾಗಿ ಕಾಣಿಸಿಕೊಂಡಿದ್ದು ಇನ್ನಷ್ಟು ಸಿನಿಮಾ ಮಾಡುವ ನಿರೀಕ್ಷೆ ಅಭಿಮಾನಿಗಳಲ್ಲಿಯೂ ಹೆಚ್ಚಿದೆ.

ಇನ್ನು ನಟಿ ರಾಗಿಣಿ ಚಂದ್ರನ್ ಕಥಕ್ ನೃತ್ಯಗಾರ್ತಿ. ಅದ್ಭುತವಾಗಿ ನೃತ್ಯ ಮಾಡುತ್ತಾರೆ. ಇವರ ನೃತ್ಯ ನೋಡಿದ್ರೆ ಆ ಮಯೂರ ನಾಚಿ ನಿರಾಗೋದು ಖಂಡಿತ. ಇತ್ತೀಚಿಗೆ ಕಾಂತಾರ ಸಿನಿಮಾದ ಹಿಟ್ ಸಾಂಗ್ ’ಸಿಂಗಾರ ಸಿರಿಯೇ’ ಹಾಡಿಗೆ ರಾಗಿಣಿ ಪ್ರಜ್ವಲ್ ಹೆಜ್ಜೆ ಹಾಕಿದ್ದಾರೆ.ಈ ನೃತ್ಯ ದ ಕೆಲ ಫೋಟೋಸ್ ಹಾಗೂ ವಿಡಿಯೋ ವನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪಲೋಡ್ ಮಾಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇವರ ಡ್ಯಾನ್ಸ್ ಗೆ ಮೆಚ್ಚುಗೆಯ ಸುರಿಮಳೆಯೇ ಸುರಿದಿದೆ. ಕಾಮೆಂಟಗಳ ಮಹಾಪೂರ ಹರಿದಿದೆ. ಸಾವಿರಾರು ಜನ ಪಾಲವರ್ಸ್ ಇದ್ದು, ಇವರು ನಟನೆಯ ಜೊತೆಗೆ ಉತ್ತಮ ನೃತ್ಯಗರ್ತಿಯು ಆಗಿದ್ದಾರೆ.