Advertisements

ಕಂಡಕ್ಟರ್ ಆಗಿದ್ದಾಗ ಬೆಂಗಳೂರಿನಲ್ಲಿ ಪ್ರೀತಿಸಿದ್ದ ಹುಡುಗಿಯನ್ನ ಈಗಲೂ ಹುಡುಕುತ್ತಿರುವ ರಜಿನಿ.. ಮೊದಲ ಲವರ್ ಎಲ್ಲಿದ್ದಾಳೆ ಗೊತ್ತೇ!

Cinema

ಸೂಪರ್ ಸ್ಟಾರ್ ರಜನಿಕಾಂತ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನಟನೆಯಲ್ಲಿ ಮಾತ್ರ ಅವರು ಸೂಪರ್ ಸ್ಟಾರ್ ಅಲ್ಲ ಹೃದಯವಂತಿಕೆಯಲ್ಲು ಕೂಡ ಅನ್ನೋದು ವಿವರಿಸಿ ಹೇಳಬೇಕಾಗಿಲ್ಲ. ಆದರೆ ಇದೆ ಮೊದಲ ಬಾರಿಗೆ ರಜನಿಕಾಂತ್ ಅವರ ಮೊದಲ ಪ್ರೇಯಸಿಯ ಬಗ್ಗೆ ಮಾಹಿತಿ ಹೊರಬಿದ್ದಿದೆ. ಬಸ್ ಕಂಡಕ್ಟರ್ ಆಗಿದ್ದಾಗ ಪ್ರೀತಿಸಿದ ಹುಡುಗಿಯನ್ನು ಈಗಲೂ ರಜನಿಕಾಂತ್ ಹುಡುಕುತ್ತಲೆ ಇದ್ದಾರೆ.ಆ ಅಮರ ಪ್ರೇಮ ಕಥೆಯನ್ನು ನೋಡಿ. ಅದು ರಜನಿಕಾಂತ್ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಸಮಯ ಒಂದು ದಿನ ಮೆಡಿಕಲ್ ಕಾಲೇಜ್ ನಲ್ಲಿ ಓದುತ್ತಿದ್ದ ಹುಡುಗಿ ರಜನಿಕಾಂತ್ ಅವರ ಬಸ್ ಹತ್ತಿ ಸ್ವಲ್ಪ ಹೊತ್ತಿನ ನಂತರ ನಾನು ರಾಂಗ್ ರೂಟ್ ಬಸ್ ಹತ್ತಿದ್ದೀನಿ ಬಸ್ ನಿಲ್ಲಿಸಿ ನಿಲ್ಲಿಸಿ ಎಂದು ಹೇಳುತ್ತಾಳೆ. ಇದರಿಂದ ಕೋಪಗೊಂಡ ರಜನಿ ಆಕೆಯನ್ನು ಚೆನ್ನಾಗಿ ಬೈತಾರೆ ಆಕೆ ಕೂಡ ಸುಮ್ಮನೆ ಇರಲ್ಲ ವಾಪಸ್ ರಜನಿಗೆ ಚೆನ್ನಾಗಿ ಬೈತಾಳೆ. ಆವತ್ತಿಗೆ ಆ ಘಟನೆ ಮುಗಿಯಿತು..

[widget id=”custom_html-5″]

Advertisements
Advertisements

ಆಕೆಯ ಹೆಸರು ನಿರ್ಮಲಾ, ರಜನಿಯವರ ಬಸ್ ಪ್ರತಿದಿನ ನಿರ್ಮಲಾ ವಾಸವಿದ್ದ ಪ್ರದೇಶದಲ್ಲಿ ಓಡಾಡುತ್ತಿರುತ್ತದೆ. ಒಂದು ದಿನ ನಿರ್ಮಲಾ ಅವರನ್ನು ನೋಡಿದ ರಜನಿ ಕೋಪದಲ್ಲಿ ಏನೇನೋ ಬೈದೆ ಬೇಜಾರು ಮಾಡ್ಕೊಬೇಡಿ ಎಂದು ಸ್ವಾರಿ ಕೇಳುತ್ತಾರೆ. ಹಾಗೆ ಪ್ರತಿದಿನ ಒಬ್ಬರನ್ನೊಬ್ಬರು ನೋಡುತ್ತಿದ್ದ ಕಾರಣ ಇಬ್ಬರು ಸ್ನೇಹಿತರಾಗುತ್ತಾರೆ. ದಿನಗಳು ಉರುಳಿದಂತೆ ಒಬ್ಬರನ್ನೊಬ್ಬರು ಇಷ್ಟಪಟ್ಟು ಪ್ರೀತಿ ಮಾಡಲು ಶುರು ಮಾಡುತ್ತಾರೆ. ಆಗಾಗಲೆ ರಂಗಭೂಮಿಯಲ್ಲಿ ನಟನೆ ಮಾಡುತ್ತಿದ್ದ ರಜನಿ ಇವತ್ತು ನಾನು ನಟಿಸುವ ನಾಟಕ ಇದೆ ಬಂದು ನೋಡು ಎಂದು ನಿರ್ಮಲಾ ಅವರನ್ನು ಕರೆಯುತ್ತಾರೆ. ಹೋಗಿ ನಾಟಕದಲ್ಲಿ ರಜನಿ ನಟನೆ ನೋಡಿ ಬಾರಿ ಮೆಚ್ಚಿಕೊಂಡ ನಿರ್ಮಲಾ ನೀನು ಮದ್ರಾಸ್ ಗೆ ಹೋಗಿ ಸಿನಿಮಾಗಳಲ್ಲಿ ನಟಿಸಲು ಟ್ರೈ ಮಾಡು ಎಂದು ಪ್ರೋತ್ಸಾಹ ಮಾಡುತ್ತಾಳೆ. ಅದಕ್ಕೆ ಉತ್ತರಿಸಿದ ರಜನಿ ನನಗೂ ಹೋಗಲು ಇಷ್ಟಾನೆ ಮೊದಲು ಆಡಿಯರ್ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ಆಕ್ಟಿಂಗ್ ಟ್ರೈನಿಂಗ್ ತಗೊಂಡರೆ ಉತ್ತಮ ಆದರೆ ಅದಕ್ಕೆ ನನ್ನ ಬಳಿ ಬೇಕಾದಷ್ಟು ಹಣ ಇಲ್ಲ ಎನ್ನುತ್ತಾರೆ.

[widget id=”custom_html-5″]

ಆಗ ತನ್ನ ಕಾಲೇಜ್ ಪೀಸ್ ಕಟ್ಟಲು ಇಟ್ಟುಕೊಂಡಿದ್ದ ಐನೂರು ರೂಪಾಯಿಯನ್ನು ರಜನಿಗೆ ಕೊಟ್ಟ ನಿರ್ಮಲಾ ಮೊದಲು ನೀನು ಮದ್ರಾಸ್ ಗೆ ಹೋಗಿ ಟ್ರೈನಿಂಗ್ ಮಾಡು ಎಂದು ಹೇಳುತ್ತಾಳೆ. ಅದಾದ ಕೆಲವು ದಿನಗಳಲ್ಲಿ ಮದ್ರಾಸ್ ಗೆ ಪಯಣ ಬೆಳೆಸಿದ ರಜನಿ ಟ್ರೈನಿಂಗ್ ಮಾಡಿ ನಂತರ ಸಿನಿಮಾಗಳಲ್ಲಿ ಅವಕಾಶ ಪಡೆದು ನಟಿಸಲು ಶುರು ಮಾಡುತ್ತಾರೆ. ನಂತರ ಬೆಂಗಳೂರಿಗೆ ಬಂದ ರಜನಿ ನಿರ್ಮಲಾ ಅವರನ್ನು ಭೇಟಿ ಮಾಡಲು ಹೋಗುತ್ತಾರೆ ಆದರೆ ಆಗಾಗಲೆ ನಿರ್ಮಲಾ ಅವರ ಕುಟುಂಬ ಮನೆ ಖಾಲಿ ಮಾಡಿ ಬೇರೆ ಕಡೆ ಹೋಗಿ ಬಿಟ್ಟಿರುತ್ತಾರೆ. ನಿರ್ಮಲಾ ಅವರಿಗಾಗಿ ರಜನಿ ಎಲ್ಲಾ ಕಡೆ ಹುಡುಕುತ್ತಾರೆ. ಆದರೆ ಆಕೆ ಸಿಗೋದಿಲ್ಲ ಆಕೆಗಾಗಿ ಕಣ್ಣೀರು ಹಾಕುತ್ತಾ ಹು’ಚ್ಚ’ನಂತೆ ಆಗುತ್ತಾರೆ ರಜನಿ. ಆಗ ಸ್ನೇಹಿತರೆಲ್ಲ ರಜನಿಗೆ ಧೈರ್ಯ ಹೇಳಿ ಮತ್ತೆ ನಟನೆ ಮಾಡಲು ಕಳುಹಿಸುತ್ತಾರೆ. ಹೀಗಲೂ ಕೂಡ ರಜನಿ ಎಲ್ಲಿಗೆ ಪ್ರಯಾಣ ಮಾಡಿದರು ಅವರ ಹೃದಯ ಮಾತ್ರ ನಿರ್ಮಲಾ ಅವರಿಗಾಗಿ ಹುಡುಕುತ್ತದಂತೆ. ನಿರ್ಮಲಾ ಎಲ್ಲಿಯಾದರೂ ಕಾಣಿಸಬಹುದು ಎಂದು ರಜನಿ ನೋಡುತ್ತಾರಂತೆ. ರಜನಿ ಅವರ ಈ ಅಮರ ಪ್ರೇಮ ಕಥೆಯನ್ನು ಅವರ ಸ್ನೇಹಿತ ದೇವನ್ ನವರು ಬಿ’ಚ್ಚಿ’ಟ್ಟಿದ್ದಾರೆ..

[widget id=”custom_html-5″]