ರಜನಿಕಾಂತ್ ಹಬ್ಬ ನಟ ಮಾತ್ರ ಅಲ್ಲ ಒಂದು ಬ್ರಾಂಡ್ 60 ವರ್ಷ ದಾಟಿದರು ತನಗಿನ್ನೂ 16 ವರ್ಷ ಎಂದುಕೊಂಡು ನಟನೆ ಮಾಡುವ ಸೂಪರ್ ಸ್ಟಾರ್ ತನ್ನ ಅಭಿಮಾನಿಗಳಿಗೆ ಜಲಕ್ ಕೊಡುತ್ತಾರೆ. ಆದರೆ ಒಂದು ಹೊತ್ತು ಊಟಕ್ಕೂ ಇಲ್ಲದೆ ಪರದಾಡುತ್ತಿದ್ದ ಒಬ್ಬ ಖ್ಯಾತ ನಟಿ ಸಹಾಯ ಕೋರಿ ರಜನಿ ಮನೆಗೆ ಬಂದಾಗ ಈ ಸೂಪರ್ ಸ್ಟಾರ್ ಮಾಡಿದ್ದೇನು ಗೊತ್ತಾ.. ಒಂದು ಕಾಲದಲ್ಲಿ ಇಪ್ಪತ್ತು ರೂಪಾಯಿ ಕೊಟ್ಟು ತನ್ನ ನಾಲ್ಕು ಸ್ನೇಹಿತರ ಜೊತೆ ಚೆನ್ನೈನ ಸ್ಲ’ಮ್ ಏರಿಯಾದಲ್ಲಿ ವಾಸಮಾಡುತ್ತಿದ್ದ ರಜನಿಕಾಂತ್ ಈಗ ತಮಿಳುನಾಡಿನ ಅಭಿಮಾನಿಗಳ ಆರಾಧ್ಯ ದೈವರಾಗಿ ಬೆಳೆದಿದ್ದಾರೆ. ಹೀಗೆ ಒಂದು ದಿನ ಖ್ಯಾತನಟಿ ರಜನಿಕಾಂತ್ ಅವರ ಮನೆಗೆ ಹೋಗುತ್ತಾರೆ.

ಆ ನಟಿಯ ಹೆಸರು ರಮಪ್ರಭಾ ಗಂಡನಿಂದ ಮೋಸ ಹೋಗಿ ಎಲ್ಲಾ ಆಸ್ತಿಯನ್ನು ಕಳೆದುಕೊಂಡ ಖ್ಯಾತನಟಿ ರಮಪ್ರಭಾ ಒಂದು ಹೊತ್ತು ಕೂಡ ಊಟ ಮಾಡಲು ಹಣವಿಲ್ಲದೆ ಪರದಾಡುತ್ತಿದ್ದ ಸಮಯದಲ್ಲಿ ರಜನಿಕಾಂತ್ ಮನೆಗೆ ಹೋಗುತ್ತಾರೆ. ನಟಿ ರಮಪ್ರಭಾ ಮುಖ ನೋಡಿದ ರಜನಿಕಾಂತ್ ಒಂದು ಮಾತನ್ನು ಆಡದೆ ತನ್ನ ರೂಮಿಗೆ ಹೋಗಿ ಕೈಗೆ ಸಿಕ್ಕಷ್ಟು ಹಣವನ್ನು ತೆಗೆದುಕೊಂಡು ಬಂದು ರಮಾ ಪ್ರಭಾ ಕೈಯಲ್ಲಿಟ್ಟು ತುಂಬ ಪ್ರೀತಿಯಿಂದ ಕಳುಹಿಸಿಕೊಡುತ್ತಾರೆ. ಆ ಕಾಲದಲ್ಲಿ ಅದು 40 ಸಾವಿರ ರೂಪಾಯಿ ಆಗಿತ್ತು. ಇದನ್ನು ನೋಡಿದ ನಟಿ ತುಂಬ ಸಂತೋಷಗೊಂಡು ರಜನಿಕಾಂತ್ ಮನೆಯಿಂದ ಆಚೆ ಬರುತ್ತಾರೆ ಹೀಗೆ ರಜಿನಿ ಮಾಡುವ ಸಹಾಯಗಳು ಒಂದಲ್ಲ, ಎರಡಲ್ಲ ನನ್ನ ಕಣ್ಣ ಮುಂದೆ ಕಾಣುವ ಪ್ರತಿಯೊಬ್ಬರು ಸಂತೋಷವಾಗಿರಬೇಕು ಎಂದು ಬಯಸುತ್ತಾರೆ..
ರಜನಿಕಾಂತ್.ಒಂದು ದಿನ ತನ್ನ ಕಾರ್ ಡ್ರೈವರ್ ತನ್ನನ್ನು ನೋಡಬೇಕೆಂದು ಹಠ ಮಾಡುತ್ತಿದ್ದಾನೆ ಎಂದು ತಿಳಿದ ರಜನಿ ಮುಂಜಾನೆಯೆ ಹೋಗಿ ಡ್ರೈವರ್ ಮನೆಯ ಮುಂದೆ ನಿಲ್ಲುತ್ತಾರೆ ಯಾರೋ ಬಂದಿದ್ದಾರೆಂದು ಆಚೆ ಬಂದು ನೋಡಿದ ಡ್ರೈವರ್ ಗೆ ಆಶ್ಚರ್ಯವೋ ಆಶ್ಚರ್ಯ ಸೂಪರ್ ಸ್ಟಾರ್ ತನ್ನ ಮನೆಯ ಮುಂದೆ ನಿಂತಿದ್ದಾರೆ ಎಂದು ಡ್ರೈವರ್ ಗೆ ನಂಬಲೂ ಆಗಲೆ ಇಲ್ಲ ತನ್ನ ಡ್ರೈವರ್ ಮಗನನ್ನು ಎತ್ತುಕೊಂಡು ಮುದ್ದಾಡಿದ ರಜನಿ ಡ್ರೈವರ್ ಬಾಡಿಗೆ ಮನೆಯಲ್ಲಿ ಇದ್ದಾನೆ ಎಂದು ತಿಳಿದಾಗ ಆ ಮನೆಯನ್ನು ಖರೀದಿ ಮಾಡಿ ಡ್ರೈವರ್ ಹೆಸರಿಗೆ ಬರೆಯುತ್ತಾರೆ. ಹೀಗೆ ತನ್ನ ಸುತ್ತಮುತ್ತ ಇರುವ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಮಯದಲ್ಲಿ ಸಹಾಯ ಮಾಡುತ್ತಿರುತ್ತಾರೆ ರಜನಿಕಾಂತ್..