Advertisements

ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಸುದೀಪ್ ಹಾಗೂ ಪ್ರಿಯ ಅವರನ್ನು ಭೇಟಿ ಮಾಡಿದ ರಾಜೀವ್! ಕಾರಣ ಏನು ಗೊತ್ತಾದರೆ ಅಚ್ಚರಿ ಪಡುತ್ತೀರ.!

Entertainment

ನಮಸ್ತೆ ಸ್ನೇಹಿತರೆ, ಕನ್ನಡದಲ್ಲಿ ಈಗ ಬಿಗ್ ಬಾಸ್ 8 ತುಂಬಾ ಪಾಪುಲರ್ ಆಗಿದೆ. ಬಿಗ್ ಬಾಸ್ ಕನ್ನಡ 8ರ ಮೂಲಕ ಜನರಿಗೆ ಬಹಳ ಹತ್ತಿರ ಆಗಿರುವ ಸ್ಪರ್ಧಿಗಳಲ್ಲಿ ರಾಜೀವ್ ಕೂಡ ಒಬ್ಬರು. ರಾಜೀವ್ ಅವರು ಉತ್ತಮ ಕ್ರಿಕೆಟಿಗ, ಸಿಸಿಎಲ್ ಪಂದ್ಯಗಳಲ್ಲಿ ಅದ್ಭುತವಾದ ಪ್ರದರ್ಶನ ನೀಡಿ, ತಂಡಕ್ಕೆ ಹಲವಾರು ಬಾರಿ ಗೆಲುವು ತಂದುಕೊಟ್ಟಿದ್ದಾರೆ. ಸಿಸಿಎಲ್ ಕ್ರಿಕೆಟ್ ನಿಂದ ರಾಜೀವ್ ಯುವಕರಿಗೆ ಚಿರಪರಿಚಿತರು. ಆದರೆ ಮಹಿಳೆಯರಿಗೆ ಮತ್ತು ಗೃಹಿಣಿಯರಿಗೆ ರಾಜೀವ್ ಅವರ ಪರಿಚಯ ತುಂಬಾ ಕಡಿಮೆ. ಬಿಗ್ ಬಾಸ್ ಮನೆಗೆ ಬರುವ ಮೊದಲು ರಾಜೀವ್ ಅವರು ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು ಎನ್ನುವುದು ಕೂಡ ಹೆಚ್ಚಿನ ಜನರಿಗೆ ತಿಳಿದಿಲ್ಲ.

Advertisements
Advertisements

ಆದರೆ ಬಿಗ್ ಬಾಸ್ ಮೂಲಕ ರಾಜೀವ್ ಅವರು ಎಲ್ಲರಿಗೂ ಪರಿಚಯವಾಗಿದ್ದಾರೆ. ರಾಹುಲ್ ಅವರು ಟಾಸ್ಕ್ ನಲ್ಲಿ ಪಾಲ್ಗೊಳ್ಳುವ ದಾರಿ, ಹಿರಿಯರಿಗೆ ನೀಡುವ ಗೌರವ, ಅವರು ತೆಗೆದುಕೊಳ್ಳುವ ನಿರ್ಧಾರಗಳು ಎಲ್ಲವೂ ವೀಕ್ಷಕರಿಗೆ ಬಹಳ ಇಷ್ಟವಾಗಿಬಿಟ್ಟಿದೆ. ಕೊನೆಯವರೆಗೂ ತಲುಪುತ್ತಾರೆ ಎಂದುಕೊಂಡಿದ್ದ ರಾಜೀವ್ 8ನೇ ವಾರಕ್ಕೆ ಮನೆಯಿಂದ ಎ’ಲಿಮಿನೇಟ್ ಆಗಿ ಹೊರಬಂದಿರುವುದು ಎಲ್ಲರಿಗೂ ಶಾ’ಕ್ ನೀಡಿದೆ. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ರಾಜೀವ್ ಅವರು ನೇರವಾಗಿ ಕಿಚ್ಚ ಸುದೀಪ್ ಅವರ ಮನೆಗೆ ಹೋಗಿದ್ದಾರೆ. ರಾಜೀವ್ ಅವರು ಬಿಗ್ ಬಾಸ್ ಮನೆಯಿಂದ ಎ’ಲಿಮಿನೇಟ್ ಆಗಿದ್ದಕ್ಕೆ ಕಿಚ್ಚ ಸುದೀಪ್ ಅವರು ಹೇಳಿದ್ದೇನು ಗೊತ್ತಾ? ತಿಳಿಯೋಣ ಬನ್ನಿ.

ಸುದೀಪ್ ಅವರ ಆರೋಗ್ಯದಲ್ಲಿ ಸಮಸ್ಯೆ ಉಂಟಾದಾಗ ವಿಷಯ ತಿಳಿದ ಕೂಡಲೇ ರಾಜೀವ್ ಅವರು ತುಂಬಾ ಭಾವುಕರಾಗಿದ್ದರು. ಸುದೀಪ್ ಅವರನ್ನು ಈ ಕೂಡಲೇ ನೋಡಬೇಕು ಎಂದಿದ್ದರು. ಅದೇ ರೀತಿ ಮನೆಯಿಂದ ಎ’ಲಿಮಿನೇಟ್ ಆಗಿ ಹೊರಬಂದ ತಕ್ಷಣವೇ ರಾಜೀವ್ ಅವರು ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ. ಆಗ ಸುದೀಪ್ ಅವರು.. “ನೀನು ನಿನ್ನ ಬಳಿ ಇದ್ದಂತಹ ಗೋಲ್ಡನ್ ಪಾಸ್ ಅನ್ನು ಬಳಸಿಕೊಂಡಿದ್ದರೆ ನೀನು ಎ-ಲಿಮಿನೇಟ್ ಆಗಿ ಹೊರಬರುತ್ತಿರಲಿಲ್ಲ. ನಿನ್ನ ತಪ್ಪೆ ಇಂದು ನೀನು ಎ’ಲಿಮಿನೇಟ್ ಆಗಲು ಕಾರಣವಾಗಿದೆ. ಜೊತೆಗೆ ಆಗೋದೆಲ್ಲ ಒಳ್ಳೆಯದಕ್ಕೆ ಬಿಡು ಇನ್ನುಮುಂದೆ ಯಾವುದೇ ಚಾನ್ಸ್ ಸಿಕ್ಕರೂ ಎಡವಟ್ಟು ಮಾಡಿಕೊಳ್ಳಬೇಡ. ನಿನಗೆ ಸಿಗುವ ಚಾನ್ಸ್ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ ಯಾವುದನ್ನು ಮಿಸ್ ಮಾಡಿಕೊಳ್ಳಬೇಡ…” ಎಂದು ಹೇಳುವ ಮೂಲಕ ಸುದೀಪ್ ಅವರು ರಾಜೀವ್ ಅವರಿಗೆ ಧೈರ್ಯ ಹೇಳಿದ್ದಾರೆ.