ಮನುಷ್ಯ ಇಂದು ಇರೋನು ನಾಳೆ ಇರ್ತಾನೋ ಇಲ್ವೋ ಅನ್ನೋ ನಂಬಿಕೆಯೇ ಇಲ್ಲ.. ಅಂತಹುದರಲ್ಲಿ ಇಷ್ಟೊಂದು ಮಾನವೀಯತೆ ಕಳೆದುಕೊಂಡು ನಡೆದುಕೊಳ್ಳುವುದನ್ನು ನೋಡಿದರೆ ನಿಜಕ್ಕೂ ಇದೇನಾ ಮನುಷ್ಯತ್ವ ಎನಿಸುತ್ತದೆ.. ಹೌದು ನಂಜನಗೂಡಿನಲ್ಲಿ ನಿಜಕ್ಕೂ ಸಂಕಟ ತರಿಸುವ ಘಟನೆಯೊಂದು ನಡೆದು ಹೋಗಿದೆ.. ಗರ್ಭಿಣಿ ಪತ್ನಿಯನ್ನು ನಂಜನಗೂಡಿನ ದೇವಸ್ಥಾನಕ್ಕೆಂದು ಕರೆದುಕೊಂಡು ಹೋಗಿ ಕೊನೆಗೆ ನಂಜನಗೂಡಿನ ಕಪಿಲಾ ನದಿಯಲ್ಲಿ ಮುಳುಗಿಸಿ ಆಕೆಯನ್ನು ಇಲ್ಲವಾಗಿಸಿದ ಮನಕಲಕುವ ಘಟನೆ ನಡೆದಿದೆ.. ಅಷ್ಟಕ್ಕೇ ಸುಮ್ಮನಾಗದೇ ಕಿರುಚಿಕೊಂಡ ಮಗುವನ್ನು ಹೆತ್ತ ತಂದೆಯೇ ಏನು ಮಾಡಿಬಿಟ್ಟ ಗೊತ್ತಾ.. ಹೌದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಮಾನವೀಯತೆಯೇ ಇಲ್ಲದ ಘಟನೆಗಳು ಆಗಾಗ ನಡೆಯುತ್ತಿದ್ದು ನಿಜಕ್ಕೂ ಸಂಕಟ ತರುವಂತಿದೆ.. ಈತನ ಹೆಸರು ರಾಜೇಶ್ ನಂಜನಗೂಡಿನ ಮುದ್ದನಹಳ್ಳಿ ಗ್ರಾಮದವ..

ಕಳೆದ ಆರು ವರ್ಷಗಳ ಹಿಂದೆ ಕಸುವಿನಹಳ್ಳಿಯ ಪುಟ್ಟಸಿದ್ದಯ್ಯ ಎಂಬುವವರ ಮಗಳು ದೇವಿಕಾಳನ್ನು ರಾಜೇಶನಿಗೆ ಕೊಟ್ಟು ಮದುವೆ ಮಾಡಲಾಗಿತ್ತು.. ಈ ಜೋಡಿಗೆ ಅದಾಗಲೇ ನಾಲ್ಕು ವರ್ಷದ ಮಲ್ಲೇಶ್.. ಎರಡು ವರ್ಷದ ಮೌಲ್ಯ ಎಂಬ ಮಕ್ಕಳಿದ್ದರು.. ಈಗ ದೇವಿಕಾ ಮೂರನೇ ಮಗುವಿಗೆ ಗರ್ಭಿಣಿಯಾಗಿದ್ದಳು.. ದೇವಿಕಾಳನ್ನು ಮದುವೆಯಾದಾಗಿನಿಂದಲೂ ಅನುಮಾನ ಪಡುತ್ತಲೇ ಇದ್ದ.. ಇವನ ಗುಣವೇ ಅದಾಗಿತ್ತು.. ಮನೆಯಿಂದ ದೇವಿಕಾ ಹೊರಗೆ ಬರಲೇ ಬಾರದಿತ್ತು.. ಬಟ್ಟೆ ಒಗೆಯಲು ಪಾತ್ರೆ ತೊಳೆಯಲು ಯಾವುದಕ್ಕೂ ಸಹ ಬರಬಾರದಿತ್ತು.. ಇಷ್ಟೊಂದು ಸಂಶಯದ ಗುಣವುಳ್ಳ ಗಂಡನ ಜೊತೆ ಆರು ಬರ್ಷ ಏಗಿದ್ದಳು ಆ ಮಹಾತಾಯಿ.. ಆದರೂ ಸಹ ಅವಳ ಅದೃಷ್ಟ ಚೆನ್ನಾಗಿರಲಿಲ್ಲ..

ಕಳೆದ ಹತ್ತು ದಿನಗಳ ಹಿಂದೆ ಎರಡನೇ ಮಗುವಿಗೆ ಆರೋಗ್ಯ ಸರಿ ಇಲ್ಲದ ಕಾರಣ ತವರು ಮನೆಗೆ ಹೋಗಿದ್ದಳು.. ಈ ರಾಜೇಶನೂ ಕೂಡ ಮಾವನ ಮನೆಯಲ್ಲಿಯೇ ಟೆಂಟ್ ಹಾಕಿದ್ದ.. ಆದರೆ ನಿನೆ ಇದ್ದಕಿದ್ದ ಹಾಗೆ ನಂಜಂಗೂಡಿನಲ್ಲಿ ಆಸ್ಪತ್ರೆಗೆ ತೋರಿಸಿಕೊಂಡು ಹಾಗೇ ದೇವಸ್ಥಾನಕ್ಕೆ ಹೋಗಿ ಬರ್ತೀವಿ ಎಂದು ಹೆಂಡತಿಯನ್ನು ಕರೆದುಕೊಂಡು ಬಂದಿದ್ದಾನೆ.. ಸಂಜೆ ಏಳು ಗಂಟೆ ಸಮಯದಲ್ಲಿ ಹೆಂಡತಿಯನ್ನು ನಂಜನಗೂಡಿನ ಕಪಿಲಾ ಹೊಳೆಯ ಬಳಿ ಕರೆದುಕೊಂಡು ಬಂದಿದ್ದಾನೆ.. ಅಲ್ಲೇನು ಹೆಚ್ಚು ನೀರು ಸಹ ಇರಲಿಲ್ಲ.. ಆದರೂ ಸಹ ಇದ್ದಷ್ಟು ನೀರಿನಲ್ಲಿಯೇ ಹೆಂಡತಿಯನ್ನು ಮುಳುಗಿಸಿ ಅವಳು ಜೀವ ಕಳೆದುಕೊಳ್ಳುವ ವರೆಗೂ ಮನುಷ್ಯತ್ವವೇ ಇಲ್ಲದೇ ಹಾಗೆಯೇ ಹಿಡಿದು ಕೊಂಡಿದ್ದಾನೆ.. ಆ ಗರ್ಭಿಣಿ ಹೆಂಡತಿ ಆ ಕೊಎ ಘಳಿಗೆಯಲ್ಲಿ ಅದೆಷ್ಟು ನೋವು ಪಟ್ಟಳೋ.. ನೀರಿನೊಳಗೆ ಅದೆಷ್ಟು ಸಂಕಟ ಪಟ್ಟಳೋ.. ನೆನೆದರೆ ಸಂಕಟವಾಗುತ್ತದೆ..

ಹೆಂಡತಿಯನ್ನು ಇಲ್ಲವಾಗಿಸಿದ ನಂತರ ತನ್ನ ಮೊದಲನೇ ಮಗನನ್ನು ಅದೇ ರೀತಿ ನೀರಿನಲ್ಲಿ ಮಾಡಲು ನೋಡಿದ್ದಾನೆ.. ಆದರೆ ಆ ಮಗು ಕಿರುಚಿಕೊಂಡಿದೆ.. ತಕ್ಷಣ ದೂರದಲ್ಲಿದ್ದ ತೆಪ್ಪ ಓಡಿಸುವವರು ಸ್ಥಳಕ್ಕೆ ಬಂದಿದ್ದಾರೆ.. ತಕ್ಷಂಅ ಮಗುವನ್ನು ಕಾಪಾಡಿಕೊಂಡಿದ್ದಾರೆ.. ಆದರೆ ಅವರಿಗೆ ಅದಾಗಲೇ ಹೆಂಡತಿಯನ್ನು ಮುಳುಗಿಸಿದ್ದಾನೆ ಎಂದು ತಿಳಿದಿರಲೇ ಇಲ್ಲ.. ತಕ್ಷಣ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.. ಆನಂತರವೇ ಹೆಂಡತಿಯನ್ನೂ ಸಹ ಇಲ್ಲವಾಗಿಸಿರುವ ವಿಚಾರ ಬಾಯಿಬಿಟ್ಟಿದ್ದಾನೆ.. ತಕ್ಷಣ ತೆಪ್ಪ ಓಡಿಸುವವರು ಆಕೆಯನ್ನು ಮೇಲೆತ್ತಿದ್ದಾರೆ.. ಆದರೆ ಅದಾಗಲೇ ಕಾಲ ಮಿಂಚಿ ಹೋಗಿತ್ತು.. ಇಂತಹವನ ಜೊತೆ ಆರು ವರ್ಷ ಸಂಸಾರ ಮಾಡಿದ್ದಕ್ಕೆ ಮೂವತ್ತೈದು ವರ್ಷಕ್ಕೆ ಹೊಟ್ಟೆಯಲೊಂದು ಮಗುವನ್ನು ಇಟ್ಟುಕೊಂಡು ಜೀವ ಕಳೆದುಕೊಂಡೇ ಬಿಟ್ಟಳು..

ಆತ ಹೆಂಡತಿಯ ನಂತರ ಎರಡೂ ಮಕ್ಕಳನ್ನೂ ಸಹ ಅದೇ ರೀತಿ ಮಾಡಬೇಕು ಎಂದುಕೊಂಡಿದ್ದನಂತೆ.. ನಂತರ ನಂಜನಗೂಡಿನ ರೈಲ್ವೇ ಪೊಲೀಸರು ದೇವಿಕಾಳ ಅಪ್ಪ ಅಮ್ಮನಿಗೆ ಫೋನ್ ಮಾಡಿ ನೇರವಾಗಿ ವಿಚಾರ ಹೇಳಬಾರದು ಎಂದು ಮಗಳು ಅಳಿಯ ಜಗಳ ಮಾಡಿಕೊಂಡಿದ್ದಾರೆ.. ಠಾಣೆಯಲ್ಲಿ ಇದ್ದಾರೆ ಬನ್ನಿ ಎಂದು ಕರೆಸಿಕೊಂಡು ನಂತರ ನಿಧಾನವಾಗಿ ವಿಚಾರ ತಿಳಿಸಿದ್ದಾರೆ.. ಆ ವಯಸ್ಸಾದ ತಂದೆ ತಾಯಿಯ ಆಕ್ರಂದನ ನಿಜಕ್ಕೂ ಮುಗಿಲು ಮುಟ್ಟುವಂತಿತ್ತು.. ತನಗೆ ತನ್ನ ಗಂಡ ಎಷ್ಟೇ ನೋವು ಕೊಟ್ಟರೂ ಅದನ್ನು ತಾಯಿಯ ಬಳಿ ಹೇಳಿಕೊಂಡು ಅಪ್ಪಯ್ಯನಿಗೆ ಹೇಳಬೇಡ.. ನೊಂದುಕೊಳ್ತಾನೆ ಎನ್ನುತ್ತಿದ್ದಳಂತೆ ಆ ಮಹಾತಾಯಿ.. ನಿಜಕ್ಕೂ ಆರು ವರ್ಷದಲ್ಲಿ ಇಂತಹವನಿಂದ ಅದೆಷ್ಟು ನೋವು ಅನುಭವಿಸಿದಳೊ ಈ ರೀತಿ ಆಕೆಯ ಜೀವನ ಕೊನೆಯಾಗಿ ಹೋಯ್ತು..
ದೇವಿಕಾ ಮಾತ್ರವಲ್ಲ ಇಂತಹ ಮನಸ್ಥಿತಿಯವರು ಸಾಕಷ್ಟು ಜನರಿದ್ದು ಬಹಳಷ್ಟು ಹೆಣ್ಣು ಮಕ್ಕಳು ಪ್ರತಿದಿನ ಇಂತಹ ನೋವು ಅನುಭವಿಸುತ್ತಾ ಹೆತ್ತವರಿಗೆ ಹೇಳಿಕೊಳ್ಳಲೂ ಆಗದೆ ಬಿಡಲೂ ಆಗದೇ ಜೀವನ ಸಾಗಿಸುತ್ತಿರುವುದು ಅಷ್ಟೇ ಸತ್ಯ.. ಆದರೆ ಆ ಮಕ್ಕಳು ಅದೇನು ತಪ್ಪು ಮಾಡಿದವು.. ಹೊಟ್ಟೆಯಲ್ಲಿದ್ದ ಆ ಕಂದ ಏನು ತಪ್ಪು ಮಾಡಿತು ಎಂದು ಈ ಶಿಕ್ಷೆ.. ದಯವಿಟ್ಟು ಬದಲಾಗಿ.. ಇಂತಹ ಮನಸ್ಥಿತಿಯವರು ಯಾರಾದರು ಇದ್ದರೆ ದಯವಿಟ್ಟು ಬದಲಾಗಿ.. ಇರೋದು ಮೂರು ದಿನ ಇದ್ದಷ್ಟು ದಿನ ನಿಮ್ಮವರ ಜೊತೆ ಒಳ್ಳೆಯ ಜೀವನ ಮಾಡಿ..