Advertisements

ರಾಮಾಚಾರಿ ಸೀರಿಯಲ್ ರಾಮಾಚಾರಿ ಅಮ್ಮ ನಿಜ ಜೀವನದಲ್ಲಿ ಹೇಗಿದ್ದಾರೆ ಗೊತ್ತಾ?

Cinema

90ರ ದಶಕದಲ್ಲಿ ಅತಿ ಹೆಚ್ಚು ಗ್ಲಾಮರಸ್ ಪಾತ್ರಗಳಿಂದ ಹೆಸರು ಪಡೆದುಕೊಂಡಿದ್ದ ನಟಿ ಅಂಜಲಿ ಸುಧಾಕರ್ ಅವರು ಕಾಶಿನಾಥ್ ಅವರ ಸಿನಿಮಾದ ಮೂಲಕ ನಟನೆ ಶುರುಮಾಡಿದ ಅಂಜಲಿಯವರು ಕನ್ನಡದ ಸ್ಟಾರ್ ನಟರಾದ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ರೆಬಲ್ ಸ್ಟಾರ್ ಅಂಬರೀಶ್ ಇವರೆಲ್ಲರ ಜೊತೆ ನಟಿಸಿ ಸೈ ಎನಿಸಿಕೊಂಡವರು. ಆಗಿನ ಕಾಲದಲ್ಲಿ ಬಹಳ ಬೇಡಿಕೆಯ ನಟಿಯರಲ್ಲಿ ಇವರು ಒಬ್ಬರು .ಇನ್ನು 21 ವರ್ಷಗಳ ಬಿಗ್ ಬ್ರೇಕ್ ಪಡೆದಿದ್ದಕ್ಕೆ ನಟಿ ಅಂಜಲಿ ಈಗವರ ಫ್ಯಾಮಿಲಿ ಹೇಗಿದೆ ನೋಡೋಣ 90ರ ದಶಕದಲ್ಲಿ ನಟಿ ಅಂಜಲಿ ಸಿನಿಮಾ ಮತ್ತು ಸೀರಿಯಲ್ ಎರಡರಲ್ಲೂ ನಟಿಸಿದ್ದಾರೆ .ಕಿರುತೆರೆ ಕೂಡ ಅವರಿಗೆ ಹೊಸದೇನಲ್ಲ ಆಗಿನ ಕಾಲದಲ್ಲಿ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ಅವರು ಮದುವೆಯಾದ ನಂತರ ಅವರ ಪತಿ ದುಬೈನಲ್ಲಿದ್ದ ಕಾರಣ ಚಿತ್ರರಂಗ ತೊರೆದು ದುಬೈಗೆ ಹೋಗಿ ನೆಲೆಸುವ ಪರಿಸ್ಥಿತಿ ಎದುರಾಯಿತು.

Advertisements
Advertisements

ಎಲ್ಲರಂತೆ ಅವರಿಗೂ ಸಹ ಕುಟುಂಬ ಮುಖ್ಯ ಹಾಗಾಗಿ ನಟಿ ಅಂಜಲಿ ಚಿತ್ರರಂಗ ತೊರೆದು ದುಬೈಗೆ ಹೋಗಿ ನೆಲೆಸಿ ಗಂಡನನ್ನು ಚೆನ್ನಾಗಿ ನೋಡಿಕೊಳ್ಳಲು ಶುರು ಮಾಡಿದರು ಅಂಜಲಿ ಅವರಿಗೆ ಇಬ್ಬರು ಹೆಣ್ಣುಮಕ್ಕಳು ಸಿರಿ ಮತ್ತು ಸಮೃದ್ಧಿ ಮಕ್ಕಳು ಹುಟ್ಟಿದ ನಂತರ ಸಂಪೂರ್ಣ ಫುಲ್ ಟೈಮ್ ಗೃಹಿಣಿಯಾಗಿ ಮಕ್ಕಳು ಮತ್ತು ಗಂಡನನ್ನು ನೋಡಿಕೊಳ್ಳುತ್ತಿದ್ದರು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು ಇಬ್ಬರನ್ನು ಒಳ್ಳೆಯ ರೀತಿ ಬೆಳೆಸಬೇಕು ಎಂಬ ಕಾರಣದಿಂದ ಬೇರೆಯಲ್ಲ ಕೆಲಸಗಳನ್ನು ಬಿಟ್ಟು ಮಕ್ಕಳ ಪಾಲನೆ ಪೋಷಣೆಯಲ್ಲಿ ತೊಡಗಿಕೊಂಡರು. ಈಗ ಅಂಜಲಿಯವರು ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ .ಅಂಜಲಿ ಅವರ ಸಹೋದರ ತೀರಿಕೊಂಡಾಗ ನಟಿ ಅಂಜಲಿ ಕಾರಣಾಂತರ ಬೆಂಗಳೂರಿಗೆ ಬಂದರು ಇಲ್ಲಿಗೆ ಬಂದ ಮೇಲೆ ಕೊರೋನಾ ಶುರುವಾಗಿ ಮತ್ತೆ ದುಬೈಗೆ ಹೋಗಲು ಸಾಧ್ಯವಾಗಲಿಲ್ಲ.

ಬೆಂಗಳೂರಿಗೆ ಬಂದಾಗ ಒಂದು ಕಾರ್ಯಕ್ರಮಕ್ಕೆ ಹೋಗಿದ್ದಾಗ ಮಾಧ್ಯಮದವರು ಅಂಜಲಿ ಅವರನ್ನು ಗುರುತಿಸಿ ಮಾತನಾಡಿಸಿದರು ಈಗೇನು ಅಂಜಲಿಯವರು ವಾಪಸ್ ಬಂದಿದ್ದಾರೆ ಎಂಬ ವಿಚಾರವನ್ನು ಕೆಲವು ಮಾಧ್ಯಮದವರು ಅವರನ್ನು ತಲುಪಿ ಸಂದರ್ಶನ ಮಾಡಿದರು. ಮಕ್ಕಳು ದೊಡ್ಡವರಾಗಿ ಇರುವ ಕಾರಣದಿಂದ ಮತ್ತೆ ನಟನೆಗೆ ಹೊರಡಲು ಸಿದ್ದವಿದ್ದೇನೆ ಎಂದು ಹೇಳಿದರು. ಆ ಸಮಯದಲ್ಲಿ ಪುನೀತ್ ರಾಜಕುಮಾರ್ ಅವರ ಬ್ಯಾನರ್ ನಲ್ಲಿ ಸಿದ್ಧವಾಗುತ್ತಿದ್ದ ನೇತ್ರಾವತಿ ಧಾರವಾಹಿಯಲ್ಲಿ ಬಾಗಿರಥಿ ಅವರ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಅಂಜಲಿ ಅವರಿಗೆ ಸಿಕ್ಕಿತು. ಪ್ರಸ್ತುತ ರಾಮಾಚಾರಿ ಧಾರವಾಹಿಯಲ್ಲಿ ರಾಮಾಚಾರಿ ಅವರ ತಾಯಿ ಜಾನಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ .ಜಾನಕಿ ಪಾತ್ರಕ್ಕೆ ಅಭಿಮಾನಿಗಳ ಕಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆಯಂತೆ.