Advertisements

ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಚಿತ್ರವನ್ನು ನೀಡಿದ ನಟ ರಮೇಶ್ ಅರವಿಂದ್ ಅವರ ಮತ್ತೊಂದು ಹೊಸ ಚಿತ್ರ 100 ಬಿಡುಗಡೆ.. ಹೇಗಿದೆ ಗೊತ್ತಾ?

Cinema

ಕನ್ನಡ ಚಿತ್ರರಂಗದಲ್ಲಿ ಹಲವಾರು ನಟರು ನಿರ್ದೇಶಕರಾಗಿ ಯಶಸ್ವಿಯಾಗಿದ್ದಾರೆ. ಅವರಲ್ಲಿ ನಮ್ಮ ನಿಮ್ಮೆಲ್ಲರ ನೆಚ್ಚಿನ ರಮೇಶ್ ಅರವಿಂದ್ ರವರು ಕೂಡ ಒಬ್ಬರು. ಇದನ್ನು ರಮೇಶ್ ಅರವಿಂದ್ ರವರು ಮತ್ತೊಮ್ಮೆ ಈಗ 100 ಚಿತ್ರದ ಮೂಲಕ ಸಾಬೀತು ಪಡಿಸಿದ್ದಾರೆ. ಶಿವಾಜಿ ಸುರತ್ಕಲ್ ಚಿತ್ರದ ನಂತರ ಮತ್ತೊಮ್ಮೆ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಚಿತ್ರವನ್ನು ನೀಡಿದ್ದಾರೆ ನಮ್ಮ ರಮೇಶ್ ಅರವಿಂದ್ ಅವರು. 100 ಚಿತ್ರ ಈಗಾಗಲೇ ಬಿಡುಗಡೆಯಾಗಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

Advertisements
Advertisements

ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರ ಹಾಗೂ ಚಿತ್ರದ ಕಥೆ ಮಾಮೂಲಿ ಚಿತ್ರಗಳಿಗೆ ಹೋಲಿಸಿದರೆ ಸಾಕಷ್ಟು ವಿಭಿನ್ನವಾಗಿದೆ. ಹಿಂದೆ ಯಾರೂ ಕೂಡ ಕನ್ನಡ ಚಿತ್ರರಂಗದಲ್ಲಿ ಮಾಡದಂತಹ ಸಬ್ಜೆಕ್ಟ್ ಅನ್ನು ಪ್ರೇಕ್ಷಕರಿಗೆ ತಿಳಿಸಿದ್ದಾರೆ ರಮೇಶ್ ಅರವಿಂದ್ ರವರು. 100 ಚಿತ್ರದ ಮೂಲಕ ಸೈಬರ್ ಕ್ರೈ’,ಮ್ ಕುರಿತಂತೆ ಜನರಲ್ಲಿ ತಿಳುವಳಿಕೆ ಮೂಡಿಸಲಾಗಿದೆ. ಕೇವಲ ಎಂಟರ್ಟೈನ್ಮೆಂಟ್ ಮಾತ್ರವಲ್ಲದೆ ಇನ್ಫಾರ್ಮಶನ್ ಕೂಡ ಈ ಚಿತ್ರದಲ್ಲಿದೆ. ಕೊಟ್ಟ ಕಾಸಿಗೆ ಪಕ್ಕಾ ಪೈಸಾ ವಸೂಲ್ ಎಂಟರ್ಟೈನ್ಮೆಂಟ್ ಸಿಗೋದು ಗ್ಯಾರಂಟಿ.

ಈಗಾಗಲೇ 100 ಚಿತ್ರ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಅನ್ನು ಪಡೆದುಕೊಂಡಿದೆ. ಚಿತ್ರದ ಕಥೆ ಪ್ರೇಕ್ಷಕರಿಗೆ ಬಹಳಷ್ಟು ಇಷ್ಟವಾಗಿದ್ದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಶತದಿನೋತ್ಸವವನ್ನು ಕಾಣುವುದು ಖಂಡಿತ. 100 ಚಿತ್ರ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾದ ಎಲ್ಲರ ನೆಚ್ಚಿನ ಚಿತ್ರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಎಲ್ಲಾ ಫ್ಯಾಮಿಲಿ ಆಡಿಯನ್ಸ್ ಕುಟುಂಬದೊಂದಿಗೆ ಕುಳಿತು ನೋಡ ಬೇಕಾದಂತಹ ಬಹುಮುಖ್ಯ ಚಿತ್ರ. 100 ಚಿತ್ರ ಕಂಡಿತವಾಗಿಯೂ ಸಮಾಜದಲ್ಲಿ ಒಂದು ಒಳ್ಳೆಯ ಪರಿವರ್ತನೆ ತರುವುದರಲ್ಲಿ ಯಾವುದೇ ಅನುಮಾನವಿಲ್ಲ.