Advertisements

ವರ್ಷದ ಹಿಂದಷ್ಟೇ ಮದುವೆ.. ಆದರೆ ಇಂದು ಈಕೆಯ ಸ್ಥಿತಿ ಏನಾಗಿದೆ ಗೊತ್ತಾ.. ಸುಂದರವಾದ ಪತ್ನಿಯನ್ನು ಗಂಡ ಮಾಡಿದ್ದೇ ಬೇರೆ..

Kannada News

ಮದುವೆ ಅನ್ನೋ‌ ಮೂರಕ್ಷರದ ಪದ ಜೀವನದಲ್ಲಿ ಗಂಡ ಹೆಂಡತಿಯ ನಡುವಿನ ಪರಸ್ಪರ ನಂಬಿಕೆ ಎನ್ನುವ ಮೂರಕ್ಷರದ ಪದದ ಮೇಲೆ ನಿಂತಿರುವುದು ಅಕ್ಷರಶಃ ಸತ್ಯದ ಮಾತು.. ಹೆತ್ತು ಹೊತ್ತು ಸಾಕಿದ ಅಪ್ಪ ಅಮ್ಮನನ್ನು ಬಿಟ್ಟು ಗಂಡನನ್ನು ನಂಬಿ ಆತನ ಮನೆ ಬೆಳಗಲು ಬರುವ ಹೆಣ್ಣು ಮಗಳು ಇಟ್ಟುಕೊಳ್ಳುವ ನಿರೀಕ್ಷೆ ಎಂದರೆ ಅದು ಗಂಡನ ಮೇಲಿನ ಭರವಸೆ ಹಾಗೂ ಆತನಿಂದ ಚೂರು ಪ್ರೀತಿಯಷ್ಟೇ.. ಅದೇ ರೀತಿ ಗಂಡನನ್ನು ನಂಬಿ ಬಂದು ಭವಿಷ್ಯ ಕಟ್ಟಿಕೊಳ್ಳುವ ಸಾವಿರಾರು ಕಮಸು ಕಂಡಿದ್ದ ಈ ಸುಂದರ ಪತ್ನಿಯ ಇಂದಿನ ಸ್ಥಿತಿ ನೋಡಿದರೆ ನಿಜಕ್ಕೂ ಮನಕಲಕುತ್ತದೆ..

ಹೌದು ಈ ಹೆಣ್ಣು ಮಗಳ ಹೆಸರು ವನಿತಾ.. ವಯಸ್ಸಿನ್ನು ಕೇವಲ‌ ಇಪ್ಪತ್ತೈದು.. ತುಮಕೂರು ಜಿಲ್ಲೆಯ ನಂದಿಹಳ್ಳಿ ಗ್ರಾಮದ ನಿವಾಸಿ.. ಕಳೆದ ವರ್ಷವಷ್ಟೇ ವನಿತಾಳನ್ನು ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯ ಅನ್ನಪೂರ್ಣೇಶ್ವರಿ ಲೇಔಟ್ ನಲ್ಲಿ ವಾಸವಿದ್ದ ರಾಮು ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು.. ರೈತಾಪಿ ಕುಟುಂಬದ ಹೆಣ್ಣು ಮಗಳು.. ಆದರೆ ಮಗಳು ಸಂತೋಷವಾಗಿರಲಿ.. ಆಕೆಗೆ ಏನೂ ತೊಂದರೆ ಆಗಬಾರದು.. ಯಾವುದೂ ಕಡಿಮೆ ಆಗಬಾರದೆಂದು ವನಿತಾಳ ತಂದೆ ತಾಯಿ ಸಾಲಸೋಲ ಮಾಡಿ ಕಳೆದ ವರ್ಷ ಕೈಮೀರಿ ಅದ್ಧೂರಿಯಾಗಿಯೇ ಮದುವೆ ಮಾಡಿದ್ದರು.. ಅಳಿಯನಿಗೆ ಕೊಡಬೇಕಾದದ್ದನ್ನೂ ಕೊಟ್ಟಿದ್ದರು.. ಆದರೆ ಮದುವೆಯಾಗಿ ಒಂದು ವರ್ಷ ಕಳೆಯಿತು.. ಮಗಳು ಗರ್ಭಿಣಿ ಎಂಬ ಸಂತೋಷದ ವಿಚಾರವನ್ನು ತಿಳಿಯಬೇಕಿದ್ದ ಹೆತ್ತವರು‌ ಇಂದು ಮಗಳು ಇದ್ದ ಸ್ಥಿತಿ ನೋಡಿ ಬೆಚ್ಚಿಬಿದ್ದಿದ್ದಾರೆ..

ಹೌದು ಕಳೆದ ವರ್ಷ ಮದುವೆಯಾದ ವನಿತಾ ರಾಮು ಶುರುವಿನಲ್ಲಿ ಚೆನ್ನಾಗಿಯೇ ಇದ್ದರು.. ಆದರೆ ಕೆಲವೇ ದಿನಗಳಲ್ಲಿ ಆತನ ಅಸಲಿ ಬಣ್ಣ ಬಯಲಾಗಿದೆ.. ಹೌದು ರಾಮು ನಿತ್ಯವೂ ಪತ್ನಿ ವನಿತಾಗೆ ನೋವು ನೀಡಲು ಆರಂಭಿಸಿದ.. ತವರು ಮನೆಯಿಂದ ಹಣ ತರುವಂತೆ ಪೀಡಿಸಲು ಶುರು ಮಾಡಿದ.. ಅತ್ತ ಈ ವಿಚಾರ ತಿಳಿದರೆ ಅಪ್ಪ ಅಮ್ಮ ನೊಂದು ಕೊಳ್ಳುವರು ಎಂದು ಭಾವಿಸಿ ವನಿತಾ ನೋವನ್ನೆಲ್ಲಾ ಸಹಿಸಿಕೊಂಡಳು.. ಆದರೆ ರಾಮುವಿನ ನಡವಳಿಕೆ ಅತಿರೇಕಕ್ಕೆ ಹೋಯಿತು.. ಕೊನೆಗೆ ವಿಧಿಯೇ ಇಲ್ಲದೇ ಅಪ್ಪ ಅಮ್ಮನಿಗೆ ವಿಚಾರ ತಿಳಿಸಿದ್ದಳು.. ಆದರೂ ಇಂದಲ್ಲಾ ನಾಳೆ ಗಂಡ ಸರಿ ಹೋಗಬಹುದೆಂದು ದಿನ ದೂಡುತ್ತಿದ್ದಳು..

ಆದರೆ ಹೆಸರಿಗೆ ರಾಮ ಎಂದು ಹೆಸರಿಟ್ಟುಕೊಂಡ ಆ ಮನಸ್ಸಾಕ್ಷಿಯೇ ಇಲ್ಲದ ವನಿತಾಳ ಗಂಡ ನಿತ್ಯವೂ ವನಿತಾಗೆ ನರಕ ತೋರಿಸಿಬಿಟ್ಟ. ಹಣ ತರುವಂತೆ ಪೀಡಿಸುತ್ತಲೇ ಇದ್ದ.. ಕೊನೆಗೆ ಕಟ್ಟಿಕೊಂಡ ಹೆಂಡತಿಯನ್ನೇ ಇಲ್ಲವಾಗಿಸಿಬಿಟ್ಟ.. ಹೌದು ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯಲ್ಲಿನ ಅನ್ನಪೂರ್ಣೇಶ್ವರಿ ಲೇಔಟ್ ನಲಿನ ತಮ್ಮ ನಿವಾಸದಲ್ಲಿಯೇ ರಾಮು ವನಿತಾಳನ್ನು ನಿನ್ನೆ ಇಲ್ಲವಾಗಿಸಿ ಬಿಟ್ಟ..‌ ಕೊನೆಗೆ ನಿಮ ಮಗಳೇ ತಾನಾಗಿಯೇ ಜೀವ ಕಳೆದುಕೊಂಡಿದ್ದಾಳೆ ಎಂದು ಕತೆ ಕಟ್ಟಿದ..

ಅತ್ತ ಕಳೆದ ವರ್ಷವಷ್ಟೇ ಮಗಳ ಮದುವೆ ಮಾಡಿದ್ದ ಆ ಹಿರಿಯ ಜೀವಗಳು ಈಗ ಮಗಳನ್ನು ಜೀವ ಕಳೆದುಕೊಂಡ ಸ್ಥಿತಿಯಲ್ಲಿ‌ ಕಂಡು ಕುಸಿದು ಬಿದ್ದಿದ್ದಾರೆ..‌ ಮಗಳು ತಾಯಿಯಾಗುವ ಸಿಹಿ ಸುದ್ದಿ ತರ್ತಾಳೆ ಎಂದುಕೊಂಡಿದ್ದೆವು ಆದರೆ ಇಂತಹ ಸ್ಥಿತಿಯಲ್ಲಿ ಬರ್ತಾಳೆ ಎಂದುಕೊಂಡಿರಲಿಲ್ಲ ಎಂದು ಆ ಹೆತ್ತವರ ಗೋಳಾಟ ಆಕ್ರಂದನ ನಿಜಕ್ಕೂ ಮುಗಿಲು ಮುಟ್ಟುವಂತಿತ್ತು.. ಸಧ್ಯ ಡಾಬಸ್ ಪೇಟ್ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವನಿತಾಳ ಗಂಡನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ..

ದುಡಿದು ಸಾಕುವ ಯೋಗ್ಯತೆ ಇಲ್ಲದ ಮೇಲೆ ಮದುವೆಯಾಗಬಾರದು. ಯಾರೇ ಆಗಲಿ ಹೆಂಡತಿ ಮಕ್ಕಳ ಜವಾಬ್ದಾರಿ ನಿಭಾಯಿಸಲು‌ ಹಿಂದೆ ಮುಂದೆ ನೋಡಿ ಕಂಡವರ ಬಳಿ ಕೈ ಒಡ್ಡುವವನು ನಿಜಕ್ಕೂ ಮದುವೆಯಾಗಲು ಅಯೋಗ್ಯನೆಂದರೂ ತಪ್ಪಲ್ಲ.. ಒಬ್ಬ ನಿಜವಾದ ಪುರುಷನ ಲಕ್ಷಣವೂ ಅಲ್ಲ.. ನಿಮ್ಮ ತೆ.. ತೀರಿಸಿಕೊಳ್ಳಲು ಮದುವೆಯಾಗಿ ಈ ರೀತಿ ಹೆಣ್ಣು ಮಕ್ಕಳ ಜೀವನವನ್ನು ಮುಕ್ತಾಯ ಮಾಡಿ ಹೆತ್ತವರಿಗೆ ನೋವು ನೀಡುವ ಬದಲು ಮದುವೆಯಾಗದೇ ಸುಮ್ಮನಿದ್ದರೇ ಒಳ್ಳೆಯದು.. ಆಕೆಯ ಹೆತ್ತವರಿಗೆ ಭಗವಂತ ಮಗಳ ಕಳೆದುಕೊಂಡ ಈ ನೋವು ತಡೆಯುವ ಶಕ್ತಿ ನೀಡಲಿ..