Advertisements

ಖ್ಯಾತ ನಟ ರಂಗಾಯಣ ರಘು ಅವರ ಹೆಂಡತಿ ಮತ್ತು ಮಗಳು ಯಾರು ಗೊತ್ತೇ ?? ಮೊದಲ ಬಾರಿಗೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ರಂಗಾಯಣ ರಘು ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ.. ರಂಗಾಯಣ ರಘು ಅವರು ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ನಟನಾಗಿದ್ದಾರೆ. ಅದ್ಭುತ ಪ್ರತಿಭೆ ಹೊಂದಿರುವ ಇವರು ಯಾವ ಪಾತ್ರ ಸಿಕ್ಕರೂ ಸಹ ಅದರಲ್ಲಿಯೇ ಜೀ’ವಿಸಿಬಿಡುತ್ತಾರೆ. ಹಾಸ್ಯ ಕಲಾವಿದನಾಗಿ ನಗಿಸಿ ಮನ ಮುಟ್ಟುವ ದೃಶ್ಯಗಳಲ್ಲಿ ಅಳಿಸಿ ಹಾಗೂ‌ ಖ’ಳನಾಯಕನಾಗಿಯೂ ಸಹ ಎಲ್ಲರ ಮನ ಗೆದ್ದಿದ್ದಾರೆ. ಚಿಕ್ಕಂದಿನಿಂದಲೇ ನಟನೆಯಲ್ಲಿ ಆಸಕ್ತಿ ಹೊಂದಿದ್ದ ಇವರು ತಾನೊಬ್ಬ ನಟನಾಗಬೇಕೆಂದು ಚಿಕ್ಕಂದಿನಿಂದಲೇ ಕನಸ್ಸು ಕಂಡವರು. ತಮ್ಮ ವಿಶಿಷ್ಠ ಮ್ಯಾನರಿಸಂ ಮೂಲಕ‌ ಕನ್ನಡ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಿದ್ದಾರೆ. ಸಿಕ್ಕ ಪಾತ್ರಗಳಲ್ಲಿ ಲೀಲಾಜಾಲವಾಗಿ ನಟಿಸಿ ಆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುತ್ತಾರೆ.

Advertisements
Advertisements

ಇವರು ಕೇವಲ ಹಾಸ್ಯ ನಟನಾಗಿ ಅಷ್ಟೇ ಅಲ್ಲದೆ ಖ’ಳನಟನಾಗಿಯೂ ಸಹ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್‌ ಅಭಿನಯದ ರಂಗ ಎಸ್.ಎಸ್.ಎಲ್.ಸಿ ಚಿತ್ರದಲ್ಲಿ ಇವರು ಪೋಷಿಸಿರುವ ಖಳನಟನ ಪಾತ್ರ ಯಾರೂ ಸಹ ಮರೆಯಲಾಗುವುದಿಲ್ಲ. ಸಿಕ್ಕ ಅವಕಾಶಗಳಲ್ಲಿ ತಾನೊಬ್ಬ ಪ್ರಬುದ್ಧ ನಟ ಎಂದು ಸಾಬೀತು ಪಡಿಸುಕೊಂಡರೂ ಸಹ ಇವರಿಗೆ ಬ್ರೇಕ್ ನೀಡಿದ ಚಿತ್ರ ಎಂದರೆ ಅದು ವಿಜಯ್ ಅವರ ದುನಿಯಾ. ಹೌದು ಸೂರಿ ಅವರ ನಿರ್ದೇಶನದಲ್ಲಿ ದುನಿಯಾ ವಿಜಯ್ ಹಾಗೂ ರಶ್ಮಿ ಅವರ ಅಭಿನಯದ ದುನಿಯಾ ಸಿನಿಮಾದಲ್ಲಿನ ಇವರ ಪಾತ್ರ ಯಾರೂ ಸಹ ಮರೆಯಲಾಗುವುದಿಲ್ಲ.

ದುನಿಯಾ ಚಿತ್ರದ ಬಳಿಕ ಕನ್ನಡಿಗರಿಗೆ ಇನ್ನೂ ಹತ್ತಿರವಾದ‌ ಇವರು ಹಾಸ್ಯನಟನಾಗಿ ಹಾಗೂ ಪೋಷಕ ನಟನಾಗಿ ಮಿಂಚಿದರು. ಇನ್ನು ಇವರ ಹೆಂಡತಿಯ ಹೆಸರು ಮಂಗಳ. ಇವರ ಹೆಂಡತಿ ಮಂಗಳ ಅವರು ಸಹ ರಂಗಭೂಮಿ‌ ಕಲಾವಿದೆಯಾಗಿದ್ದು ಸಂಚಾರಿ ಥಿಯೇಟರ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಅದರ ಮೂಲಕ ತಾವೇ ನಾಟಕಗಳನ್ನು ನಿರ್ದೇಶಿಸಿ ನಟಿಸುತ್ತಿದ್ದಾರೆ. ಇವರ ಮಗಳ ಹೆಸರು ಚುಕ್ಕಿ, ಚುಕ್ಕಿ ಅವರು ತನ್ನ ಡಿಗ್ರಿ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮುಗಿಸಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ತಾನೊಬ್ಬ ನಟನಾಗಬೇಕೆಂದು ಕನಸು ಕಂಡು ಅದಕ್ಕಾಗಿ ಪರಿಶ್ರಮ ಪಟ್ಟು‌ ಇಂದು‌ ಕನ್ನಡಿಗರೇ ಮೆ‍‍ಚ್ಚುವ ನಟನಾಗಿ ಹೊರಹೊಮ್ಮಿರುವ ರಂಗಾಯಣ ರಘು ಅವರ ಬಗ್ಗೆ ನೀವೇನಂತೀರ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ..