Advertisements

ಮುಂಬೈ ಜಿಮ್​ನಲ್ಲಿ ಒಟ್ಟಾಗಿ ವರ್ಕೌಟ್​ ಮಾಡಿದ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ. ಕೆಮರಾ ನೋಡಿ ಮುಖ ಮುಚ್ಚಿಕೊಂಡ ವಿಜಯ್. ಮುಂದೆ ಏನಾಯ್ತು ನೋಡಿ.

Cinema

ನಮಸ್ತೆ ಸ್ನೇಹಿತರೆ, ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಡುವೆ ಒಳ್ಳೆಯ ಗೆಳೆತನವಿದೆ. ಗೀತ ಗೋವಿಂದಂ ಸಿನಿಮಾದ ಮೂಲಕ ಇವರ ಗೆಳೆತನ ಶುರುವಾಗಿದೆ. ವಿಜಯ್ ಹಾಗೂ ರಶ್ಮಿಕಾ ಎರಡು ಸಿನಿಮಾಗಳಲ್ಲಿ ಪರಸ್ಪರ ನಟಿಸಿದ್ದಾರೆ. ಇವರಿಬ್ಬರು ಒಳ್ಳೆಯ ಗೆಳೆಯರಾಗಿ ಮುಂದುವರೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇವರಿಬ್ಬರು ಮುಂಬೈನ ಜಿಮ್ ಒಂದರಲ್ಲಿ ವರ್ಕೌಟ್ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ಮುಂಬೈನಲ್ಲಿ ಏಕೆ ಭೇಟಿಯಾಗಿದ್ದಾರೆ ನೋಡೋಣ ಬನ್ನಿ.

Advertisements
Advertisements

ರಶ್ಮಿಕಾ ಮಂದಣ್ಣ ಹಾಗೂ ವಿಜಯ್​ ದೇವರಕೊಂಡ ಒಟ್ಟಿಗೆ ಜಿಮ್​ನಿಂದ ಹೊರ ಬಂದಿದ್ದಾರೆ. ವಿಜಯ್​ ದೇವರಕೊಂಡ ಮುಖಕ್ಕೆ ಮಾಸ್ಕ್​ ಹಾಕಿ, ಸಂಪೂರ್ಣವಾಗಿ ಮುಖವನ್ನು ಕ್ಯಾಪ್​ನಿಂದ ಮುಚ್ಚಿಕೊಂಡು‌ ಎಲ್ಲರನ್ನೂ ಅಚ್ಚರಿ ಪಡಿಸಿದ್ದಾರೆ. ರಶ್ಮಿಕಾ ಮನಸ್ಪೂರ್ತಿಯಾಗಿ ನಗುತ್ತಾ ಇದ್ದರು. ಜಿಮ್​ ಹೊರಗೆ ಬಂದಾಗ ಮಾಧ್ಯಮಗಳ ಕ್ಯಾಮರಾ ಕಂಡಿದ್ದೇ ತಡ ಇಬ್ಬರೂ ಕಾರನ್ನು ಏರಿ ಅಲ್ಲಿಂದ ತೆರಳಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್​ ಇಬ್ಬರೂ ತಮ್ಮ ತಮ್ಮ ಸಿನಿಮಾಗಳ ಕೆಲಸಕ್ಕೆ ಮುಂಬೈಗೆ ತೆರಳಿದ್ದಾರೆ. ಈ ವೇಳೆ ಇಬ್ಬರೂ ಬಿಡುವಿನ ಸಮಯದಲ್ಲಿ ಮೀಟ್​ ಆಗುತ್ತಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ಒಟ್ಟಾಗಿ ಊಟ ಸವಿದಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದವು. ಈಗ ಅವರು ಜಿಮ್ ಗೆ ಹೋಗಿರುವ ಫೋಟೋಗಳು ವೈರಲ್ ಆಗುತ್ತಿವೆ. ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ವಿಜಯ್ ದೇವರಕೊಂಡ ಪೂರಿ ಜಗನ್ನಾಥ್ ನಿರ್ದೇಶನದ ಲೈಗರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.