Advertisements

ಅಬ್ಬಬ್ಬಾ ದೊಡ್ಡ ದೊಡ್ಡ ಸ್ಟಾರ್ ನಟರ ಮನೆಗಳನ್ನು ನಾಚಿಸುವಂತಿದೆ ನಟಿ ರಶ್ಮಿಕಾ ಮಂದಣ್ಣ ಭವ್ಯ ಬಂಗಲೆ! ನೋಡಿ ಒಮ್ಮೆ ಮನೆಯ ಒಳಭಾಗ ಹೇಗಿದೆ ಗೊತ್ತೆ?

Kannada News

ತನ್ನ ಚೊಚ್ಚಲ ಚಿತ್ರ ಕಿರಿಕ್ ಪಾರ್ಟಿ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದ ರಶ್ಮಿಕಾ ಮಂದಣ್ಣ, ಆ ಸಿನಿಮಾದಿಂದಾಗಿ ಕರ್ನಾಟಕ ಕ್ರಷ್ ಆಗಿದ್ದರು. ಎಲ್ಲರ ಬಾಯಲ್ಲೂ, ಮನಸಲ್ಲೂ ಸಾನ್ವಿ ಅನ್ನುವ ಹೆಸರೇ ಗುನುಗುಡುತ್ತಿತ್ತು. ಆದರೆ ಆ ನಂತರ ಸಾಲು ಸಾಲು ಬೇರೆ ಬೇರೆ ಸಿನಿಮಾಗಳಲ್ಲಿಯೂ ನಟಿಸಿ ನ್ಯಾಷನಲ್ ಕ್ರಷ್ ಆಗಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಇವರ ಹುಟ್ಟೂರು ಕೊಡಗು. ಎಪ್ರಿಲ್ 5 ರಂದು 1996 ರಲ್ಲಿ ಹುಟ್ಟಿದ ರಶ್ಮಿಕಾ ಅವರ ತಂದೆ ಹೆಸರು ಮದನ್ ಮಂದಣ್ಣ, ತಾಯಿ ಹೆಸರು ಸುಮನ್ ಮಂದಣ್ಣ. ರಶ್ಮಿಕಾ ಅವರಿಗೆ ಶಿಮಾನ್ ಮಂದಣ್ಣ ಅನ್ನುವ ಚಿಕ್ಕ ತಂಗಿ ಕೂಡ ಇದ್ದಾರೆ. ತಂಗಿ ಅಂದರೆ ರಶ್ಮಿಕಾ ಅವರಿಗೆ ಪಂಚ ಪ್ರಾಣ.

Advertisements
Advertisements

ರಶ್ಮಿಕಾ ಅವರು ಬೆಂಗಳೂರಿನ ರಾಮಯ್ಯ ಕಾಲೇಜಿನಲ್ಲಿ ಜರ್ನಲಿಸಂ, ಸೈಕಾಲಜಿ ಹಾಗೂ ಇಂಗ್ಲೀಷ್ ಲಿಟರೇಚರ್ ಪದವಿ ಪಡೆದಿದ್ದಾರೆ. ಇವರಿಗೆ ಮುಂಚಿನಿಂದಲೂ ಈ ನಟನನೆ, ಮಾಡೆಲಿಂಗ್ ಮೇಲೆ ವಿಪರೀತ ಆಸಕ್ತಿ ಇತ್ತು. ತನ್ನ ಕಾಲೇಜು ಲೈಫ್ ನಲ್ಲಿಯೇ ಹಲವಾರು ಕಡೆ ಮಾಡೆಲಿಂಗ್ ಮಾಡಿದ್ದರು. ಇದೇ ಸಮಯದಲ್ಲಿ ಅಂದರೆ 2016 ರಲ್ಲಿ ಅವರಿಗೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಟಿಸುವ ಆಫರ್ ಸಿಗುತ್ತದೆ. ಅದರಲ್ಲಿ ನಟಿಸಿದ್ದೇ ತಡ, ರಶ್ಮಿಕಾ ಅವರ ನಟನೆ ಹಾಗೂ ಕ್ಯೂಟ್ ನೆಸ್ ನೋಡಿ ಬೇರೆ ಬೇರೆ ಚಿತ್ರರಂಗದಿಂದಲೂ ಆಫರ್ ಬರುತ್ತದೆ. ನಂತರ ಆಕೆ ಮಾಡಿದ್ದೇಲ್ಲಾ ದೊಡ್ಡ ದೊಡ್ಡ ಸಿನಿಮಾಗಳೆ.

ಪುನೀತ್ ರಾಜ್ಕುಮಾರ್, ದರ್ಶನ್, ಗಣೇಶ್, ಸೇರಿದಂತೆ ಹಲವು ಸ್ಟಾರ್ ನಟರ ಜೊತೆಗೆ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುತ್ತಲೇ ಆಕೆ ತೆಲುಗಿನಲ್ಲಿ ಅದೃಷ್ಟ ಪರೀಕ್ಷೆಗಿಳಿದರು. ಅಲ್ಲಿಯೂ ರಶ್ಮಿಕಾಗೆ ಲಕ್ ಖುಲಾಯಿಸಿತು. ತೆಲುಗು ತಮಿಳಿನಲ್ಲಿ ಅಭಿನಯಿಸಿ ಬೇಡಿಕೆಯ ನಟಿಯಾಗಿ ಮಿಂಚಿದ್ದ ರಶ್ಮಿಕಾ ನಂತರ ಬಾಲಿವುಡ್’ನತ್ತ ಪ್ರಯಾಣ ಮಾಡಿದ್ರು. ಅಲ್ಲಿ ಮಿಷನ್ ಮಜ್ನು, ಗುಡ್ ಬೈ ಚಿತ್ರದಲ್ಲಿ ನಟಿಸಿದ್ದಾರೆ. ಹೀಗೆ ನ್ಯಾಷನಲ್ ಕ್ರಶ್, ಎಕ್ಸ್ ಪ್ರೆಷನ್ ಕ್ವೀನ್ ಅಂತೆಲ್ಲಾ ಕರೆಸಿಕೊಂಡಿರುವ ರಶ್ಮಿಕಾ ಮಂದಣ್ಣ ಅವರು ತಮ್ಮ ಊರಾದ ಕೊಡಗಿನ ವಿರಾಜಪೇಟೆಯಲ್ಲಿ ಭವ್ಯ ಮನೆಯನ್ನು ಹೊಂದಿದ್ದಾರೆ.

ಶುಭ್ರ ಬಿಳಿಬಣ್ಣದಲ್ಲಿರುವ ಎರಡಂತಸ್ತಿನ ಮನೆ ಇದಾಗಿದ್ದು, ಮನೆ ಪೂರ್ತಿ ಆಧುನಿಕ ಪೀಠೋಪಕರಣದಿಂದ ಅಲಂಕೃತಗೊಂಡಿದೆ. ತನ್ನ ಬಿಡುವಿನ ಸಮಯವನ್ನು ರಶ್ಮಿಕಾ ಅವರು ಇಲ್ಲೇ ಕಳೆಯುತ್ತಾರೆ. ತನ್ನ ಪ್ರೀತಿಯ ಸಾಕು ನಾಯಿಯ ಜೊತೆ ಆಟ ಆಡುವುದು, ಅದೇ ರೀತಿ ತನ್ನ ತಂಗಿಯ ಜೊತೆ ಕಾಲ ಕಳೆಯುವುದು, ಸುತ್ತಲಿನ ಹೂದೋಟಗಳಿಗೆ ನೀರು ಹಾಕುವುದು ಹೀಗೆ ತನ್ನ ಮನೆಯಲ್ಲಿರುವಷ್ಟು ಸಮಯ ಎಂಜಾಯ್ ಮಾಡುತ್ತಾರೆ.