Advertisements

ಕರ್ನಾಟಕದಲ್ಲಿ ಅತೀ ದೊಡ್ಡದಾದ ರಸ್ತೆ ಯಾವ ನಟನ ಹೆಸರಲ್ಲಿ ಇದೇ ಅಂತಾ ಗೊತ್ತಾ? ಈ ನಟನನ್ನ ಪ್ರತಿಯೊಬ್ಬರ ಮನೆಯಲ್ಲಿ ಪೂಜಿಸ್ತಾರೆ..

Kannada News

ನಮಸ್ಕಾರ ಪ್ರಿಯ ವೀಕ್ಷಕರೆ ನಾವೆಲ್ಲ ತಿಳಿದಿರೊ ಹಾಗೆ ಪ್ರಪಂಚದಲ್ಲಿರುವ ಬಹುಕ್ಷೇತ್ರಗಳಲ್ಲಿ ಸಿನೆಮಾ ರಂಗ ಕೂಡ ಒಂದು.‌ ಸದಾ ಕಾಲ ಬಣ್ಣ ಬಣ್ಣಗಳಿಂದ ಕೂಡಿದ್ದು ಚಿತ್ರರಂಗ ಅದೆಷ್ಟೊ ಜನರ ಮನದಲ್ಲಿ ಕನಸ್ಸಿನ‌ ಮಳೆ ಸುರಿಸಿರುತ್ತದೆ. ತಾನು ಒಬ್ಬ ನಟ,ನಟಿಯಾಗಬೇಕೆಂದು ಅದೆಷ್ಟೊ ಜನರು ಕನಸ್ಸು ಕಟ್ಟಿಕೊಂಡು ಈ‌ ಪೀಲ್ಡ್ಗೆ ಎಂಟ್ರಿ ಕೋಡ್ತಾರೆ. ಹೀಗೆ ಚಲನಚಿತ್ರ ರಂಗದಲ್ಲಿ ಏನಾದರು ಸಾಧನೆ ಮಾಡಬೇಕು ಅಂತ ಬಂದವರಿಗೆ ಒಳ್ಳೆಯ ಅವಕಾಶ ಒಂದೆಡೆಯಾದರೆ, ಇನ್ನೊಂದು ಕಡೆ ಲಕ್ ಬೇಕು ಎಂಬುವುದು ಹಲವರ ಅಭಿಪ್ರಾಯ. ಒಬ್ಬ ಕಲಾವಿದನಾದರೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರನು ಆಗುತ್ತಾನೆ, ಮಾಧ್ಯಮಗಳ ಬಾಯಿಗು ಸಿಗುತ್ತಾ‌ನೆ.

ನಾವೆಲ್ಲ‌ ನಟ ನಟಿಯರೆಂದರೆ ಅವರಿಗೆ ಯಾವುದೇ ತೊಂದರೆ ಇರುವುದಿಲ್ಲ,‌ಸದಾ ಖುಷಿಯಾಗಿ ಇರುತ್ತಾರೆ ಅಂತ ಯೋಚನೆ ಮಾಡ್ತಿವಿ.‌ಕೆಲವೂಮ್ಮೆ‌ ನಮಗು ಅವರ ಹಾಗೆ ಜಾಲಿ ಬದುಕಿದ್ದರೆ ಎಷ್ಟು ಚನ್ನಾಗಿರುತ್ತಿತ್ತು ಅಂತ ಕನಸ್ಸು ಕಾಣ್ತಿವಿ.ಆದರೆ ಕಂಡ ಕನಸ್ಸು ನನಸ್ಸಾಗಬೇಕಾದರೆ ಅನೇಕ ಸಮಸ್ಯೆಗಳನ್ನು, ‌ತೊಂದರೆಗಳನ್ನು ದಾಟಿ ಬಂದಾಗಲೇ ಜೀವನದಲ್ಲಿ ಯಾವುದಾದರೊಂದು ಉತ್ತಮ ಸ್ಥಾನ ಸಿಗುವುದು. ನಮ್ಮ ಹಿಂದಿನ ಕನ್ನಡ ಚಲನಚಿತ್ರದ ನಟರನ್ನು ಜ್ಞಾಪಿಸಿಕೊಂಡರೆ ನಿಜಕ್ಕು ಅವರ ನಡೆನುಡಿ, ಜೀವನ ಎಲ್ಲವೂ ನಮ್ಮೆಲ್ಲರ ಬದುಕಿಗೆ ಮಾರ್ಗದರ್ಶನ. ಅವರು ಚಿತ್ರಗಳ ಮೂಲಕ ಬದುಕಿನ ನೀತಿಗಳನ್ನು ನಮಗೆಲ್ಲ ನಟನೆಯ ಮೂಲಕ ತಿಳಿಸಿದ್ದಾರೆ.

ಇನ್ನು ಹಲವು ನಟರು ಕೇವಲ ನಟನೆ ಮಾತ್ರವಲ್ಲದೆ ಸಮಾಜ ಸುಧಾರಣೆಗೂ ಕೂಡ ಕೈ ಹಾಕಿದ್ದಾರೆ.‌ ಬಡ ಮಕ್ಕಳ ಶಿಕ್ಷಣ, ಅನಾಥ ಆಶ್ರಮ, ವೃದ್ಧಾಶ್ರಮ, ಗೋ ದಾಮಗಳು ಹೀಗೆ ಎಲೆ ಮರೆಯ ಕಾಯಿಯಂತೆ ಕೆಲಸ ಮಾಡಿದ್ದಾರೆ. ಹೀಗೆ ಯಾರಿಗು ತಿಳಿಯದಂತೆ ಶ್ರಮಿಸಿದ ನಟರ ಹೆಸರುಗಳನ್ನು ಕರ್ನಾಟಕದ ಉದ್ದ ವಾದ ರಸ್ತೆಗಳಿಗೆ ಇಡಲಾಗಿದೆ. ಆ ನಟರು ಯಾರು ಅಂತೀರಾ…..ಇಲ್ಲಿದೆ ನೋಡಿ. ಹೌದು ಅವರು ಮಾಡಿದ ಸಮಾಜ ಸೇವೆ ಅವರು ನಮ್ಮೆಲ್ಲರನ್ನು ಬಿಟ್ಟು ಅಗಲಿದಾಗ ಬೆಳಕಿಗೆ ಬಂತು. ನಗು ಮೊಗದ ಸರದಾರ, ಅಭಿಮಾನಿಗಳ ಪರಮಾತ್ಮ,

ಪವರ ಸ್ಟಾರ್ ಪುನೀತ ರಾಜಕುಮಾರ ನಮ್ಮನ್ನೆಲ್ಲ ಅಗಲಿಗೆ ಒಂದು ವರುಷವೇ ಕಳೆಯಲು ಬಂತು ಆದರೆ ಅವರ ನೆನಪು ನಮ್ಮಿಂದ ಎಂದಿಗೂ ಮಾಸುವುದಿಲ್ಲ. ಅವರ ಈ ಸೇವೆಗಾಗಿ ಮೈಸೂರು ರಸ್ತೆ ನಾಯಂಡಳ್ಳಿ ಜಂಕ್ಷನ್ ನಿಂದ ಹಿಡಿದು ಬನ್ನೇರುಘಟ್ಟ ರಸ್ತೆಯ ಮೆಗಾ ಸಿಟಿ ಮಾಲ್ ಜಂಕ್ಷನ್ ವರೆಗೆ ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಎಂದು ಹೆಸರು ಇಡಲಾಗಿದೆ. ಇನ್ನು 12 ಕಿಲೋಮೀಟರ್ ಇರುವ ರಸ್ತೆ ಇದಾಗಿದ್ದು, ನಿಜಕ್ಕೂ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ಇದು ಕನ್ನಡ ನಟನ ಹೆಸರಿನಲ್ಲಿರುವ ಉದ್ದವಾದ ರಸ್ತೆ ಇದಾಗಿದೆ.

ಇನ್ನು ಎರಡನೆಯದಾಗಿ ಹೇಳಬೇಕಾದರೆ, ನಟಸಾರ್ವಭೌಮ, ರಾಜಣ್ಣ ಅವರ ಹೆಸರನ್ನು ಸಹ ಅನೇಕ ರಸ್ತೆಗಳಿಗೆ ಇಡಲಾಗಿದೆ. ಅವರ ನೆನಪಿಗಾಗಿ,‌ಬೆಂಗಳೂರು ಸೇರಿದಂತೆ ಅನೇಕ ರಸ್ತೆಗಳಿಗೆ ಅವರ ಹೆಸರಿನಿಂದಲೇ ಗುರುತಿಸಲಾಗಿರುತ್ತದೆ. ಅದರಲ್ಲಿ ಪ್ರಮುಖವಾದದ್ದು ಎಂದರೆ ರಾಜಾಜಿ ನಗರದ ಡಾ. ರಾಜಕುಮಾರ ರಸ್ತೆ ಮಹತ್ವದ್ದಾಗಿದೆ.‌ಅದೇ ರೀತಿಯಾಗಿ ಅವರ ಪತ್ನಿ ಪಾರ್ವತಮ್ಮ ರಾಜಕುಮಾರ ಹೆಸರಿನಲ್ಲಿ ರಸ್ತೆಗೆ ಹೆಸರಿಡಲಾಗಿದೆ.

ಇದಷ್ಟೆ ಅಲ್ಲದೆ ಸಾಹಸ ಸಿಂಹ,ಕೋಟಿಗೊಬ್ಬ ನಮ್ಮೆಲ್ಲರ ನೆಚ್ಚಿನ ಆಪ್ತಮಿತ್ರ, ಡಾ. ವಿಷ್ಣುವರ್ಧನ್ ಅವರ ಹೆಸರಿನಲ್ಲಿಯೂ ಸಹ ಅನೇಕ ರಸ್ತೆಗಳಿಗೆ ನಾಮಕರಣ‌ ಮಾಡಲಾಗಿದೆ. ಅವರ ಹೆಸರಿನಲ್ಲಿರುವ ರಸ್ತೆಗಳು ಸಹ ಉದ್ದವಾಗಿವೆ. ರಸ್ತೆಯೂ 14.5 ಕಿಲೋಮೀಟರ್ ಉದ್ದ ಇರುವ ಬನಶಂಕರಿಯಿಂದ ಹಿಡಿದು ಕೆಂಗೇರಿ ವರೆಗೂ ಇರುವ ರಸ್ತೆಗೆ ಡಾಕ್ಟರ್ ವಿಷ್ಣುವರ್ಧನ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ.ಒಟ್ಟಾರೆಯಾಗಿ ನಮ್ಮ ಕರ್ನಾಟಕದಲ್ಲಿ ನಮ್ಮ ನಟರ ಹೆಸರಿನಲ್ಲಿ ರಸ್ತೆ ಹಾಗೂ ಸ್ಮಾರಕ, ಸರ್ಕಲ್ ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.‌ಇದೆಲ್ಲವು ಅವರು ನಮ್ಮಗೆ ಹಾಗೂ ನಮ್ಮ ಬದುಕಿಗೆ ನೀಡಿದ ಮಾರ್ಗದರ್ಶನಕ್ಕೆ ನೀಡಿರುವ ಕೊಡುಗೆಯಾಗಿದೆ