Advertisements

ಅಂದು ಕೋಟ್ಯಾಧಿಪತಿಯಲ್ಲಿ 1 ಕೋಟಿ ಗೆದ್ದ ಚಿಕ್ಕ ಹುಡುಗ ಇಂದು ಏನಾಗಿದ್ದಾರೆ ಗೊತ್ತಾ? ಅಬ್ಬಾ..

Kannada News

ಬಾಲಿವುಡ್ ಬಿಗ್ ಬಿ ಅಮಿತಾ ಬಚ್ಚನ್ ನೇತೃತ್ವದಲ್ಲಿ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ ಪತಿ’ ರಿಯಾಲಿಟಿ ಷೋ ಹಿಂದಿ ಕಿರುತೆರೆಯಲ್ಲಿ ತುಂಬಾ ಫೇಮಸ್ ಆಗಿದೆ. ಇನ್ನು ಈ ಕಾರ್ಯಕ್ರಮದಿಂದ ಎಷ್ಟೋ ಜನ ಕೋಟ್ಯಾಧಿಪತಿಗಳಾಗಿ ಹೊರ ಹೊಮ್ಮಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಕೋಟ್ಯಧಿಪತಿಯಾಗಿದ್ದ ಬಾಲಕನೊಬ್ಬ ಈಗ ಐಪಿಎಸ್ ಆಧಿಕಾರಿಯಾಗಿದ್ದಾನೆ.

Advertisements
Advertisements

ಹೌದು, 2001ರಲ್ಲಿ ನಡೆದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಈತ, ಅಮಿತಾ ಬಚ್ಚನ್ ರವರು ಕೇಳಿದ್ದ ೧೫ ಪ್ರಶ್ನೆಗಳಿಗೂ ಉತ್ತರಿಸಿ ಕೋಟ್ಯಾಧಿಪತಿಯಾಗಿದ್ದ ಈ ಬಾಲಕನ ಹೆಸರು ರವಿ ಮೋಹನ್ ಸೈನಿ ಎಂದು. ನಿವೃತ್ತ ನೌಕಾಪಡೆಯ ಅಧಿಕಾರಿಯ ಮಗ. ಕೌನ್ ಬನೇಗಾ ಕರೋಡ್ ಪತಿ ಗೆದ್ದಾಗ ಈ ಬಾಲಕನ ವಯಸ್ಸು ಕೇವಲ ೧೪ ವರ್ಷ. ಆಗಿನ್ನೂ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಇನ್ನು ತೆರಿಗೆ ಹಣ ಎಲ್ಲಾ ಕಟ್ ಆಗಿ, ಮೋಹನ್ ಸೈನಿಗೆ ೧೮ ವರ್ಷ ಪೂರ್ಣಗೊಂಡ ಮೇಲೆ ೬೦ ಲಕ್ಷ ರೂಪಾಯಿಗಳನ್ನ ನೀಡಲಾಗಿತ್ತು.

ಬಳಿಕ ವಿಶಾಖಪಟ್ಟಣದಲ್ಲಿ ತನ್ನ ವಿದ್ಯಾಭ್ಯಾಸ ಮುಗಿಸಿ, ಜೈಪುರದಲ್ಲಿ ಎಂಬಿಬಿಎಸ್ ಪದವಿಯನ್ನ ಪೂರ್ಣಗೊಳಿಸಿ ವೈದ್ಯರೇನೋ ಆದರೂ. ಆದರೆ ತನ್ನ ತಂದೆಯಂತೆ ತಾನೂ ಕೂಡ ಅಧಿಕಾರಿಯಾಗಿ ದೇಶಸೇವೆ ಮಾಡಬೇಕೆಂದು ಯೋಚಿಸಿ, ಯುಪಿಎಸ್ ಪರೀಕ್ಷೆಗೆ ತಯಾರಿ ನಡೆಸಿದ್ದರು. ಇನ್ನು ರಾಷ್ತ್ರೀಯ ಮಟ್ಟದಲ್ಲಿ 461ನೇ ರ್ಯಾಂಕ್ ಗಳಿಸಿದ್ದ ಮೋಹನ್ ಸೈನಿ, ಈಗ ಪೋರಬಂದರ್ ನ ಲ್ಲಿ ಸೂಪರ್ ಡೆಂಟ್ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.