ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಆಗು ಹೋಗುಗಳು ಘಟನೆಗಳನ್ನು ನೋಡಿದಾಗ ಇಂದು ಇದ್ದೋರು ನಾಳೆ ಇರುವ ಭರವಸೆಯೇ ಇಲ್ಲ.. ಇದ್ದಷ್ಟು ದಿನ ಕುಟುಂಬದವರ ಜೊತೆ ನೆಮ್ಮದಿಯ ಜೀವನ ಸಾಗಿಸಿದರೆ ಸಾಕು ಎನ್ನುವಂತಾಗಿದೆ.. ಆದರೆ ಕೆಲ ಜನಗಳು ಮಾತ್ರ ಜೀವನದ ನಿಜವಾದ ಅರ್ಥವನ್ನೇ ತಿಲೀಯದೇ ಇಂತಹ ಕೆಲಸ ಮಾಡಿ ಕೊನೆಗೆ ಸಿಕ್ಕಿಕೊಂಡು ಬರಬಾರದ ಪರಿಸ್ಥಿತಿಗೆ ಬರುತ್ತಿದ್ದಾರೆ.. ಹೌದು ಗಂಡ ಕೆಕಸಕ್ಕೆಂದು ಹೊರ ಹೋದ ನಂತರ ಮತ್ತೊಬ್ಬನ ಜೊತೆ ಮಲಗುವ ಅಭ್ಯಾಸ ಮಾಡಿಕೊಂಡಿದ್ದ ಗಂಡ.. ಅದನ್ನೆಲ್ಲಾ ಕಣ್ಣಾರೆ ಕಂಡ ಗಂಡ ಮಾಡಿದ ಕೆಲಸಕ್ಕೆ ಇದೀಗ ಸಂಪೂರ್ಣ ಕುಟುಂಬ ಏನಾಗಿದೆ ನೋಡಿ.. ಚೆಂದದ ಸಂಸಾರ ಇರುತ್ತದೆ.. ಎರಡು ಪುಟ್ಟ ಮಕ್ಕಳು ಇರುತ್ತವೆ.. ನೆಮ್ಮದಿಯಾಗಿ ಗಂಡನ ಜೊತೆ ಜೀವನ ಮಾಡಬಹುದಾಗಿತ್ತು.. ಆದರೆ ಅಕೆಗೆ ಮತ್ತೊಬ್ಬನ ಆಸೆ.. ಆ ಅಸೆಯ ಹಿಂದೆ ಬಿದ್ದಿದ್ದಕ್ಕೆ ಇಂದು ಆಕೆಗೆ ಬಂದಿರುವ ಸ್ಥಿತಿ ನಿಜಕ್ಕೂ ಬಹುಶಃ ಆಕೆ ಕನಸಿನಲ್ಲಿಯೂ ಊಹಿಸಿರಲಿಲ್ಲ ಎನಿಸುತ್ತದೆ..

ಅದರಲ್ಲಿಯೂ ಹೆಂಡತಿಯ ಆ ಅವತಾರವನ್ನು ಕಣ್ಣಾರೆ ಕಂಡ ಗಂಡನ ಮನಸ್ಥಿತಿ ಏನಾಗಿರಬೇಡ.. ಇತ್ತ ಅವಳು ಮಾತ್ರವಲ್ಲ ಆಕೆಗೆ ಬುದ್ದಿ ಹೇಳಬೇಕಿದ್ದ ತಾಯಿಯೂ ಕೂಡ ಮಗಳ ಹಾದಿಯನ್ನೇ ಹಿಡಿದಿದ್ದು ನಿಜಕ್ಕೂ ದುರಂತವೇ ಸರಿ.. ಹೌದು ಇಂತಹದೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಅಕ್ಕಪಕ್ಕದವರು ಬೆಚ್ಚಿಬೀಳುವಂತಾಗಿದೆ.. ಹೌದು ಬೆಂಗಳೂರಿನ ಗೋವಿಂದ ರಾಜನಗರದಲ್ಲಿ ಕುಟುಂಬವೊಂದು ವಾಸವಿತ್ತು.. ಆಕೆಯ ಹೆಸರು ಸಾವಿತ್ರಿ.. ಆಕೆಯ ಗಂಡನ ಹೆಸರು ರವಿ ಕುಮಾರ್.. ಈ ದಂಪತಿಗೆ ಇಬ್ಬರು ಪುಟ್ಟ ಮಕ್ಕಳು.. ಜೀವನ ನಡೆಸಲು ಕಷ್ಟವೇನೂ ಇರಲಿಲ್ಲ.. ರವಿ ಕುಮಾರ್ ಕೆಲಸಕ್ಕೆ ಹೋಗಿ ಮನೆ ನಡೆಸುತ್ತಿದ್ದನು.. ಆದರೆ ಎರಡು ಮಕ್ಕಳಿದ್ದರೂ ಸಹ ಸಾವಿತ್ರಿಗೆ ಅದ್ಯಾಕೋ ಮತ್ತೊಬ್ಬನ ಮೇಲೆ ಮೋಹ ಬೆಳೆಯಿತು.. ಹೆಸರು ನೋಡಿದರೆ ಸಾವಿತ್ರಿ.. ಆದರೆ ಮಾಡುತ್ತಿದ್ದ ಕೆಲಸ ಇಂತಹುದು..

ಸಾವಿತ್ರಿಗೆ ಮತ್ತೊಬ್ಬನ ಜೊತೆ ಸಂಬಂಧ ಇರುವ ವಿಚಾರ ಗಂಡ ರವಿ ಕುಮಾರ್ ಗೆ ತಿಳಿಯಿತು.. ನಾಲ್ಕಾರು ಜನ ನಾಲ್ಕಾರು ತರ ಮಾತನಾಡಿಕೊಳ್ಳುವಂತಾಯಿತು..ಇದನ್ನೆಲ್ಲಾ ಕಂಡ ಗಂಡ ಆಗಲೂ ಸಹ ಸಾವಿತ್ರಿಗೆ ಬುದ್ಧಿ ಮಾತುಗಳನ್ನು ಹೇಳಿ ಇದನ್ನೆಲ್ಲಾ ಬಿಟ್ಟುಬಿಡು ಎಂದ.. ಚೆನ್ನಾಗಿ ಜೀವನ ಮಾಡೋಣ ಎಂದ.. ಆದರೆ ಅದನ್ನೆಲ್ಲಾ ಆಕೆ ಕ್ಯಾರೆ ಎನ್ನಲಿಲ್ಲ.. ಇದೇ ಕಾರಣಕ್ಕೆ ಆಗಾಗ ಸಾವಿತ್ರಿ ಹಾಗೂ ರವಿ ಕುಮಾರ್ ನಡುವೆ ಜಗಳ ನಡೆಯುತಿತ್ತು.. ಆದರೂ ಸಹ ಸಾವಿತ್ರಿಗೆ ಮತ್ತೊಬ್ಬನಿಂದ ದೂರ ಉಳಿಯಲು ಸಾಧ್ಯವಾಗಲಿಲ್ಲ.. ಆತನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು.. ಕೊನೆಗೆ ಮಕ್ಕಳ ಜೀವನ ಮುಖ್ಯವೆಂದು ರವಿಕುಮಾರ್ ಆ ಮನೆಯನ್ನು ಖಾಲಿ ಮಾಡಿ ಗೋವಿಂದರಾಜನಗರದಲ್ಲಿ ಮನೆ ಮಾಡಿ ಹೊಸ ಜೀವನ ಶುರು ಮಾಡುವ ಕನಸು ಕಂಡ.. ಆದರೆ ಮುಂದೆ ನಡೆದದ್ದೇ ಬೇರೆ..

ಹೌದು ಗೋವಿಂದರಾಜನಗರಕ್ಕೆ ಬಂದ ನಂತರವೂ ಸಾವಿತ್ರಿ ತನ್ನ ಹಳೆಯ ಗೆಳೆಯನನ್ನು ಮರೆಯಲಿಲ್ಲ.. ಈ ಮನೆಗೆ ಆತನನ್ನು ಆಗಾಗ ಕರೆಸಿಕೊಳ್ಳುತ್ತಿದ್ದಳು.. ದುರ್ಧೈವವೆಂದರೆ ಆ ವಿಚಾರ ಆಕೆಯ ತಾಯಿ ಸರೋಜಮ್ಮನಿಗೂ ತಿಳಿದಿತ್ತು.. ಸರೋಜಮ್ಮನೂ ಸಹ ಮಗಳಿಗೆ ಬೆಂಬಲ ನೀಡುತ್ತಿದ್ದಳು ಎನ್ನಲಾಗಿದೆ.. ಕೊನೆಗೆ ಇಲ್ಲಿಯೂ ತನ್ನ ಹೆಂಡತಿ ತನ್ನ ಹಳೆಯ ಬುದ್ಧಿಯನ್ನು ಬಿಡಲಿಲ್ಲ ಎನ್ನುವ ವಿಚಾರ ರವಿ ಕುಮಾರ್ ಗೆ ತಿಳಿದಿದೆ.. ಇತ್ತ ನಿನ್ನೆ ತನ್ನ ಇಬ್ಬರು ಮಕ್ಕಳನ್ನು ರವಿಕುಮಾರ್ ತಾನೇ ಶಾಲೆಗೆ ಬಿಟ್ಟು ಮನೆಗೆ ಮರಳಿದಾಗ ಮನೆಗೆ ಸಾವಿತ್ರಿಯ ಹಳೆಯ ಗೆಳೆಯ ಬಂದು ಹೋಗಿರುವ ವಿಚಾರ ತಿಳಿದಿದೆ.. ಅಷ್ಟೇ ಅಲ್ಲದೇ ಮನೆಯಲ್ಲಿ ತನ್ನ ಅತ್ತೆ ಸರೋಜಮ್ಮನೂ ಸಹ ಇದ್ದು ಮಗಳ ಈ ಸಂಬಂಧಕ್ಕೆ ಅತ್ತೆಯ ಬೆಂಬಲ ಇರೋದು ತಿಳಿದಿದೆ.. ಆಗ ಸಾವಿತ್ರಿಯ ಜೊತೆ ಜಗಳವಾಡಿದ್ದಾನೆ ರವಿ ಕುಮಾರ್.. ಇತ್ತ ತನ್ನದೇ ತಪ್ಪಿದ್ದರೂ ಸಾವಿತ್ರಿ ಮತ್ತೊಬ್ಬನಿಂದ ದೂರ ಇರಲು ಒಪ್ಪದೇ ವಾದ ಪ್ರತಿವಾದಗಳು ನಡೆದಿದೆ..

ಕೊನೆಗೆ ಜಗಳ ತಾರಕಕ್ಕೇರಿ ಸಾವಿತ್ರಿ ಹಾಗೂ ಸರೋಜಮ್ಮ ಇಬ್ಬರನ್ನೂ ಸಹ ಎಳನೀರು ವ್ಯಾಪಾರಕ್ಕೆ ಬಳಸುವ ಕಡಕತಿಯಿಂದ ಇಬ್ಬರನ್ನೂ ಸಹ ಅದೇ ಕ್ಷಣ ಇಲ್ಲವಾಗಿಸಿದ್ದಾನೆ..ಈ ಕೆಲಸ ಮಾಡಿದ ಕೂಡಲೇ ರವಿಕುಮಾರ್ ಸ್ವತಃ ಪೊಲೀಸ್ ಠಾಣೆಗೆ ಬಂದು ನಡೆದ ಘಟನೆ ತಿಳಿಸಿ ಪೋಲೀಸರಿಗೆ ತಾನೇ ಶರಣಾಗಿದ್ದಾನೆ.. ಅತ್ತ ಮತ್ತೊಬ್ಬನ ಆಸೆಗೆ ಸಾವಿತ್ರಿ ಜೀವ ಕಳೆದುಕೊಂಡಳು.. ಮಗಳಿಗೆ ಬುದ್ಧಿ ಹೇಳದೇ ಆಕೆಯ ತಪ್ಪನ್ನೇ ಬೆಂಬಲಿಸಿ ಸಾವಿತ್ರಿಯ ತಾಯಿ ಸರೋಜಮ್ಮನೂ ಸಹ ಇಲ್ಲವಾದಳು.. ಇತ್ತ ಕೋಪದ ಕೈಗೆ ಬುದ್ಧಿ ಕೊಟ್ಟು ದುಡುಕಿನ ನಿರ್ಧಾರ ಮಾಡಿದ ರವಿಕುಮಾರ್ ಪೋಲೀಸರ ಪಾಲಾದ.. ಆದರೆ ಆ ಎರಡು ಮಕ್ಕಳ ಬಗ್ಗೆ ಯಾರೂ ಸಹ ಆಲೋಚನೆ ಮಾಡಲಿಲ್ಲ..
ಆ ಮಕ್ಕಳಿಗೆ ಇದೀಗ ಯಾರು ದಿಕ್ಕು.. ಶಾಲೆಗೆ ಹೋದ ಮಕ್ಕಳನ್ನು ಮರಳಿ ಮನೆಗೆ ಕರೆತರುವವರು ಯಾರು.. ಕರೆತಂದರೂ ಸಹ ಆ ಸಣ್ಣ ಮಕ್ಕಳನ್ನು ನೋಡಿಕೊಳ್ಳೋರು ಯಾರು.. ಹೆತ್ತ ತಾಯಿಯೇ ಮಕ್ಕಳ ಬಗ್ಗೆ ಆಲೋಚಿಸದೇ ಮತ್ತೊಬ್ಬನ ಜೊತೆ ಮಲಗಿದಳು.. ಆರೈಕೆ ಮಾಡಬೇಕಾದ ಅಜ್ಜಿಯದ್ದೂ ಅದೇ ಕತೆ.. ಇತ್ತ ಕೋಪದ ಕೈಗೆ ಬುದ್ಧಿ ಕೊಟ್ಟ ಅಪ್ಪ ಪೊಲೀಸರ ಪಾಲಾದ… ಆದರೆ ಮಕ್ಕಳು.. ಮಕ್ಕಳೇನು ತಪ್ಪು ಮಾಡಿದವೋ ಆ ಭಗವಂತನೇ ಬಲ್ಲ.. ಇಂತಹ ಘಟನೆ ಹೊಸದೇನೂ ಅಲ್ಲ.. ಈ ರೀತಿ ಸಾಕಷ್ಟು ಮಂದಿ ಮತ್ತೊಬ್ಬರ ಜೊತೆ ಸಂಬಂಧದಿಂದ ಜೀವನ ಹಾಳು ಮಾಡಿಕೊಳ್ಳುತ್ತಿರುವುದು ನಡೆಯುತ್ತಲೇ ಇದೆ.. ಇನ್ನಾದರೂ ನಿಮ್ಮ ಸ್ವಾರ್ಥದ ಅರೆಕ್ಷಣದ ಆಸೆಗಳನ್ನು ಬಿಟ್ಟು ಮಕ್ಕಳ ಬಗ್ಗೆ ಯೋಚಿಸಿ.. ಇಂತವರೇನೋ ಹೋಗ್ತಾರೆ.. ಆದರೆ ಆ ಮಕ್ಕಳ ಮುಂದಿನ ಜೀವನ ಪೂರ್ತಿ ನೆನೆದರೆ ಸಂಕಟವಾಗುತ್ತದೆ.. ಇನ್ನಾದರೂ ಮನುಷ್ಯನ ಮನಸ್ಥಿತಿಗಳು ಬದಲಾಗಬೇಕಿದೆ..