Advertisements

ಮಗಳ ಮದುವೆಗೆ ದುಡ್ಡಿರಲಿಲ್ಲ, ಹಣ ಒಡವೆಗಳೆಲ್ಲಾ ಕೊಟ್ಟು ಸಹಾಯ ಮಾಡಿದವರು ಇವರೇ…ರವಿಮಾಮ ಕಷ್ಟಕ್ಕೆ ಸಾಥ್ ಕೊಟ್ಟವರು ಯಾರು ನೋಡಿ

Cinema

ಕನ್ನಡ ಸಿನಿಮಾರಂಗದ ನಟ, ನಿರ್ದೇಶಕ ಕಮ್ ನಿರ್ಮಾಪಕರಾಗಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮತ್ತೊಂದು ಸಿನಿಮಾ ತೆರೆ ಕಾಣಲು ಸಜ್ಜಾಗಿದೆ. ರವಿ ಬೋಪಣ್ಣ’ ಸಿನಿಮಾ ಆಗಸ್ಟ್​ 12ರಂದು ತೆರೆಗೆ ಬರುತ್ತಿದೆ. ಹೌದು, ರವಿಚಂದ್ರನ್ ಕಥೆ, ಚಿತ್ರಕತೆ ಬರೆದು ನಿರ್ದೇಶನದ‌ ಜೊತೆಗೆ ಅಭಿನಯಿಸುತ್ತಿರುವ ಸಿನಿಮಾವಾಗಿದ್ದು, ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ದೃಶ್ಯಂ 2′ ಸಿನಿಮಾ ಬಳಿಕ ರವಿಚಂದ್ರನ್ ಅವರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು, ರವಿ ಬೋಪಣ್ಣ ಹಾಡಿನ ಜೊತೆಗೆ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಬೆಂಗಳೂರಿನ ಜಿಟಿ ಮಾಲ್​​ನಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ನಟ ಕಿಚ್ಚ ಸುದೀಪ್, ಜಗ್ಗೇಶ್, ಡಾಲಿ ಧನಂಜಯ್ ಹಾಗೂ ಶರಣ್ ಆಗಮಿಸಿ ಕ್ರೇಜಿಸ್ಟಾರ್ ರವಿ ಬೋಪಣ್ಣ ಸಿನಿಮಾಗೆ ಶುಭ ಹಾರೈಸಿದ್ದಾರೆ. ಆದರೆ ಇದೇ ವೇಳೆ ಮಗಳ ಮದುವೆಯಲ್ಲಿ ಸಹಾಯ ಮಾಡಿದ ಸ್ನೇಹಿತರನ್ನು ನೆನಪಿಸಿಕೊಂಡಿದ್ದಾರೆ.

Advertisements
Advertisements

ಹೌದು, ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಮಾತನಾಡಿ, ‘ಸಿನಿಮಾದಲ್ಲಿನ ಹಾಡುಗಳು, ಕ್ಯಾರೆಕ್ಟರ್ಸ್, ಸಿ‌ನಿಮಾ ಎಡಿಟಿಂಗ್ ಹಾಗೂ ಕಿಚ್ಚ ಸುದೀಪ್ ಪಾತ್ರದ ಬಗ್ಗೆ ಬಿಚ್ಚಿಟ್ಟರು. ಅಷ್ಟೇ ಅಲ್ಲ ಈ ಹಿಂದೆ ತಮ್ಮ ಮಗಳ ಮದ್ವೆ ಮಾಡೋಕೆ ಏನೆಲ್ಲಾ ಕಷ್ಟಪಟ್ರು ಎನ್ನುವುದು ಹೇಳಿಕೊಂಡಿದ್ದಾರೆ. ಅದರ ಜೊತೆಗೆ, ಎಲ್ಲೆ ಹೋದ್ರು ಪಟ ಪಟ ಅಂತ ಮಾತಾಡ್ತೀನಿ. ಆದ್ರೆ ಇವತ್ತು ಮಾತಾಡೋಕೆ ಆಗ್ತಿಲ್ಲ. 60 ವರ್ಷ ಮುಗಿದು ಹೊಯ್ತು. ನನ್ನ ಅಪ್ಪ ತುಂಬಾ ನೆನಪಾಗುತ್ತಿದ್ದಾರೆ. ನಾನು ದುಡ್ಡು ಸಂಪಾದಿಸಿದ್ದೀನೋ ಇಲ್ವೋ ಹೃದಯ ಸಂಪಾಧನೆ ಮಾಡಿದ್ದೇನೆ. ಯಾವ ರವಿಚಂದ್ರನ್ ನ ಪ್ರೇಮಲೋಕದಿಂದ ನೋಡಿದ್ದೀರೋ ಅಲ್ಲಿಂದ ಇಲ್ಲೀ ತನಕ ಏನೆಲ್ಲಾ ಇದೆಯೋ ಅದೆಲ್ಲಾ ಈ ಸಿನಿಮಾದಲ್ಲಿದೆ. ನಾನು ಆವತ್ತಿಂದ ಕಾಲರ್ ಅನ್ನ ಇಳಿಸೇ ಇಲ್ಲ. ಈ‌ ಸಿನಿಮಾದಲ್ಲಿ ಗ್ರಾಮರ್ ಇಲ್ಲ ಗ್ಲಾಮರ್‌ ಒದೆ. ಫ್ಯಾಮಿಲಿ ಸಿನಿಮಾ ಇದು. ಈ ಸಿನಿಮಾ‌ ಬೇರೆ ಲೋಕಕ್ಕೆ‌ ಕರೆದುಕೊಂಡು ಹೋಗುತ್ತೆ ಎಂದಿದ್ದಾರೆ.

ಅದರ ಜೊತೆಗೆ, ನಮ್ಮೊಳಗೆ ಒಬ್ಬ ಕರ್ಮ ಇದ್ದಾನೆ. ಅದು ಯಾವಾಗ್ಲು ನಮ್ಮನ್ನ ನೋಡಿ ನಗುತ್ತಾ ಇರ್ತಾನೆ. ಸುದೀಪ್ ಎಲ್ಲೇ ಹೋಗುತ್ತಿದ್ರು ನಾನ್ ಕಾಲ್ ಮಾಡಿದ್ರೆ ಕಾರ್ ನಿಲ್ಲಿಸಿಯೇ ಮಾತಾಡೋದು. ನನ್ನ ಸುದೀಪ್ ಮಧ್ಯೆ ಜನ್ಮ ಜನ್ಮದ ಸಂಬಂಧ ಇದೆ. ಕರ್ನಾಟಕದಲ್ಲಿ ಯಾರದ್ದಾದ್ರು ಕರೆಂಟ್ ವಾಯ್ಸ್ ಇದೆ ಅಂದ್ರೆ ಅದು ಸುದೀಪ್ ವಾಯ್ಸ್ ಮಾತ್ರ. ಸುದೀಪ್ ವಾಯ್ಸ್ ನಲ್ಲಿ ಕರೆಂಟ್‌ ಇದೆ ಅಂದ್ರು. ಈ‌ ಸಿ‌ನಿಮಾನ ಮೂರು ಭಾರಿ ಎಡಿಟ್ ಮಾಡಿದ್ದೇನೆ. ನನ್ನ ಜೊತೆಯಲ್ಲಿದ್ದವೇ ನನಗೆ ಹುಚ್ಚ ಅಂದ್ರು, ಆ ಹುಚ್ಚುತನವೇ ಈ ಸಿನಿಮಾ ಚೆನ್ನಾಗಿ ಬರೋದಕ್ಕೆ ಕಾರಣ. ಇಡೀ ಸಿನಿಮಾದಲ್ಲಿ 8 ಹಾಡುಗಳಿವೆ. ಕಾವ್ಯ ಶೆಟ್ಟಿ ಅದ್ಭುತ ನಟಿ.. 24-30 -50 ವರ್ಷದ ಕ್ಯಾರೆಕ್ಟರ್ ಮಾಡಿದ್ದಾರೆ.

ಇನ್ನು, ಸುಮಾರು‌ ವರ್ಷ ನಾನು ಕಳೆದು ಹೋಗಿದ್ದೆ. ಆದ್ರೆ ಈ ಸಿನಿಮಾದಿಂದ ಮತ್ತೆ ಕಲಿತುಕೊಂಡೆ. ಜೀವನ ತುಂಬಾ ಕಷ್ಟದ ಉದಾಹರಣೆ ಹೇಳ್ತೀನಿ. ನನ್ನ ಮಗಳ ಮದುವೆಯಲ್ಲಿ ಹಣದ ಮುಗ್ಗಟ್ಟಿತ್ತು. ಮನೆಗೆ ಇಬ್ರು ಸ್ನೇಹಿತರು ಬಂದಿದ್ರು.. ಗಿಫ್ಟ್ ಕೊಟ್ಟು ಹೋದ್ರು. ಆ ಗಿಫ್ಟ್ ಓಪನ್ ಮಾಡಿದ್ರೆ ಅದರಲ್ಲಿ ಸಾಕಷ್ಟು ದುಡ್ಡು ಇತ್ತು ಎಂದು ಎಂದು ಅಂದಿನ ನೆನಪುಗಳನ್ನ ಮೆಲುಕು ಹಾಕಿದ ಕ್ರೇಜಿ ಸ್ಟಾರ್ ಸುದೀಪ್ ಹೆಸರು ತೆಗೆದ್ರೆ ನನಗೆ ಮೈಯಲ್ಲಿ ರೋಮಾಂಚನ ಆಗುತ್ತೆ ಹೇಳಿದ್ರು ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೇ ಈ ವೇಳೆಯಲ್ಲಿ ತನ್ನ ಮಗಳ ಮದುವೆ ಮಾಡಲು ನಿಂತಿದ್ದಾಗ ಹಣದ ಸಮಸ್ಯೆಯೂ ಎದುರಾಗಿತ್ತು. ಹೌದು, 2019ರ ಮೇ ತಿಂಗಳಲ್ಲಿ ಪುತ್ರಿ ಗೀತಾಂಜಲಿ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದರು. ಮದುವೆಯ ಸಂದರ್ಭದಲ್ಲಿ ಆರ್ಥಿಕವಾಗಿ ಸಹಾಯಕ್ಕೆ ಬಂದ ಮೂವರು ಸ್ನೇಹಿತರನ್ನು ಈ ವೇದಿಕೆಯಲ್ಲಿ ನೆನಪಿಸಿಕೊಂಡಿದ್ದಾರೆ. ಆ ಘಟನೆಯನ್ನು ರವಿಚಂದ್ರನ್​ ನೆನಪಿಸಿಕೊಂಡಿದ್ದು, ‘ ನನ್ನ ಮಗಳ ಮದುವೆ ಸಮಯದಲ್ಲಿ ಚಿತ್ರರಂಗದ ಹೊರಗಿನ ಸ್ನೇಹಿತರು ಸಹಾಯ ಮಾಡಿದರು. ರಮೇಶ್​, ವೆಂಕಟೇಶ್​ ಸಾಕಷ್ಟು ಹಣ ನೀಡಿ ನನ್ನ ಬೆಂಬಲಕ್ಕೆ ನಿಂತರು. ಮತ್ತೋರ್ವ ಸ್ನೇಹಿತ ಸಜ್ಜನ್​ ಅವರು ಆಭರಣ ಖರೀದಿಗೆ ಸಹಾಯ ಮಾಡಿದರು’ ಎಂದು ಸ್ನೇಹಿತರ ಬಗ್ಗೆ ಹೇಳಿಕೊಂಡಿದ್ದಾರೆ.