Advertisements

ಮಲ್ಲ 2 ಸಿನೆಮಾದಲ್ಲಿ ಈ ಬಾರಿ ಹೀರೋಯಿನ್ ಯಾರೂ ಗೊತ್ತಾ? ಇವರೇ ನೋಡಿ ಹೀರೋಯಿನ್!!

Kannada News

ಸ್ನೇಹಿತರೆ ಪ್ರೇಮಲೋಕದ ಮೂಲಕ ಮತ್ತಷ್ಟು ಅಭಿಮಾನಿಗಳ‌ ಹೃದಯಕ್ಕೆ ಹತ್ತಿರವಾದದ್ದು ಕ್ರೇಜಿ ಸ್ಟಾರ್ ರವಿಚಂದ್ರನ್. ರಣಧೀರ, ಕಿಂದರಿಜೋಗಿ, ಕನಸುಗಾರ, ರಾಮಚಾರಿ, ಯುದ್ದ ಕಾಂಡ, ಪುಟ್ನಂಜ ಹಾಗೂ ಹಳ್ಳಿ ಮೇಷ್ಟ್ರು ಹೀಗೆ ಹಲವು ಮೂವಿಗಳಲ್ಲಿ ವಿಭಿನ್ನ ಚಿತ್ರಕಥೆಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡ ನಟರಲ್ಲಿ ರವಿಚಂದ್ರನ್ ಸಹ ಒಬ್ಬರು.

ರವಿಚಂದ್ರನ್ ನಟನೆ ಹಾಗೂ ಹಂಸಲೇಖರ ಸಾಹಿತ್ಯದಿಂದ ಅಂದಿನ ಅವರ ಚಿತ್ರಗಳ‌ ಹಾಡುಗಳು ಇಂದಿಗೂ ಸಹ ತಮ್ಮ ಹೊಳಪನ್ನು ಕಳೆದುಕೊಂಡಿಲ್ಲ. ನಟ ಮಾತ್ರ ಅಲ್ಲದೆ ನಿರ್ಮಾಪಕ , ನಿರ್ದೇಶಕನಾಗಿ ರವಿಚಂದ್ರನ್ ಹಲವು ಸಿನೆಮಾಗಳನ್ನು ತರೆಗೆ ತಂದಿದ್ದಾರೆ. ಒಟ್ಟಾರೆಯಾಗಿ ಸಿನೆಮಾ ಕ್ಷೇತ್ರದಲ್ಲಿ ಹೊಸತನವನ್ನು ಸೃಷ್ಟಿ ಮಾಡುವುದರ ಮೂಲಕ ಅಭಿಮಾನಿಗಳ ಮನಸೆಳೆಯುವ ನಟ ರವಿಚಂದ್ರನ್ ಮಾತ್ರ.

ಇವರು ಅನೇಕ ರೊಮ್ಯಾಂಟಿಕ್ ಸಿನೆಮಾಗಳನ್ನು ಮಾಡಿದ್ದಾರೆ. ಕಳ್ಳ ಮಳ್ಳ ಸುಳ್ಳ, ಹಳ್ಳಿ ಮೇಷ್ಟ್ರು ಇನ್ನು ಹಲವು ರೋಮ್ಯಾಂಟಿಕ್ ಸಿನೆಮಾಗಳಲ್ಲಿ ನಟಿಸಿದ್ದಾರೆ. ಇವರ ರೊಮ್ಯಾಂಟಿಕ್ ಚಿತ್ರಗಳಲ್ಲಿಯೇ ಹೆಚ್ಚು ರೋಮ್ಯಾಂಟಿಕ್ ಚಿತ್ರ ಮಲ್ಲ. ಸದ್ಯ ರವಿಚಂದ್ರನ್ ನಿರ್ದೇಶನ, ನಿರ್ಮಾಪಣ ಅಂತಾ ಹೆಚ್ಚು ಬ್ಯುಸಿಯಾಗಿದ್ದು ನಡನೆಯಿಂದ ದೂರ ಸರಿದಿದ್ದರು.‌ಈಗ ಮತ್ತೆ ಹೊಸ ಚಿತ್ರದಲ್ಲಿ ನಟಿಸುವುದರ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಹಾಗಾದರೆ ಅವರು ನಟಿಸಲಿರುವ ಆ ಸಿನೆಮಾ ಯಾವುದು ಅಂತ ನಿಮಗೆ ಕುತೂಹಲ ಉಂಟಾಗಿರಬಹದು. ಹೌದು ರವಿಚಂದ್ರನ್ ಮತ್ತೆ ನಟಿಸುತ್ತಿರುವ ಸಿನೆಮಾ ಮಲ್ಲ 2.

ಅರ್ಜುನ ಗೌಡ ಕಾರ್ಯಕ್ರಮ ಒಂದರಲ್ಲಿ ಭಾಗವಹಸಿದ ರವಿಚಂದ್ರನ್ ಹಾಗೂ ಮಾಲಾಶ್ರೀ, ಇಗಷ್ಟೆ ತಮ್ಮನ್ನೆಲ್ಲ ಅಗಲಿದ ನಿರ್ದೇಶಕ ರಾಮು ಅವರನ್ನು ನೆನದು ಕಣ್ಣೀರು ಹಾಕಿದರು. ರಾಮು ಹಾಗೂ ರವಿಚಂದ್ರನ್ ಅತ್ಯತ್ತಮ ಸ್ನೇಹಿತರು. ರಾಮು ಅವರ ಪ್ರೊಡಕ್ಷನ್ ನಲ್ಲಿ ರವಿಚಂದ್ರನ್ ಶಕುನಿ ಸಿನೆಮಾ ನಿರ್ದೇಶಸಿ ಸ್ವಲ್ಪ ಮಟ್ಟದ ಖ್ಯಾತಿಯನ್ನು ಗಳಿಸಿದ್ದರು.

ರಾಮು ಅವರ ಕುರಿತು ಹಲವು ವಿಷಯಗಳನ್ನ ಬಿಚ್ಚಿಟ್ಟ ರವಿಚಂದ್ರನ್, ಈ ಸಿನೆಮಾದಲ್ಲಿ ರವಿಚಂದ್ರನ್ ನಿಮ್ಮ ಪಾತ್ರ ಸರಿಯಾಗಿಲ್ಲ ಎಂದು ರಾಮಯ ತಿಳಿಸಿದ್ದರು. ಈಗಾಗಲೇ ಈ ಚಿತ್ರದ ಬಹುಹಂತದ ಚಿತ್ರೀಕರಣ ಮುಗಿದ್ದಿದ್ದು ಈಗ ಪಾತ್ರವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದಿದ್ದರು ರವಿಚಂದ್ರನ್. ಆಗ ರಾಮು ನನಗೆ ಸಿನೆಮಾ ಪೂರ್ತಿಯಾಗಿ ಮಾಡಲು ಇಷ್ಟವಿಲ್ಲ ಎಂದಾಗ ರವಿಚಂದ್ರನ್ ಶಕುನಿ ಸಿನೆಮಾವನ್ನು ಅರ್ಧಕ್ಕೆ ನಿಲ್ಲಿಸಿದರು.

ಈ ವಿಷಯವಾಗಿ ರವಿಚಂದ್ರನ್ ರಾಮು ಪ್ರೊಡಕ್ಷನ ಮೂಲಕ ಒಂದು ಸಿನೆಮಾ ಮಾಡಿ ಕೊಡುವುದಾಗಿ ರಾಮು ಅವರಿಗೆ ಮಾತು ಕೊಟ್ಟಿದ್ದ ರಂತೆ. ಆದರೆ ಈಗ ರಾಮು ನಮ್ಮೊಂದಿಗೆ ಇಲ್ಲದಿದ್ದರು ಕೊಟ್ಟ ಮಾತಿನಂತೆ ನಾನು ಮಲ್ಲ 2 ಚಿತ್ರವನ್ನು ರಾಮು ಪ್ರೊಡಕ್ಷನ್ ಮೂಲಕ ನಿರ್ಮಿಸುತ್ತೇನೆ ಎಂದರು.ಅದಾಗಲೇ ಮಾಲಾಶ್ರೀ ಹಾಗೂ ರವಿಚಂದ್ರನ್ ನಟಿಸಿದ್ದ ರಾಮಚಾರಿ ಚಿತ್ರ ಹಿಟ್ ಆಗಿತ್ತು. ಸದ್ಯ ಮಲ್ಲ 2 ಚಿತ್ರದಲ್ಲಿ ನೀವು ಹೀರೊಯಿನ್ ಆಗಿ ನಟಿಸುತ್ತೀರಾ,

ಅಥವಾ ನಿಮ್ಮ ಮಗಳೊಂದಿಗೆ ನಾನು ನಟಿಸಲಾ, ಅದು ಬೇಡವಾದರೆ ನನ್ನ ಮಗನೊಂದಿಗೆ ನಿಮ್ಮ ಮಗಳನ್ನು ಹೀರೋಯಿನ್ ಆಗಿ ನಟಿಸಲು ಅವಕಾಶ ಮಾಡಿ ಕೊಡಿ ಎಂದು ಮಾಲಾಶ್ರೀ ಅವರೊಂದಿಗೆ ನಗೆ ಚಟಾಕಿ ಮಾಡಿದ್ದರು.ಒಟ್ಟಾರೆ ರಾಮು ಪ್ರೊಡಕ್ಷನ್ ಮೂಲಕ ಸಿನೆಮಾ ನಿರ್ಮಾಣ ಮಾಡಲು ಹೊರಟಿರುವ ಮಾಲಾಶ್ರೀ ಹಾಗೂ ರವಿಚಂದ್ರನ್ ಅವರಿಗೆ ಈ ಮಲ್ಲ 2 ಎರೆಡು ಸಿನೆಮಾ ಅವರಿಗೆ ಯಶಸ್ಸು ತಂದು ಕೊಡಲಿ ಎಂಬುದು ಅಭಿಮಾನಿಗಳ ಹಾರೈಕೆ.