Advertisements

ದಿನ ಟ್ರಾಫಿಕ್ ನಲ್ಲಿ ಹೋಗಿ ಬೇಸತ್ತ ಈತ ಒಂದು ದಿನ ಅಫೀಸ್ ಗೆ ಹೋಗಲು ಮಾಡಿದ ಪ್ಲಾನ್ ಏನು ಗೊತ್ತಾ?

Kannada News

ಮಹಾನಗರಗಳಲ್ಲಿ ಅರ್ಧದಿನ ಟ್ರಾಫಿಕ್ ಜಾಮ್ ನಲ್ಲಿ ಕಳೆದು ಬಿಡುತ್ತೇವೆ ಅದರಿಂದ ಆಗುವ ಕಿರಿಕಿರಿ ಅಷ್ಟಿಷ್ಟಲ್ಲ ಏನಪ್ಪಾ ಈ ಜೀವನ ಅನಿಸಿಬಿಡುತ್ತದೆ. ಇದರಿಂದ ಸರಿಯಾದ ಸಮಯಕ್ಕೆ ಆಫೀಸಿಗೆ ಹೋಗುವುದಕ್ಕೂ ಆಗುವುದಿಲ್ಲ ಇವೆಲ್ಲ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಇಲ್ಲೊಬ್ಬ ಮಹಾಶಯ ಎಂತಹ ಮಾಸ್ಟರ್ ಪ್ಲಾನ್ ಮಾಡಿದ್ದಾನೆ ಗೊತ್ತಾ ಶಭಾಷ್ ಅಂತಿರ ಜರ್ಮನಿ ದೇಶದ ಬೆಂಚಮಿನ್ ಡೇವಿಡ್ ಎನ್ನುವ ವ್ಯಕ್ತಿ ಮಣಿಚೀನ್ ಎಂಬ ನಗರದಲ್ಲಿ ವಾಸವಿದ್ದು ಪ್ರತಿದಿನ ಟ್ರಾಫಿಕ್ ಸಮಸ್ಯೆಯಿಂದ ಆತ ಬೇಸತ್ತು ಹೋಗಿದ್ದ ತನ್ನ ಮನೆಯಿಂದ ಆಫೀಸ್ ಕೆಲವೇ ಕೆಲವು ಕಿಲೋಮೀಟರ್ ದೂರದಲ್ಲಿದ್ದರು ಅಲ್ಲಿಗೆ ತಲುಪಲು ಹಲವು ಗಂಟೆಗಳೇ ಬೇಕಾಗಿತ್ತು.

Advertisements
Advertisements

ಇದರಿಂದ ಆಫೀಸಿನಲ್ಲಿ ತುಂಬಾ ಸರಿ ಬೈಸಿಕೊಂಡಿದ್ದ ಒಂದು ದಿನ ಟ್ರಾಫಿಕ್ ಸಮಸ್ಯೆಯಿಂದ ಹೇಗಾದರೂ ಮಾಡಿ ಆಚೆ ಬರಬೇಕಲ್ಲ ಎಂದು ಆಲೋಚಿಸಿದ ಡೇವಿಡ್ ಗೆ ಒಂದು ಸಕ್ಕತ್ ಉಪಾಯ ಒಳೆಯಿತು. ಆ ಉಪಾಯದಿಂದ ಆಫೀಸಿಗೆ ಬೇಗ ಹೋಗಬಹುದು ಆರೋಗ್ಯ ಕಾಪಾಡಿಕೊಳ್ಳಬಹುದು ಹಾಗಾದರೆ ಆ ವಿಭಿನ್ನ ಪ್ಲಾನ್ ಏನು ಗೊತ್ತಾ ಮಣಿಚೀನ್ ಎಂಬ ನಗರದಲ್ಲಿ ಇಸರಾವೋ ನದಿ ಇದೆ ಈ ನದಿಯಲ್ಲಿ ಜನ ಸಾರಿಗೆ ಇಲ್ಲ ಹಾಗಾಗಿ ನದಿಯನ್ನೇ ಬಳಸಿಕೊಂಡು ಮನೆಯಿಂದ ಈಜುಕೊಂಡು ಆಫೀಸ್ ಗೆ ಹೋಗುವ ಪ್ಲಾನ್ ಆಕಿದ ಡೇವಿಡ್ ತನ್ನ ಬಟ್ಟೆ ಮತ್ತು ಲ್ಯಾಪ್ ಟ್ಯಾಪ್ ಅನ್ನು ವಾಟರ್ ಪ್ರೂಫ್ ಬ್ಯಾಗ್ ಅಲ್ಲಿ ಹಾಕಿಕೊಂಡು ಎರಡು ವರ್ಷದಿಂದ ಡೇವಿಡ್ ನದಿಯಲ್ಲಿ ಇಳಿದು ಈಜು ಕೊಂಡು ಆಫೀಸ್ ಗೆ ಹೋಗುತ್ತಿದ್ದಾನೆ.

ಈಗ ಮನೆಯಿಂದ ಆಫೀಸಿಗೆ ತಲುಪಲು ಡೇವಿಡ್ ಗೆ ಕೇವಲ 12 ನಿಮಿಷ ಸಾಕು ಯಾವುದೇ ಟ್ರಾಫಿಕ್ ಕಿರಿಕಿರಿಯಿಲ್ಲ ಕಾರಿಗೆ ಪೆಟ್ರೋಲ್ ಹಾಕಬೇಕಾಗಿಲ್ಲ ಅದರಲ್ಲೂ ಮುಖ್ಯವಾಗಿ ಪ್ರತಿದಿನ ಈಜುತ್ತ ಆಫೀಸಿಗೆ ಹೋಗುವುದರಿಂದ ವ್ಯಾಯಾಮದ ಜೊತೆ ಮನಸ್ಸು ಉಲ್ಲಾಸವಾಗಿರುತ್ತದೆ ಎಂದು ಡೇವಿಡ್ ಹೇಳಿದ್ದಾನೆ. ಬೆಳಿಗ್ಗೆ ಆಫೀಸಿಗೆ ಹೋಗುವಾಗ ಈಜು ಕೊಂಡು ಹೋಗುವ ಡೇವಿಡ್ ಸಾಯಂಕಾಲ ನದಿಯಲ್ಲಿ ಈಜು ಕೊಂಡು ಮನೆಗೆ ವಾಪಸ್ ಬರುತ್ತಾನೆ. ಡೇವಿಡ್ ನ ಈ ವಿನೂತನ ಪ್ಲಾನ್ ನೋಡಿ ಇತರರು ಕೂಡ ಇದೆ ಪ್ಲಾನ್ ಮಾಡಲು ಮುಂದಾಗಿದ್ದಾರೆ. ತಮ್ಮ ಸುತ್ತಮುತ್ತ ಇರುವ ನೈಸರ್ಗಿಕ ಸಂಪನ್ಮೂಲ ಬಳಸಿಕೊಂಡು ಜೀವನವನ್ನು ಹಾಗೂ ಆರೋಗ್ಯವನ್ನು ಉತ್ತಮವಾಗಿಸಿಕೊಂಡಿರುವ ಡೇವಿಡ್ .