Advertisements

ಬಿಗ್​ ಬಾಸ್​ ಸೀಸನ್​ 8ಗೆ ಕಿಚ್ಚ ಸುದೀಪ್​ ಪಡೆದ ಸಂಭಾವನೆ ಎಷ್ಟು ಗೊತ್ತಾ? ತಿಳಿದರೆ ಶಾಕ್ ಆಗ್ತೀರ!

Entertainment

ನಮಸ್ತೆ ಸ್ನೇಹಿತರೆ, ಎಲ್ಲರಿಗೂ ತಿಳಿದಿರುವಂತೆ ಮೊದಲನೇ ಸೀಸನ್​ ನಿಂದ ಈಗಿನ ವರೆಗೂ ಕನ್ನಡ ಬಿಗ್​ ಬಾಸ್ ಅನ್ನು ಕಿಚ್ಚ ಸುದೀಪ್​ ಅವರೇ ಹೋಸ್ಟ್ ಮಾಡಿಕೊಂಡು ಬಂದಿದ್ದಾರೆ. ಪ್ರಸ್ತುತ ಎಂಟನೇ ಸೀಸನ್​ ಕೂಡ ಅವರೇ ನಡೆಸಿಕೊಡುತ್ತಿದ್ದಾರೆ. ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಸುದೀಪ್​ ಬಿಗ್​ ಬಾಸ್​ ಸ್ಪರ್ಧಿಗಳ ಜತೆ ಮಾತುಕತೆ ನಡೆಸಿಕೊಡುತ್ತಾರೆ. ಸುದೀಪ್​ ತಮ್ಮ ಮಾತಿನ ಮೂಲಕವೇ ಎಲ್ಲರಿಗೂ ಇಷ್ಟವಾಗಿದ್ದಾರೆ. ಅವರ ನಿರೂಪಣೆ, ಅವರ ಉಡುಗೆ ಬಿಗ್​ ಬಾಸ್​ಗೆ ಒಂದು ಶೋಭೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.ಈ ಕಾರಣಕ್ಕೆ ಶೋ ನಡೆಸಿಕೊಡುವುದಕ್ಕೆ ಸುದೀಪ್​ ದೊಡ್ಡ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಅವರ ಸಂಭಾವನೆ ಎಷ್ಟೆಂದು ನೋಡೋಣ ಬನ್ನಿ.

Advertisements
Advertisements

ಬಿಗ್​ ಬಾಸ್​ ಮೂರು ಸೀಸನ್​ಗಳನ್ನು ಯಾವುದೇ ಒಪ್ಪಂದ ಇಲ್ಲದೆ ಸುದೀಪ್​ ನಡೆಸಿಕೊಂಡು ಬಂದಿದ್ದಾರೆ. ನಂತರದ ಐದು ಸೀಸನ್ ಗಳಿಗೆ ಸುದೀಪ್​ ಒಪ್ಪಂದ ಮಾಡಿಕೊಂಡಿದ್ದರು ಎಂದು ಮೂಲಗಳ ಮೂಲಕ ತಿಳಿಯುತ್ತದೆ. ಸೀಸನ್​ 8ಕ್ಕೆ ಈ ಒಪ್ಪಂದ ಪೂರ್ಣಗೊಳ್ಳಲಿದೆ. ಈ ಐದು ಸೀಸನ್​ಗೆ ಸುದೀಪ್​ 20 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಅಂದರೆ, ಒಂದು ಸೀಸನ್​ಗೆ 4 ಕೋಟಿ ರೂಪಾಯಿ ಆಗಲಿದೆ. 8ನೇ ಸೀಸನ್ ಗೆ ಕಿಚ್ಚ ಸುದೀಪ್ ಅವರು ನಾಲ್ಕು ಕೋಟಿಗಳನ್ನು ಪಡೆದಿದ್ದಾರೆ.

ಮುಂದೆ 8 ಸೀಸನ್​ ಪೂರ್ಣಗೊಂಡ ನಂತರವೂ ಸುದೀಪ್​ ಅವರೇ ಬಿಗ್​ ಬಾಸ್​ ನಡೆಸಿಕೊಡುವ ಹೆಚ್ಚು ಸಾಧ್ಯತೆಗಳಿವೆ. ಸಾಕಷ್ಟು ವೀಕ್ಷಕರು ಸುದೀಪ್​ಗಾಗಿಯೇ ಬಿಗ್​ ಬಾಸ್​ ನೋಡುತ್ತಿದ್ದಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ಬಿಗ್ ಬಾಸ್ ಈ ರೀತಿ ಸಾಗುತ್ತಿದೆ ಎನ್ನುವುದಕ್ಕೆ ಕಾರಣವೇ ಕಿಚ್ಚ ಸುದೀಪ್. ಹೀಗಾಗಿ, ಮುಂದಿನ ಸೀಸನ್​ಗಳನ್ನೂ ಅವರೇ ನಡೆಸಿಕೊಡುತ್ತಾರೆ ಎನ್ನಲಾಗುತ್ತಿದೆ.ಬಿಗ್​ ಬಾಸ್​ ಸೀಸನ್​ 9ರ ಬಗ್ಗೆ ಕಲರ್ಸ್​ ಕನ್ನಡ ವಾಹಿನಿ ಮುಖ್ಯಸ್ಥ ಪರಮೇಶ್ವರ್​ ಗುಂಡ್ಕಲ್​ ಮಾಹಿತಿ ನೀಡಿದ್ದಾರೆ. ಅಕ್ಟೋಬರ್​ ವೇಳೆಗೆ ಮತ್ತೊಂದು ಸೀಸನ್​ನೊಂದಿಗೆ ಪ್ರೇಕ್ಷಕರನ್ನು ಮನರಂಜಿಸಲು ಬರುವ ಸಾಧ್ಯತೆ ಬಗ್ಗೆ ಅವರು ಸೂಚನೆ ನೀಡಿದ್ದರು. ಹೀಗಾಗಿ, ಮತ್ತೊಂದು ಸೀಸನ್​ ಕೂಡ ಶೀಘ್ರವೇ ಪ್ರೇಕ್ಷಕರ ಕಣ್ಣುಗಳ ಮುಂದೆ ಆರಂಭವಾಗುವ ನಿರೀಕ್ಷೆಗಳಿವೆ.