Advertisements

ನಿನ್ನೆ ನಡೆದ ಏಕದಿನ ಪಂದ್ಯದಲ್ಲಿ, ರಿಷಬ್ ಪಂತ್ ಬಾ’ರಿಸಿದ ಬೌಂಡರಿಯನ್ನು ಯಾಕೆ ಪರಿಗಣಿಸಲಿಲ್ಲ ?

Sports

ನಮಸ್ತೆ ಸ್ನೇಹಿತರೆ, ಕ್ರಿಕೆಟ್ ಎಂದರೆ ಎಲ್ಲರಿಗೂ ಮನರಂಜನೆ ನೀಡುವ ಕ್ರೀಡೆಯಾಗಿದೆ. ಇದರಲ್ಲಿ ಹಲವಾರು ನಿಯಮಗಳು ನಮಗೆ ತಿಳಿದಿರುವುದಿಲ್ಲ, ಇನ್ನು ಕೆಲವು ನಿಯಮಗಳು ನಮಗೆ ಇಷ್ಟವಾಗುವುದಿಲ್ಲ. ಇತ್ತೀಚೆಗೆ ಐಸಿಸಿಯ ಡಿ.ಆರ್.ಎಸ್ ನಿಯಮಗಳು ಸಾಕಷ್ಟು ಚ’ರ್ಚೆಗೆ ಗ್ರಾಸವಾಗುತ್ತಿದೆ. ನೆನ್ನೆ ಇಂಗ್ಲೆಂಡ್ ಹಾಗೂ ಭಾರತದ ನಡುವೆ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಇಂಥದ್ದೇ ಮತ್ತೊಂದು ಘ’ಟನೆ ನಡೆದಿದೆ. ಭ’ರ್ಜರಿಯಾಗಿ ಆಡುತ್ತಿದ್ದಂತಹ ಭಾರತದ ಬ್ಯಾಟ್ಸ್ ಮ್ಯಾನ್ ರಿಷಬ್ ಪಂತ್ ರವರ ಬ್ಯಾಟ್ ಗೆ ತಾಗಿ ಬೌಂಡರಿ ಲೈನ್ ಗೆ ಹೋಗಿದ್ದ ಬಾಲ್ ಅನ್ನು ಫೋರ್ ಎಂದು ನೀಡಿಲ್ಲ. ಐಸಿಸಿಯ ನಿಯಮದಿಂದಾಗಿ ಪಂತ್ ಹಾಗೂ ಭಾರತ ತಂಡ ನಾಲ್ಕು ರನ್ ನಿಂದ ವಂ’ಚಿತವಾಗಿದೆ. ಐಸಿಸಿಯ ಈ ನಿಯಮ ಸದ್ಯ ತೀ’ವ್ರ ಟೀ’ಕೆಗೆ ಗು’ರಿಯಾಗಿದೆ.

Advertisements
Advertisements

40 ನೇ ಓವರ್​ನಲ್ಲಿ ಟಾಮ್ ಕರನ್ ಅವರ ಎಸೆತದಲ್ಲಿ ಪಂತ್ ಅವರ ಬ್ಯಾಟ್ ಹಾಗು ಪ್ಯಾಡ್ ​ ಗೆ ತಾಗಿ ಫೈನ್​ಲೆಗ್ ನಲ್ಲಿ ಬೌಂಡರಿ ಗೆರೆ ದಾಟಿತು. ಅ ಎಸೆತ ಪಂತ್ ರವರ ಕಾಲಿಗೆ ತಾಗಿದ್ದು, ಎಲ್​.ಬಿ.ಡಬ್ಲೂ ಗೆ ಅಂಪೈರ್ ಗೆ ಮನವಿ ಮಾಡಿದಾಗ ಅವರ ಮನವಿಯನ್ನು ಮೇನ್ ಅಂಪೈರ್ ಪುರಸ್ಕರಿಸಿ ಔ’ಟ್ ಎಂದು ನೀಡಿದರು. ಆದರೆ ಆ ಬಾಲ್ ತಮ್ಮ ಬ್ಯಾಟಿಗೆ ತಾಗಿದ್ದರ ಕುರಿತು ಸ್ಪಷ್ಟತೆ ಹೊಂದಿದ್ದ ಪಂತ್ ಥರ್ಡ್ ಅಂಪೈರ್ ಮೊರೆ ಹೋದರು. ಅಂಪೈರ್ ನಿರ್ಧಾರವನ್ನು ಪಂತ್ ಪ್ರಶ್ನಿಸಿದ್ದರಿಂದ ಡಿಆರ್​ಎಸ್ ಗೆ ಮನವಿ ಮಾಡಲಾಯಿತು. ರೀಪ್ಲೇಗಳು ಬಾಲ್ ಪಂತ್ ಅವರ ಬ್ಯಾಟಿಗೆ ತಾಕಿದ್ದನ್ನು ಸ್ಪಷ್ಟಪಡಿಸಿದವು. ಹಾಗಾಗಿ ಥರ್ಡ್ ಅಂಪಾಯರ್ ನಾಟ್ ಔಟ್ ಎಂದು ಸಿಗ್ನಲ್ ನೀಡಿದ್ದರು.

ನಾಟ್ ಔಟ್ ಎಂಬುದು ಸ್ಪಷ್ಟವಾಗಿದ್ದರೂ, ಬಾಲ್ ಬ್ಯಾಟಿಗೆ ತಾಗಿ ಬೌಂಡರಿ ಗೆರೆಯನ್ನು ದಾಟಿದ್ದರೂ ಕೂಡ 4 ರನ್ ಗಳನ್ನು ಅವರಿಗೆ ನೀಡಿಲ್ಲ. ಡಿಆರ್​ಎಸ್​ ನಿಯಮದೊಂದಿಗೆ ವ್ಯವಹರಿಸುವ ಐಸಿಸಿ ಆಡುವ ನಿಯಮ ಕ್ಲಾಸ್ 3.7 ಅಪೆಂಡಿಕ್ಸ್ ಡಿ ಪ್ರಕಾರ, ಆಟಗಾರನೊಬ್ಬನ ಮನವಿಯ ಮೇರೆಗೆ ರಿವ್ಯೂ ತೆಗೆದುಕೊಂಡಾಗ ಔಟ್​ ಎಂದಿದ್ದ ಮೂಲ ನಿರ್ಣಯ ನಾಟ್​ ಔಟ್​ ಆಂತಾದರೆ, ಮೂಲ ನಿರ್ಣಯ ಔಟ್​ ಆಗಿದ್ದರಿಂದ ಆ ಬಾಲ್ ಡೆ’ಡ್ ಆಗಿರುತ್ತದಂತೆ. ರಿವ್ಯೂ, ಬ್ಯಾಟಿಂಗ್ ಮಾಡುವ ತಂಡಕ್ಕೆ ಪ್ರಯೋಜನಕಾರಿಯಾಗಿ ಪರಿಣಮಿಸುವುದರಿಂದ ಅದಕ್ಕೆ ಯಾವುದೇ ರನ್ ಸಿಗುವುದಿಲ್ಲ. ಯಾಕೆಂದರೆ, ಒಮ್ಮೆ ಫೀಲ್ಡ್ ಅಂಪೈರ್ ಔಟ್ ಎಂದು ನಿರ್ಣಯ ನೀಡಿದ ನಂತರ ಆ ಬಾಲು ಡೆ’ಡ್ ಬಾಲ್ ಎಂದು ಪರಿಗಣಿಸಲಾಗುತ್ತದೆ ಎಂದು ನಿಯಮ ಹೇಳುತ್ತದೆ. ಕೆಲವೊಮ್ಮೆ ಇಂತಹ ನಿಯಮಗಳು ಆಟಗಾರರಿಗೆ ಮತ್ತು ಅಭಿಮಾನಿಗಳಿಗೆ ಇ’ಷ್ಟವಾಗುವುದಿಲ್ಲ. ಆದರೆ ಆಟಗಾರರು ಆ ನಿಯಮಗಳನ್ನು ಮೀ’ರುವಂತಿಲ್ಲ. ನಿಮಗೆ ಇದು ಇಷ್ಟವಾದರೆ ಶೇರ್ ಮಾಡಿ.