Advertisements

ವಿರಾಟ್ ಕೊಹ್ಲಿ ದಾಖಲೆ ಮು’ರಿಯಲು ಸಿದ್ಧವಾಗಿರುವ ರಾಬಿನ್ ಉತ್ತಪ್ಪ!

Sports

ನಮಸ್ತೆ ಸ್ನೇಹಿತರೆ, ಎಲ್ಲರೂ ಐಪಿಎಲ್ ಗಾಗಿ ಕಾಯುತ್ತಿದ್ದಾರೆ, ಇನ್ನೇನ್ನು ಐಪಿಎಲ್ ಶುರುವಾಗಲು ಕೆಲವೇ ದಿನಗಳು ಬಾಕಿ ಉಳಿದಿವೆ. ಕಳೆದ ಬಾರಿ ಕೊ’ರೊನಾ ಕಾರಣದಿಂದ ದುಬೈನ ಸ್ಟೇಡಿಯಂನಲ್ಲಿ ಪ್ರೇಕ್ಷಕರ ಅನುಪ ಸ್ಥಿತಿಯಲ್ಲಿ ಐಪಿಎಲ್ ಆಯೋಜನೆಗೊಂಡಿತ್ತು. ಈ ಬಾರಿ ಹೆಚ್ಚಿನ ನಿ’ರೀಕ್ಷೆ ಇಟ್ಟುಕೊಂಡಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೇ ಈ ಕೊ’ರೊನಾ ಎರಡನೆ ಅಲೆ ನಿ’ರಾಸೆ ತಂದಂಗಾಗಿದೆ. ಕೆಲವೇ ಸ್ಟೇಡಿಯಂಗಳಲ್ಲಿ ಐಪಿಎಲ್ ಗೆ ವೇದಿಕೆ ಸಿದ್ಧಗೊಂಡಿದೆ. ಈ ಬಾರಿಯೂ ಕೂಡಾ ಪ್ರೇಕ್ಷಕರು ಇಲ್ಲದೆ ಆಟ ಆಡಿಸಲು ಆಯೋಜಕರು ತೀರ್ಮಾನ ಮಾಡುತ್ತಾರಾ ಎಂದು ಕಾಯಬೇಕಿದೆ.

Advertisements
Advertisements

13ನೆ ಆವೃತ್ತಿಯಲ್ಲಿ ರಾಜಸ್ತಾನ ರಾಯಲ್ಸ್ ಪರ ಆಡಿದ್ದ ರಾಬಿನ್ ಉತ್ತಪ್ಪರಿಂದ ಹೆಚ್ಚಿನ ನೀರಿಕ್ಷೆಗಳು ಇತ್ತು. ಆದರೆ ಬ್ಯಾಟ್ನಿಂದ ಬಂದಿದ್ದು ಕೇವಲ 196 ರನ್ ಗಳು ಮಾತ್ರ. ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಗೊಂಡ ರಾಬಿನ್ ಉತ್ತಪ್ಪ ಈ ಬಾರಿಯ ಐಪಿಎಲ್ ನಲ್ಲಿ ನಾನು 1000ರನ್ ಗಳಿಸಿ ಮೊದಲ ಬ್ಯಾಟ್ಸ್ ಮನ್ ಆಗಬೇಕು ಎಂದು ಬಯಸಿದ್ದೇನೆ. ಇದು ನನ್ನಲ್ಲಿ ಮೂಡಿರುವ ಗುರಿಯಾಗಿದೆ. ಜೊತೆಗೆ ತಂಡದ ಗೆಲುವಿನಲ್ಲಿ ಸಾಧ್ಯವಾದಷ್ಟು ಪಾಲು ನೀಡಲು ಬಯಸಿದ್ದೇನೆ. ಎಂದು ಇಎಸ್​ಪಿನ್ ಮೂವರು ನಡೆಸಿದ ಸಂದರ್ಶನದಲ್ಲಿ ಹೇಳಿದ್ದಾರೆ.

2014ರಲ್ಲಿ ಚಾಂಪಿಯನ್ ಆಗಿದ್ದ ಕೆಕೆಆರ್ ತಂಡದ ಪರ ಉತ್ತಪ್ಪ ಅವರು 660 ರನ್​ಗಳಿಸಿರುವುದು ಅವರ ಗ’ರಿಷ್ಠ ಸೀಸನ್ ಸ್ಕೋರ್ ಆಗಿರುತ್ತದೆ. ಆ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್ ಕೂಡ ತಮ್ಮದಾಗಿಸಿಕೊಂಡಿದ್ದರು. 2016 ರಲ್ಲಿ ಸತತ 4 ಶತಕಗಳೊಂದಿಗೆ ರಭಸದ ಆಟವಾಡಿದ್ದ ಭಾರತದ ನಾಯಕ ವಿರಾಟ್ ಕೊಹ್ಲಿ ಆರ್ಸಿಬಿ ತಂಡವನ್ನು ಫೈನಲ್ ತಲುಪಿಸಿದ್ದರು. ಅವರ ವಯಕ್ತಿಕ ಮೊತ್ತ 973 ದಾ’ಖಲಿಸುವ ಮೂಲಕ ಐಪಿಎಲ್ ನ ಸೀಸನ್ ನಲ್ಲಿ ಗರಿಷ್ಠ ಮೊತ್ತ ದಾ’ಖಲಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಈ ದಾ’ಖಲೆಯನ್ನು ಉತ್ತಪ್ಪ ಈ ವರ್ಷದ ಸೀಸನ್ ನಲ್ಲಿ ಸರಿಗಟ್ಟಿ ಹೊಸ ದಾ’ಖಲೆ ನಿರ್ಮಿಸುತ್ತಾರಾ, ಇಲ್ಲ ನಿ’ರಾಸೆ ಮೂಡಿಸುತ್ತಾರಾ ಕಾಯಬೇಕಾಗಿದೆ.