Advertisements

ರೂಪೇಶ್ ರಾಜಣ್ಣ ಅಂದು ಏನೇ ಆದರೂ ಬಿಗ್ ಬಾಸ್ ಮನೆಗೆ ಕಾಲು ಇಡುವುದಿಲ್ಲವೆಂದು ಹೇಳಿ, ಈಗ ಬಿಗ್ ಬಾಸ್ ಮನೆಗೆ ಹೋಗಿದ್ದೇಕೆ ಗೊತ್ತಾ? ನಿರ್ಧಾರ ಬದಲಿಸಲು ಅಸಲಿ ಕಾರಣ ಏನು ನೋಡಿ!!

Kannada News

ಪ್ರೀಯ ಓದುಗರೇ ಬಿಗ್ ಬಾಸ್ ಮನೆಯ ಇತ್ತೀಚಿನ ಸೀಸನ್ ಗಳಲ್ಲಿ ಸ್ಪರ್ದಿಗಳ ಆಯ್ಕೆಯಲ್ಲಿ ವಿಶೇಷತೆಗಳು ಇರುವುದು ಕಂಡು ಬರುತ್ತಿದೆ. ಹಾಗೆ ಸ್ಪೆಷಲ್ ಆಗಿ ಸ್ಪರ್ದಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಈ ಬಾರಿಯ ಬಿಗ್ಬಾಸ್ ಮನೆಗೆ ವಿಶೇಷ ಅತಿಥಿಯೊಬ್ಬರು ಆಗಮಿಸುತ್ತಿದ್ದಾರೆ. ಅದು ಬಿಗ್ ಬಾಸ್ ಮನೆ ಎಂದರೆ ಸದಾ ವಿರೋಧಿಸುತ್ತಿದ್ದ ವ್ಯಕ್ತಿ. ಇಂದು ಆ ವ್ಯೆಕ್ತಿಯೇ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವುದಾದರೂ ಯಾಕೆ ಗೊತ್ತಾ? ಅಷ್ಟಕ್ಕೂ ಆ ವಿಶೇಷ ವ್ಯೆಕ್ತಿ ಯಾರು ಗೊತ್ತಾ? ಅದು ಯಾರು? ಅಂತಾ ಹೇಳತೀವಿ ಈ ಲೇಖನ ಪೂರ್ಣವಾಗಿ ಓದಿ.

ಈ ಬಾರಿ ಬಿಗ್ ಬಾಸ್ ಬಹಳ ವಿಭಿನ್ನ ಹಾಗೂ ಮನೋರಂಜನೆಯಿಂದ ಕೂಡಿದೆ. ಈ ಬಾರಿ ಬಿಗ್ ಬಾಸ್ ಮನೆಗೆ ಬರುತ್ತಿರುವ ಸ್ಪರ್ಧಿ ಗಳು ತುಂಬಾನೇ ವಿಶೇಷವಾಗಿದ್ದರೆ. ಈ ಕುರಿತು ಇದೀಗ ಎಲ್ಲೆಡೆ ಬಾರಿ ಸುದ್ದಿಗಳು ಹರಿದಾಡಿವೆ. ಹಾಗೆ ಸಾಮಾಜಿಕ ಜಾಲತಾಣದಲ್ಲಿ ಮಾತುಗಳು ಶುರುವಾಗಿದೆ. ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಯಾಗಿ ಕನ್ನಡ ಪರ ಹೋರಾಟಗಾರರಲ್ಲಿ ಒಬ್ಬರು ಆಗಮಿಸಿಸುತ್ತಿದ್ದಾರೆ. ಕಳೆದ ಸೀಸನ್ ಹೋಲಿಸಿದರೆ ಈ ಬಾರಿಯ ಬಿಗ್ ಬಾಸ್ ಮನೆಯ ಅತಿಥಿಗಳು ಬೇರೆ ಬೇರೆ ರಂಗದಿಂದ ಬಂದವರಗಿದ್ದಾರೆ. ಬರಿ ಸಿನಿಮಾ ರಂಗದಿಂದಲೇ ಹೆಚ್ಚು ಸ್ಪರ್ಧಿಗಳು ಬರುತಿದ್ದ ಬಿಗ್ ಬಾಸ್ ಮನೆಗೆ ಈಗ ಕನ್ನಡದ ಕಟ್ಟಾಳು, ಕನ್ನಡ ಚಳುವಳಿಗಾರ, ಕನ್ನಡ ಪರ ಹೋರಾಟಗಾರ ಒಬ್ಬರು ಬಂದಿದ್ದಾರೆ.

ಈ ಮೊದಲು ಇದೆ ಬಿಗ್ ಬಾಸ್ ಮನೆಯ ಕುರಿತು ಎತೆಚ್ಚವಾಗಿ ಅಲ್ಲಗಳೆದ ಈ ಹೋರಾಟಗಾರ ಇದೀಗ ಸದ್ದಿಲ್ಲದೇ ಬಿಗ್ ಬಾಸ್ ಮನೆಯ ಸ್ಪೆಷಲ್ ಗೆಸ್ಟ್ ಆಗಿದ್ದರೆ ಎನ್ನಬಹುದು. ಈ ಹಿಂದೆ ಬಿಗ್ ಬಾಸ್ ಮನೆಯ ಹೆಸರನ್ನು ಕನ್ನಡದಲ್ಲಿಯೇ ಬರೆಯಬೇಕು ಎಂದು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದರು. ಅಷ್ಟೇ ಅಲ್ಲದೆ ಬಿಗ್ ಬಾಸ್ ಎನ್ನುವ ಹೆಸರನ್ನು ಕನ್ನಡದಲ್ಲಿ ಬರೆಯದೆ ಇದ್ದ ಮೇಲೆ ಬಿಗ್ ಬಾಸ್ ಮನೆಯಲ್ಲಿ ಮಾತ್ರ ಕನ್ನಡದಲ್ಲಿ ಮಾತನಾಡಿ ಅಂತ ಯಾಕೆ ಹೇಳುತ್ತೀರಾ? ಎಂದೆಲ್ಲ ಬಿಗ್ ಬಾಸ್ ಬಗ್ಗೆ ಟೀಕೆ ಮಾಡಿದ್ದರು. ಇವರ ಕಂಪ್ಲೈಂಟ್ ಕೇಳಿದ ಅಲ್ಲಿನ ಆಯೋಜಕರು ಕನ್ನಡದಲ್ಲಿ ಹೆಸರು ಇದ್ರೆ ನಮಗೆ ಜಾಹಿರಾತು ಬರಲ್ಲ, ಹಾಕಿದ ಬಂಡವಾಳ ಕೂಡಾ ವಾಪಾಸ್ ಬರಲ್ಲ ಸರ್ ಅಂದಿದ್ದರಂತೆ.

ಅಸ್ಟರ ಮಟ್ಟಿಗೆ ಬಿಗ್ ಬಾಸ್ ಮನೆಯನ್ನು ಇವರು ವಿರೋಧಿಸಿದ್ದರು. ಅಷ್ಟೇ ಅಲ್ಲ ಓದುಗರೇ ಕೆಲವರು ನೀವೇ ಮುಂದೊಂದು ದಿನಾ ಆ ಮನೆಯ ಸದಸ್ಯರು ಆಗಿ ಸೆಲೆಕ್ಟ್ ಆದ್ರೇ ಹೋಗತೀರ? ಅಂತಾ ಕೇಳಿದ್ದರು. ಇವರು ಕೇಳಿದ ಪ್ರಶ್ನೆಗೆ ಈ ವ್ಯಕ್ತಿ ಆಗ ” ” ನಾನೊಬ್ಬ ಕನ್ನಡ ಕುವರ.ಕನ್ನಡ ವಿರೋಧಿ ಬಿಗ್ ಬಾಸ್ ಮನೆಗೆ ನಾನು ಕಾಲು ಸಹ ಹಾಕಲ್ಲ. ಹಾಗೇನಾದ್ರೂ ಆದ್ರೆ ನಿಮ್ಮ ಬೂಟು ತಗೊಂಡು ಕಿತ್ತೊಗೋವರೆಗೂ ಹೊಡಿರಿ ನಂಗೆ ” ಅಂದಿದ್ದರಂತೆ. ಈಗ ನಿಮಗೆ ಆ ವ್ಯೆಕ್ತಿ ಯಾರು ಅಂತಾ ಗೊತ್ತಾಗಿರಬೇಕು ಅಲ್ವಾ…

ಹೌದು, ಓದುಗರೇ ನಿಮ್ಮ ಊಹೆ ನಿಜ. ಅವರೇ ರೂಪೇಶ್ ರಾಜಣ್ಣ. ಕನ್ನಡ ಪರ ಹೋರಾಟಗಾರರು. ಕನ್ನಡವನ್ನು ಉಳಿಸಬೇಕು ಬೆಳೆಸಬೇಕು ಎನ್ನುವ ಉದ್ದೇಶವಿಟ್ಟುಕೊಂಡವರು. ಇದುವರೆಗೆ ರಾಜ್ಯದಲ್ಲಿ ಸಾಕಷ್ಟು ಹೋರಾಟ, ಧರಣಿಗಳನ್ನು ನಡೆಸಿದ್ದಾರೆ. ಇದೀಗ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಈ ಕಾರಣದಿಂದಲೇ ರಾಜಣ್ಣ ಇದೀಗ ಟ್ರೊಲ್ ಗಳಿಗೆ ಕಾರಣವಾಗಿದ್ದಾರೆ. ಬಿಗ್ ಬಾಸ್ ಬಗ್ಗೆ ಕೆಟ್ಟದಾಗಿ ಮಾತನಾಡಿದ ರೂಪೇಶ್ ರಾಜಣ್ಣ ಅವರೇ ಇಂದು ಬಿಗ್ ಬಾಸ್ ಮನೆಯಲ್ಲಿ ಆಟವಾಡಲು ಹೋಗಿದ್ದು ನಿಜಕ್ಕು ಜನರಿಗೆ ಶಾಕ್ ನಿವ್ಸ್ ಆಗಿದೆ.

ಹೊರಗಡೆ ಇದ್ದಾಗ ಬಿಗ್ ಬಾಸ್ ಗೆ ಬೈದಿದ್ದ ರಾಜಣ್ಣ ಈಗ ಹೇಗೆ ಮನೆಯೊಳಗೆ ಹೋಗಲು ಸಾಧ್ಯವಾಯಿತು. ಹಾಗಾದರೆ ಇವರ ಹೋರಾಟಗಳೆಲ್ಲವೂ ಬೂಟಾಟಿಕೆನಾ? ಅನೇಕ ರೀತಿಯಾಗಿ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಮನೆಯ ಒಳಗೆ ದೀಪಿಕಾ ದಾಸ್ ಅವರು ಬಾಟಲಿಗೆ ಶಿಶೆ ಎಂದಾಗ ರಾಜಣ್ಣ ಅವರು ಅರ್ಥ ಆಗಲಿಲ್ಲ ಅಂದಿದ್ದು ಇದೀಗ ಬಾರಿ ಸುದ್ದಿಯಾಗಿದೆ. ಹೌದು ಕನ್ನಡ ಕನ್ನಡ ಎನ್ನುತ್ತಿದ್ದ ರಾಜಣ್ಣ ಗೆ ಶಿಶೆ ಎಂದ್ರೆ ಬಾಟಲಿ ಅಂತಾ ಗೊತ್ತಾಗಲಿಲ್ವ ಅಂತಾ ಜನರು ಆಡಿಕೊಂಡು ರಾಜಣ್ಣ ಅವರನ್ನ ಟ್ರೊಲ್ ಮಾಡುತ್ತಿದ್ದಾರೆ. ಇವರು ಹೇಳಿದ್ದು ಒಂದು ಮಾಡುತ್ತಿರೋದು ಇನ್ನೊಂದು ಎಂದು ಮೆಚ್ಚಿಕೊಂಡ ಜನ ಇವರನ್ನು ಇದೀಗ ನೋಡುವ ದೃಷ್ಟಿ ಕೋನವನ್ನು ಬದಲಾಸಿಕೊಂಡಿದ್ದಾರೆ.