Advertisements

ಊರಿನವರು ಅಮ್ಮನನ್ನು ಹುಚ್ಚಿ ಎಂದು ಕರೆಯುತ್ತಿದ್ದರು.. ಅಮ್ಮನನ್ನ ಕೂಡಿಹಾಕಿದ್ರು!! ತಾಯಿಯ ಘಟನೆ ನಡೆದು ಕಣ್ಣೀರಿಟ್ಟ ರೂಪೇಶ್ ಶೆಟ್ಟಿ ಅಷ್ಟಕ್ಕೂ ಏನಾಗಿತ್ತು ಗೊತ್ತಾ?

Kannada News

ನಮಸ್ಕಾರ ಗೆಳೆಯರೆ ಅದಾಗಲೇ ಬಿಗ್ ಬಾಸ್ ಸಿಸನ್ 9 ಶುರುವಾಗಿ ಎರೆಡು ವಾರಗಳೆ ಕಳೆದವು. ಎಲ್ಲ ಸ್ಪರ್ಧಿಗಳು ಟಾಸ್ಕ್ ನಲ್ಲಿಯೂ ಸಹ ಉತ್ತಮ ಪ್ರದರ್ಶನ ನೀಡಿದ್ದಾರೆ. ಇನ್ನು ಇಲ್ಲಿ ಸೇರಿದ ಎಲ್ಲ ಕಂಟೆಸ್ಟಗಳದ್ದು ಒಂದೊಂದು ಕಥೆ. ಎಲ್ಲರ ಜೀವನ ಒಂದೆ ರೀತಿಯಾಗಿ ಇರುವುದಿಲ್ಲ. ಕೈ ಬೆರೆಳು ಹೇಗೆ ಸಮಾನವಾಗಿಲ್ಲವೊ ಅದೇ ರೀತಿ ಪ್ರತಿಯೂಬ್ಬ ಮನುಷ್ಯನ ಜೀವನದ ಹಿಂದೆಯೂ ಒಂದೊಂದು ಕಥೆ ಇರುತ್ತದೆ. ಅದೇ ರೀತಿ ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಅವರ ಅವರ ಬದುಕಿನ ಕಹಿ ಘಟನೆಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಅದರಲ್ಲಿ ರೂಪೇಶ್ ಶೆಟ್ಟಿ ಅವರು ಹೇಳಿಕೊಂಡ ಅವರ ಜೀವನದ ಕಥೆ ನಿಜಕ್ಕೂ ಅಲ್ಲಿರುವವರು ಕಣ್ಣೀರು ಹಾಕಿದ್ದಾರೆ.‌ ಹಾಗಾದರೆ ರೂಪೇಶ್ ಹೇಳಿದ ಆ ಕಥೆ ಏನು ಅಂತೀರಾ ಹಾಗಿದ್ದರೆ ಈ ಸ್ಟೋರಿನಾ ಕೊನೆವರೆಗೂ ಓದಿ ಹಾಗೂ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ.

ಬಿಗ್ ಬಾಸ್ ಸಿಸನ್ ೯ ರ ಸ್ಪರ್ಧಿಗಳಲ್ಲಿ ಅತಿ ಹೆಚ್ಚು ಕ್ರಿಯೆಟಿವ್ ಆಗಿರುವವರಲ್ಲಿ ರೂಪೇಶ್ ಕೂಡ ಒಬ್ಬರು.‌ ಮಾತು ಹೇಳೊದ್ರಲ್ಲಿ‌ ಇರಬಹುದು ಅಥವಾ ಟಾಸ್ಕ ಮಾಡೊದು ಆಗಿರಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಇರ್ತಾರೆ. ಹೀಗಾಗಿ ಸಧ್ಯ ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಕುರಿತಾಗಿ ಒಂದಲ್ಲ ಒಂದು ಸುದ್ದಿ ಹರಿದಾಡುತ್ತಲೇ ಇರುತ್ತವೆ.

ರೂಪೇಶ್ ವಯಕ್ತಿಕ ಜೀವನ ನೋಡುವುದಾದರೆ ಅವರು ಹುಟ್ಟಿದ್ದು ಕುಂದಾಪುರದ ಕುಗ್ರಾಮದಲ್ಲಿ. ಅಲ್ಲಿಯೇ ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು. ನಂತರ ನಟನೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಇವರು ಚಿಕ್ಕ ವಯಸ್ಸಿನಲ್ಲಿಯೇ ನಾಟಕಗಳಲ್ಲಿ ಅಭಿನಯಿಸುವುದು, ಕಥೆ ಕವನ ಬರೆಯುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದಷ್ಟೆ ಅಲ್ಲದೆ ತಮ್ಮದೇ ಆದ ಯುಟ್ಯುಬ್ ಚಾನೆಲ್ ಒಂದನ್ನು ಹೊಂದಿರುವ ರೂಪೇಶ, ಅದರಿಂದಾಗಿ ಜನರಿಗೆ ಸ್ವಲ್ಪ ಮಟ್ಟಿಗೆ ಚಿರಪರಿಚಿತರಾಗಿದ್ದಾರೆ.

ಯೂಟ್ಯೂಬ್ ಚಾಲೆನಿಂದಾಗಿ ಅವರ ಪ್ರತಿಭೆಗೆ ಬೆಲೆ ಸಿಕ್ಕಂತಾಯಿತು. 92.7 ಎಫ್ ಎಂ ರೇಡಿಯೋ ದಲ್ಲಿ ರೂಪೇಶ್ ಅವರಿಗೆ ಅವಕಾಶ ಸಿಕ್ತು. ಬಳಿಕ ತುಳು ಭಾಷೆಯಲ್ಲಿ ಐಸ್ ಕ್ರೀಮ್ ಎನ್ನುವ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿ ತುಳುನಾಡಿನ ಹೆಮ್ಮೆಯ ನಟ ಎನಿಸಿದ್ರು. ಬಳಿಕ ಡೇಂಜರ್ ಜೋನ್ ಎನ್ನುವ ಕನ್ನಡ ಸಿನಿಮಾ ಒಂದರಲ್ಲಿಯೂ ಕೂಡ ಅಭಿನಯಿಸಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿದ್ದಾರೆ.

ಅವರ ವೈಯಕ್ತಿಕ ಜೀವನದ ಒಂದು ಘಟನೆಯನ್ನು ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದಾರೆ. ಹೌದು ರೂಪೇಶ್ ತಾಯಿಯನ್ನು ಕಳೆದುಕೊಂಡ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ತಾಯಿಗೆ ಮಕ್ಕಳಾದ ಹಾಗೆ ತಮ್ಮ ಮಾನಸಿಕ ಸ್ಥಿತಿಯನ್ನು ಕಳೆದುಕೊಂಡರು. ಅವರು ನಮ್ಮ ಹಾಗೆ ನಾರ್ಮಲ್ ಇರಲು ಸಾಧ್ಯವಾಗಲಿಲ್ಲ. ಜನರು ಅವರ ಈ ಪರಿಸ್ಥಿತಿಯನ್ನು ಕಂಡು ಹುಚ್ಚು ಹಿಡಿದಿದೆ ಎಂದು ಹೇಳಿ ತಾಯಿಯನ್ನು ಕೋಣೆಯೊಂದರಲ್ಲಿ ಕಟ್ಟಿ ಹಾಕುವ ಹಾಗೆ ಮಾಡಿದ್ದರು.

ಅವರ ಈ‌ ಮಾನಸಿಕ ಸ್ಥಿತಿಯನ್ನೆ ದೌರ್ಬಲ್ಯವಾಗಿ ತಿಳಿದು ದೆವ್ವ ಹಿಡಿದಿದೆ ಹೇಗೆ ಎಲ್ಲ ಕಾರಣಗಳಿಂದ ನನ್ನ ತಾಯಿಯನ್ನು ಕೋಣೆಯಲ್ಲಿ ಕೂಡಿ ಹಾಕಲಾಯಿತು. ನನ್ನ ಜೊತೆ ಚನ್ನಾಗಿಯೇ ಮಾತನಾಡುತ್ತಿದ್ದರು. ಒಂದು ಸಾರಿ ನನ್ನನ್ನು ಕರೆದು ನೀನು ಸಹ ಎಲ್ಲರ ಹಾಗೆ ನನಗೆ ಹುಚ್ಚು ಹಿಡಿದೆ ಎಂದು ನಂಬಿದ್ದೀಯಾ ಎಂದು ಪ್ರಶ್ನೆ ಮಾಡಿದ್ದ ವಿಷಯವನ್ನು ಸಹ‌ ಹೇಳಿಕೊಂಡಿದ್ದಾರೆ.

ತಾಯಿ ನಾನು ಸರಿ‌ಯಾಗಿದ್ದೇನೆ ನನಗೆ ಏನು ಆಗಿಲ್ಲ. ನಾನು ಹುಚ್ಚಿ ಅಲ್ಲ ಎಂದು ಹೇಳಿ ಅಳುತ್ತಿದ್ದರು. ಇದನ್ನೆಲ್ಲ‌ ಕಂಡ ರೂಪೇಶ್ ತಾಯಿಯನ್ನು ಹೊರಗೆ ಕರೆದುಕೊಂಡು ಹೋದರು. ಅವರೊಂದಿಗೆ ಮಾತನಾಡುತ್ತಿದ್ದರು. ಒಂದು ದಿನ ಅವರ ತಾಯಿ ತಲೆ ಸುತ್ತಿ ಕೆಳಗೆ ಬೀಳುತ್ತಾರೆ. ಅದನ್ನು ಕಂಡ ಅಕ್ಕಪಕ್ಕದ ಜನ ದಿನವು ಇವರದ್ದು ಇದ್ದದ್ದೆ ಎಂದು ಸುಮ್ಮನಾಗಿ ಬೀಡುತ್ತಾರೆ.

ಕೆಲವು ಸಮಯದ ನಂತರ ತಾಯಿಯನ್ನು ನೋಡಿದರೆ ಅವರ ಉಸಿರು ಅಲ್ಲಿಗೆ ಕೊನೆಯಾಗಿ ಹೋಗಿರುತ್ತದೆ. ಹೌದು ರೂಪೇಶ್ ತಾಯಿ ನೆಲಕ್ಕೆ ಬಿದ್ದಾಗಲೆ ಸತ್ತು ಹೋಗಿರುತ್ತಾರೆ. ಇದನ್ನು ನೆನೆದು ರೂಪೇಶ್ ಬಿಗ್ ಬಾಸ್ ಮನೆಯಲ್ಲಿ ತಮ್ಮ‌ ಬದುಕಿನ ಕಹಿ ಘಟನೆಯನ್ನು ತಾಯಿಯನ್ನು ಕಳೆದುಕೊಂಡ ಸಂಗತಿಯನ್ನು ಹಂಚಿಕೊಳ್ಳುತ್ತಾರೆ. ಅವರ ಈ‌ ಕಥೆ ಕೇಳಿ ಬಿಗ್ ಬಾಸ್ ಇನ್ನಿತರ ಸ್ಪರ್ಧಿಗಳು ಸಮಾಧಾನ ಮಾಡುತ್ತಾರೆ.

ಅದೇನೆ ಆಗಲಿ ಯಾವುದೇ ವ್ಯೆಕ್ತಿಯ ವಾಸ್ತವತೆಯನ್ನು ನೋಡಿ ಅವರ ವರ್ತಮಾನವನ್ನು ಗುರುತಿಸಬಾರದು. ಪ್ರತಿಯೂಬ್ಬ ಮನುಷ್ಯನ ಜೀವನದಲ್ಲಿ ಒಂದಲ್ಲ ಒಂದು ಘಟನೆ ನಡೆದೆ ನಡೆದಿರುತ್ತದೆ. ಅದುವೇ ಜೀವನದಲ್ಲಿ ಏನಾದರು ಮಾಡಲು ಸ್ಪೂರ್ತಿಯಾಗುತ್ತದೆ. ಒಮ್ಮೊಮ್ಮೆ ಅದುವೆ ಜೀವನದ ಪಾಠವನ್ನು ಕಲಿಸುತ್ತದೆ.