Advertisements

ಪ್ರಿಯಕರನಿಗಾಗಿ ರಷ್ಯಾದಿಂದ ಭಾರತಕ್ಕೆ ಬಂದ ಯುವತಿ..! ಇವನನ್ನು ಮದುವೆಯಾಗಲು ಈಕೆ ಪಟ್ಟ ಕಷ್ಟಗಳು ಏನು ಗೊತ್ತಾ..?

Kannada News

ನಮಸ್ತೆ ಸ್ನೇಹಿತರೆ, ಪ್ರೀತಿಗೆ ಬಣ್ಣ ಎನ್ನುವುದು ಇರುವುದಿಲ್ಲ, ಕಪ್ಪಾದರೇನು, ಬಿಳುಪಾದರೇನು ಪ್ರೀತಿಯ ಮುಂದೆ ಇವೆಲ್ಲ ಲೆಕ್ಕಕ್ಕಿಲ್ಲ. ಅದೇ ರೀತಿ ಪ್ರೀತಿ ಹುಟ್ಟಬೇಕಾದರೆ ಅದು ನೀನು ಯಾವ ಜಾತಿ, ನಿಂದು ಯಾವ ಊರು ಅಂತ ನೋಡಿ ಹುಟ್ಟುವುದಿಲ್ಲ. ಹೌದು ಇದೇ ರೀತಿಯ ಒಂದು ಘಟನೆಯ ಬಗ್ಗೆ ನಾವು ನಿಮಗೆ ತಿಳಿಸಲಿದ್ದೇವೆ, ಆ ಹುಡುಗ ಊರು ಹರಿಯಾಣ. ಈ ಯುವಕ ಪ್ರೀತಿಸಿದ ಹುಡುಗಿಯ ದೇಶ ಭಾರತವೇ ಅಲ್ಲ.. ಹೌದು ಇವನು ಪ್ರೀತಿಸಿದ ಹುಡುಗಿಯ ದೇಶ ರಷ್ಯಾ. ನಿಜಕ್ಕೂ ಈ ಪ್ರೇಮ್ ಕಹಾನಿ ತುಂಬಾ ಇಂಟರೆಸ್ಟಿಂಗ್ ಆಗಿದೆ‌. ಇದೀಗ ಈ ಪ್ರೇಮಿಗಳ ಲವ್ ಸ್ಟೋರಿ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಬನ್ನಿ ಈ ಲವ್ ಸ್ಟೋರಿ ಹೇಗೆ ಶುರುವಾಯಿತು ನೋಡೋಣ…

Advertisements
Advertisements

ಈ ಯುವಕನ ಹೆಸರು ರಮೇಶ್ ಅಂತ. ರಮೇಶ್ ಹರಿಯಾಣದ ಒಂದು ಸಣ್ಣ ಹಳ್ಳಿಯಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಾನೆ. ರಮೇಶ್ ಓದಿರೋದು 12 ನೇ ತರಗತಿಯವರೆಗೆ ಮಾತ್ರ. ಒಂದು ದಿನ ರಮೇಶ್ ಆನ್‌ಲೈನ್ ಸೈಟ್‌ ಒಂದರಲ್ಲಿ ರಷ್ಯಾದ ಯುವತಿಯೊಬ್ಬಳನ್ನ ಭೇಟಿಯಾದನು, ಮೊದ ಮೊದಲು ಇಬ್ಬರೂ ಒಳ್ಳೆಯ ಸ್ನೇಹಿತರಾದರು. ಬರುಬರುತ್ತಾ ರಮೇಶ್ ಆಕೆಯನ್ನ ಪ್ರೀತಿಸಲು ಶುರುಮಾಡಿದನು. ನಂತರ ರಮೇಶ್ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಅಂತ ಹುಡುಗಿಗೆ ಹೇಳಿದನು. ಇದನ್ನು ಕೇಳಿದ ಹುಡುಗಿ ಸ್ವಲ್ಪ ಶಾ’ಕ್ ಆಗಿ, ರಮೇಶನ ಪ್ರೀತಿಯನ್ನು ಒಪ್ಪಿಕೊಂಡಳು. ಇಬ್ಬರೂ ಪ್ರೇಮ ಪಕ್ಷಿಗಳ ರೀತಿ ಪ್ರೀತಿಸಲು ಪ್ರಾರಂಭ ಮಾಡಿದರು. ಇಬ್ಬರಿಗೂ ಒಬ್ಬರನ್ನೊಬ್ಬರು ಭೇಟಿಯಾಗಬೇಕೆಂದು ಆಸೆ ಆಯಿತು.

ಸಡನ್ನಾಗಿ ಒಂದು ದಿನ ಆಕೆ ರಷ್ಯಾದಿಂದ ರಮೇಶ್‌ನನ್ನ ಭೇಟಿಯಾಗಲು ಹರಿಯಾಣಾದ ಹಳ್ಳಿಗೇ ಬಂದುಬಿಟ್ಟಳು. ದೂರದ ದೇಶದಿಂದ ಈ ಯುವತಿ ಪ್ರೀತಿಗಾಗಿ ಬಂದಿದ್ದಾಳೆ ಎಂದು ತಿಳಿದ ರಮೇಶನ ಕುಟುಂಬಸ್ಥರು ಹಾಗೂ ಹಳ್ಳಿಯ ಜನರು ಶಾ’ಕ್ ಆಗಿದ್ದರು. ನಂತರ ಈ ಯುವತಿ ರಮೇಶನ ಕುಟುಂಬಸ್ಥರನ್ನು ಒಪ್ಪಿಸಿ ರಮೇಶನ ಜೊತೆ ಹಿಂದೂ ಸಂಪ್ರದಾಯದಲ್ಲಿ ಮದುವೆಯಾದಳು. ಆಕೆ ಯಾವುದೇ ಅಹಂಕಾರ ತೋರದೆ ಒಲೆಯನ್ನ ಉರಿಸುವುದರಿಂದ ಹಿಡಿದು ರೊಟ್ಟಿ ಮಾಡುವವರೆಗೆ ಎಲ್ಲಾ ಕೆಲಸಗಳನ್ನೂ ಕಲಿತು, ತನ್ನ ಗಂಡನನ್ನು ಹಾಗೂ ಕುಟುಂಬವನ್ನು ಸಂತೋಷದಿಂದ ನೋಡಿಕೊಳ್ಳುತ್ತಿದ್ದಾಳೆ.