Advertisements

ಯಶ್ ರಿಜೆಕ್ಟ್ ಮಾಡಿದ್ದ ಸಿನಿಮಾದಲ್ಲಿ ನಾಯಕನಾಗಿ ನಟಿಸಿ ಹೀನಾಯ ಸೋಲು ಕಂಡ ಸೈಫ್..! ಆ ಸಿನಿಮಾ ಯಾವುದು ಗೊತ್ತಾ..?

Cinema

ನಮಸ್ತೆ ಸ್ನೇಹಿತರೆ, ಸಿನಿಮಾ ರಂಗದಲ್ಲಿ ಯಶಸ್ವಿ ಹೀರೋ ಆಗಬೇಕೆಂದರೆ ಅಷ್ಟು ಸುಲಭದ ಮಾತಲ್ಲ.. ಕತೆಯಿಂದ ಹಿಡಿದು ಪೂರಾ ಸಿನಿಮಾ ತಂಡವನ್ನು ಸೆಲೆಕ್ಟ್ ಮಾಡುವಲ್ಲಿ ತುಂಬಾ ನಿಗಾವಹಿಸಬೇಕು. ಅದೇ ರೀತಿ ನಮ್ಮ ರಾಕಿ ಬಾಯ್ ಯಶ್ ಸಹ ಸಿನಿಮಾಗಳನ್ನು ಒಪ್ಪಿಕೊಳ್ಳಲು ಅದರ ಕಥೆ ಮತ್ತು ಆ ಸಿನಿಮಾ ತಂಡವನ್ನು ನೋಡುತ್ತಾರೆ.. ಈ ಕಾರಣದಿಂದಲೇ ಯಶ್ ಅವರು ಸಕ್ಸಸ್ ಫುಲ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ಕೆಜಿಎಫ್ ಸಿನಿಮಾದಿಂದ ಯಶ್ ಅವರ ಹವಾ ಇಡೀ ಭಾರತಕ್ಕೆ ಮುಟ್ಟಿದೆ.. ಈಗ ಯಶ್ ಅವರಿಗೆ ಬಾಲಿವುಡ್ ನಲ್ಲೂ ಸಹ ಸಿನಿಮಾ ಆಕಾಶಗಳು ಬರುತ್ತಿವೆ‌. ಅದೇ ರೀತಿ ಯಶ್ ಅವರಿಗೆ ಬಾಲಿವುಡ್ ನಿಂದ ಒಂದು ಸಿನಿಮಾ ಆಫರ್ ಬಂದಿತ್ತು, ಆದರೆ ಯಶ್ ಮಾತ್ರ ಅದನ್ನು ತಿರಸ್ಕರಿಸಿ ಬಿಟ್ಟಿದ್ದರು..

Advertisements
Advertisements

ಯಶ್ ತಿರಸ್ಕರಿಸಿದ್ದ ಆ ಬಾಲಿವುಡ್ ಸಿನಿಮಾವನ್ನು ಸೈಫ್ ಆಲಿ ಖಾನ್ ನಾನು ಮಾಡುತ್ತೇನೆ ಎಂದು ಒಪ್ಪಿಕೊಂಡು, ಈಗ ಹೀನಾಯ ಸೋಲನ್ನು ಕಂಡಿದ್ದಾರೆ.. ಅಷ್ಟಕ್ಕು ಆ ಸಿನಿಮಾ ಯಾವುದು ಅಂತ ನಿಮಗೆ ಪ್ರಶ್ನೆ ಮೂಡಿರಬಹುದು.. ಆ ಸಿನಿಮಾ 2019 ಅಕ್ಟೋಬರ್ ನಲ್ಲಿ ನಟ ಸೈಪ್ ಅಘೋ’ರಿಯಾಗಿ ನಟಿಸಿದ್ದ ಲಾಲ್ ಕಪ್ತಾನ್. ಆದರೆ ಈ ಸಿನಿಮಾ ಮಾತ್ರ ಕಲೆಕ್ಷನ್ ಮಾಡುವಲ್ಲಿ ತುಂಬಾ ನಿರಾಸೆ ಮೂಡಿಸಿತ್ತು.. ಆದರೆ ಈ ಸಿನಿಮಾವನ್ನು ಇದಕ್ಕೆ ಮೊದಲು ಯಶ್ ಅವರನ್ನು ಹೀರೋ ಮಾಡಲು ನಿರ್ಧರಿಸಿದ್ದರು ಎನ್ನುವುದೇ ಆ’ಶ್ಚ’ರ್ಯ..

ಆದರೆ ಯಶ್ ಅವರಿಗೆ ಈ ಸಿನಿಮಾದ ಕಥೆ ಹಾಗೂ ಪಾತ್ರ ಇಷ್ಟವಾಗಲಿಲ್ಲ ಅಂತ ರಿಜೆ’ಕ್ಟ್ ಮಾಡಿದ್ದರಂತೆ. ಹೀಗೆ ಯಶ್ ಅಂದು ತಿರಸ್ಕರಿಸಿದ ಸಿನಿಮಾ ಸೈಫ್ ಅಲಿಖಾನ್ ಅವರಿಗೆ ದಕ್ಕಿತ್ತು ಎನ್ನಲಾಗಿದ್ದು, ಆದರೆ ಸೈಫ್ ಅಭಿಮಾನಿಗಳಿಗೆ ಆ ಸಿನಿಮಾ ಮಾತ್ರ ತುಂಬಾ ನಿರಾಸೆಯನ್ನುಂಟು ಮಾಡಿತ್ತು. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ಆಗುತ್ತಿವೆ. ಆದರೆ ಈ ವಿಷಯದ ಬಗ್ಗೆ ಸೈಫ್ ಆಗಲಿ, ಯಶ್ ಆಗಲಿ ಯಾವುದೇ ಮಾತು ಆಡಿಲ್ಲ… ಇದರ ಬಗ್ಗೆ ನೀವೇನಂತಿರಾ ಸ್ನೇಹಿತರೆ.. ಕಾಮೆಂಟ್ ಮಾಡಿ ತಿಳಿಸಿ..