Advertisements

ಬೀದಿ ಭಿಕ್ಷುಕಿಯ ಮಗಳು ಸಲ್ಮಾನ್ ಖಾನ್ ತಂಗಿಯಾಗಿದ್ದು ಹೇಗೆ ಗೊತ್ತಾ? ಈ ಹುಡುಗಿಯ ಬಾಳಲ್ಲಿ ಅವತ್ತು ನಡೆದಿತ್ತು ಒಂದು ಮಿರಾಕಲ್..

Inspiration Kannada News

ಪ್ರಿಯ ಓದುಗರೇ ಎಷ್ಟೋ ಜನ ಎತ್ತರಕ್ಕೆ ಏರಿದಂತೆ ಕೇವಲ ಹಣ, ಆಸ್ತಿ, ಬಂಧು ಬಳಗ ಅಂತಾ ಸೀಮಿತ ತಮ್ಮದೇ ಅದ ಐಶರಾಮಿ ಚೌಕಟ್ಟಲ್ಲಿ ಜೀವಿಸುತ್ತಾರೆ. ಇನ್ನು ಕೆಲವರು ಮಾತ್ರ ಇವೆಲ್ಲವನ್ನು ಕಿತ್ತೆಸದು ಸರಳವಾಗಿ, ಸಜ್ಜನರೊಂದಿಗೆ ಜೀವನ ನಡೆಸುತ್ತಿರುತ್ತಾರೆ. ಎಂತಹ ವ್ಯಕ್ತಿ ನಮ್ಮ ಸ್ಯಾಂಡಲವುಡ್ ನ ದೊಡ್ಡಮನೆಗೆ ಇದೆ. ಅದೇ ತರಾ ಬಾಲಿವುಡ್ ನ ಖಾನ್ ಕುಟುಂಬ ಕೂಡಾ ಇದೆ. ಈ ಖಾನ್ ಕುಟುಂಬಕ್ಕೆ ಒಬ್ಬ ಯುವತಿ ಅಧಿಕೃತವಾಗಿ ಎಂಟ್ರಿ ಆಗುತ್ತಾಳೆ. ಯಾರು ಆಕೆ? ಮುಂದೆ ಏನಾದ್ಲು ಅಂತಾ ಹೇಳತೀವಿ ಈ ಸ್ಟೋರಿ ನಾ ಕೊನೆವರೆಗೂ ಓದಿ. ಬಾಲಿವುಡನಲ್ಲಿ ಖಾನ್ ಕುಟುಂಬ ಬಹು ದೊಡ್ಡ ಕುಟುಂಬ. ಇದು ಪರೋಪಕಾರಿ ಸದಸ್ಯರನ್ನು ಒಳಗೊಂಡಿದೆ. ಈ ಕುಟುಂಬದ ಕೂಡಿಯೇ ಎಲ್ಲರ ಮೆಚ್ಚಿನ ಸಲ್ಲು. ಬ್ಯಾಚಲರ್ ಹೀರೊ ಸಲ್ಮಾನ್ ಖಾನ್.

Advertisements
Advertisements

ಇವರ ತಂದೆ ಸಲೀಮ್ ಖಾನಗೆ ಇಬ್ಬರು ಹೆಂಡತಿಯರು. 3 ಜನ ಗಂಡು ಮತ್ತು ಓರ್ವ ಮಗಳಿದ್ದಳು. ಆದ್ರು ಕೂಡಾ ಮಾತೋರ್ವ್ ಪುಟ್ಟ ಬಾಲಕಿಯನ್ನ ಮಗಳಾಗಿ ಕುಟುಂಬಕ್ಕೆ ಸಲ್ಮಾನ್ ಅಧಿಕೃತವಾಗಿ ಸೇರಿಸಿಕೊಂಡಿದ್ದರು. ಹೌದು… ಯಾರು ಆ ಪುಟ್ಟ ಬಾಲಕಿ ಅಂತಾ ಅಂದ್ರೇ , ಆಕೆ ಓರ್ವ ಭೀಕ್ಷಕಿ ಮಗಳು. ಇವಳನ್ನ ಯಾಕೆ ಇವರು ಕರೆತಂದ್ರು ಅಂತೀರಾ..? ಸಲೀಮ್ ಖಾನ್ ಪ್ರತಿದಿನಾ ಸಂಜೆ ಬೆಳಿಗ್ಗೆ ವಾಕಿಂಗ್ ಹೋಗುತ್ತಿದರು. ದಾರಿ ಮದ್ಯ ಓರ್ವ ಮಹಿಳೆ ಪುಟ್ಟ ಮಗುವಿನೊಂದಿಗೆ ಭಿಕ್ಷೆ ಬೇಡಿ ತನ್ನ ಮತ್ತು ಮಗುವಿನ ಹೊಟ್ಟೆ ತುಂಬಿಸುತ್ತಿದ್ದಳು. ಇದನ್ನ ಕಂಡ ಸಲೀಮ್ ಖಾನ್ ಆಕೆಯ ಪುಟ್ಟ ಕಂದನತ್ತ ಗಮನ ಹರಿದಿತ್ತು. ಅಂದಿನಿಂದ ಖಾನ್ ಅವರು ಮನೆಯಿಂದ ಬರುವಾಗ ಸ್ವಲ್ಪ್ ತಿಂಡಿ, ಆಹಾರವನ್ನು ತಂದು ಕೊಡುತ್ತಿದ್ದರು. ಇದು ಅವರ ಪ್ರತಿದಿನದ ಕಾಯಕವಾಗಿತ್ತು. ಅದೊಂದು ದಿನಾ ಆ ಮಹಿಳೆ ಸತ್ತು ಹೋಗಿದ್ದಳು.

ಅವಳ ದೇಹವನ್ನು ಅಲ್ಲಾಡಿಸಿ ಆಹಾರಕ್ಕಾಗಿ ಅಳುವ ಪುಟ್ಟ ಮಗುವಿನ ರೋದನೆಯನ್ನ ಸಲೀಮ್ ಖಾನ್ ಸಹಿಸದೆ ಆ ಮಗುವನ್ನು ಮನೆಗೆ ಕರೆ ತಂದರು. ಅವಳ ಕರುಣಾಜನಕ ಕಥೆ ಕೇಳಿದ ಕುಟುಂಬಸ್ಥರು ಆಕೆಯನ್ನು ಅತೀ ಪ್ರೀತಿಯಿಂದ ನೋಡಲು ಪ್ರಾರಂಭೀಸಿದರು. ನಂತರ ಸಲೀಮ್ ಖಾನ್ ಅವಳನ್ನು ಸಹ ಅಧಿಕೃತವಾಗಿ ದತ್ತು ಪಡೆದರು. ಆಕೆಯ ಮೂಲ ಹೆಸರು ಅರ್ಪಿತಾ. ಅದನ್ನೇ ಮುಂದೆ ಅರ್ಪಿತಾ ಖಾನ್ ಎಂದು ಕರೆಯುತ್ತಾರೆ. ಕಾರಣ ಈ ಬಾಲಕಿ ಹಿಂದೂ ಧರ್ಮದವಳಾಗಿದ್ದಳು. ಆದ್ದರಿಂದಲೇ ಇವಳ ಹೆಸರು ಅರ್ಪಿತಾ ಖಾನ್ ಆಯಿತು. ಈ ಕುಟುಂಬ ಆಕೆ ಕಳೆದುಕೊಂಡು ಎಲ್ಲಾ ರೀತಿಯ ಆಸೆ, ಕನಸ್ಸನ್ನು, ಶಿಕ್ಷಣವನ್ನು ಸಹ ನೀಡಿತ್ತು. ಅಷ್ಟೇ ಅಲ್ಲ ಸಲೀಮ್ ಅವರು ತಮ್ಮ ಸ್ವಂತ ಮಕ್ಕಳಿಗಿಂತ ಹೆಚ್ಚು ಅರ್ಪಿತಾರನ್ನ ಪ್ರೀತಿಸಿದ್ದಾರೆ.

ಆದ್ದರಿಂದಲೇ ಅರ್ಪಿತಾರನ್ನ ದೊಡ್ಡ ಉದ್ದಮಿ ಆಯುಷ್ ಶರ್ಮಾ ಎಂಬ ಯುವಕನೊಂದಿಗೆ ಅದ್ದೂರಿಯಾಗಿ ವಿವಾಹ ಮಾಡಿಕೊಟ್ಟಿದ್ದರು. ಆಯುಷ್ ಒಬ್ಬ ಹಿಂದೂ ಧರ್ಮದ ಯುವಕ. ಖಾನ್ ಕುಟುಂಬ ಅವರ ಸಂಪ್ರದಾಯದಂತೆ ವಿಧಿ – ವಿಧಾನದಂತೆ ಎಲ್ಲ ಶಾಸ್ತ್ರಗಳನ್ನು ಮಾಡಿ ವಿವಾಹ ಮಾಡಿಕೊಟ್ಟಿದ್ದು ಗಮನರ್ಹವಾಗಿದೆ. ಖಾನ್ ಕುಟುಂಬ ಆಕೆಯ ಮದ್ವೆಗೆ ಸು.2 ಕೋಟಿ ರೂಪಾಯಿ ಖರ್ಚು ಮಾಡಿತ್ತು. ಇದೀಗ ಅರ್ಪಿತಾ ಫ್ಯಾಷನ್ ಡಿಸೈನರ್ ಮತ್ತು ಅರ್ಕಿಟೆಕ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಳೆ.

ಆದ್ರೆ ಕುಟುಂಬ ಅವಳಿಗೆ ಸಿನಿಮಾ ರಂಗಕ್ಕೆ ಬರುವಂತೆ ಒತ್ತಾಯಿಸಲಿಲ್ಲ. ಅವಳ ಅಭಿರುಚಿಗೆ ತಕ್ಕಂತೆ ಅವಳಿಗೆ ಶಿಕ್ಷಣ ನೀಡಿತು. ಅದರಂತೆ ಅವಳು ಭಿನ್ನ ಅಭಿರುಚಿ ಹೊಂದಿದ್ದಾಳೆ. ಹೀಗೆ ಅರ್ಪಿತಾ ಖಾನ್ ಸಲ್ಮಾನ್ ಖಾನ್ ಅವರ ಮುದ್ದಿನ ಸಹೋದರಿಯಾಗಿ ಅವರ ಕುಟುಂಬದಲ್ಲಿ ಒಂದಾಗಿದ್ದಾಳೆ. ಹಿಂದೂ -ಮುಸ್ಲಿಂ ಏಕ್ ಹೈ ಎನ್ನುವ ಮಾತಿಗೆ ಈ ಖಾನ್ ಕುಟುಂಬ ಸಾಕ್ಷಿಯಾಗಿದೆ.