Advertisements

3 ನಿಮಿಷ 45 ಸೆಕೆಂಡ್ ಗೆ ಸಮಂತಾ ಪಡೆದಿದ್ದು ಬರೋಬ್ಬರಿ ಎಷ್ಟು ಕೋಟಿ ಗೊತ್ತಾ? ಅಬ್ಬಬ್ಬಾ ಏನಿದು ಭಾರತೀಯ ಚಿತ್ರರಂಗದಲ್ಲಿ ಸಮಂತಾ ಹವಾ ನೋಡಿ.!!

Kannada News

ಇದೀಗ ಸಿನಿಮಾಗಳ ಕಥೆಗಿಂತಲೂ ಅದರ ಹಾಡುಗಳೇ ಹಿಟ್ ಆಗಿಬಿಡುತ್ತದೆ. ಹಾಡಿನ ಮೂಲಕವೇ ಸಿನಿಮಾ ಓಡಿದ್ದೂ ಇದೆ. ಈ ಹಿಂದೆ ಕನ್ನಡದ ರಾಬರ್ಟ್ ಸಿನಿಮಾದ ತೆಲುಗು ಹಾಡು ಕಣ್ಣೆ ಅದಿರೆಂದಿ ಹಾಡು ತುಂಬಾನೇ ಫೇಮಸ್ ಆಗಿತ್ತು. ಆದರೆ ಇದೀಗ ಎಲ್ಲರ ಬಾಯಲ್ಲಿ, ಎಲ್ಲರ ಫೆವರೀಟ್ ಇನ್ಸ್ಟಾ ರೀಲ್ಸ್ ಆಗಿರೋದು ಪುಷ್ಪಾ ಸಿನಿಮಾದ ಊ ಅಂತವಾ ಮಾವ ಹಾಡು. ತೆಲುಗಿನ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪಾ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ.

Advertisements
Advertisements

ಪ್ಯಾನ್ ಇಂಡಿಯಾ ಸಿನಿಮಾ ಆದ ಪುಷ್ಪಾ ಸಿನಿಮಾದಲ್ಲಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅವರ ಆಕ್ಟಿಂಗ್ ತುಂಬಾನೇ ಭಿನ್ನವಾಗಿ ಮೂಡಿಬಂದಿದೆ. ಆದರೆ ಈ ಸಿನಿಮಾವನ್ನು ಜನರು ಇನ್ನಷ್ಟು ಇಷ್ಟಪಡುವಂತೆ ಮಾಡಿದ್ದು ಸಮಂತಾ ಅವರ ಐಟಂ ಡ್ಯಾನ್ಸ್. ಊ ಅಂಟವಾ ಮಾವ ಅನ್ನುವ ಹಾಡಿಗೆ ಸಮಂತಾ ಅವರು ಕುಣಿದ ಸ್ಟೈಲ್ ನೋಡಿ ಎಲ್ಲರೂ ಶಾಕ್ ಆಗಿದ್ದರು. ಇಷ್ಟರವರೆಗೆ ಹೀರೋಯಿನ್ ಆಗಿ ತೆರೆ ಮೇಲೆ ಮಿಂಚಿದ್ದ ಸಮಂತಾ ಅವರು ಇದೇ ಮೊದಲ ಬಾರಿಗೆ ಐಟಂ ಸಾಂಗಿಗೆ ಹೆಜ್ಜೆ ಹಾಕಿದ್ದಾರೆ. ಆದರೆ ಮೊದಲ ಪ್ರಯತ್ನದಲ್ಲಿಯೇ ಭಾರೀ ಗೆಲುವು ಕಂಡಿದ್ದಾರೆ.

ಹೌದು, ಹೆಚ್ಚಿನವರು ಸಿನಿಮಾ ನೋಡಿದ್ದೇ ಸಮಂತಾ ಅವರ ಈ ಊ ಅಂಟವಾ ಮಾವ ಐಟಂ ಡ್ಯಾನ್ಸ್ ನೋಡಲು. ಅಲ್ಲು ಅರ್ಜುನ್ ಹಾಗೂ ಸಮಂತಾ ಅವರು ಹೆಜ್ಜೆ ಹಾಕುತ್ತಿದ್ದಂತೆ ವೀಕ್ಷಕರು ಶಿಳ್ಳೆ ಹೊಡೆದು ಕುಣಿದಿದ್ದರು. ವನ್ಸ್ ಮೋರ್ ಅಂತ ಕಿರುಚಿದ್ದರು. ಅಷ್ಟು ಹಿಟ್ ಆಗಿರೋ ಈ ಐಟಂ ಸಾಂಗ್ ಗೆ ಹೆಜ್ಜೆ ಹಾಕಲು ಸಮಂತಾ ಅವರು ಒಂದೂವರೆ ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಸಮಂತಾ ಅವರು ಈ ಡ್ಯಾನ್ಸ್ ಗಾಗಿ ತೆಗೆದುಕೊಂಡಿದ್ದು ಬರೋಬ್ಬರಿ ಐದು ಕೋಟಿ ರೂಪಾಯಿ ಎಂದು ಇದೀಗ ಸುದ್ದಿ ಹರಡುತ್ತಿದೆ.

ಆದರೆ ಈ ಬಗ್ಗೆ ಅಧಿಕೃತವಾಗಿ ಯಾರು ಕೂಡ ಹೇಳಿಲ್ಲವಾದರೂ ಇವರ ಈ ಸಂಭಾವನೆ ಸುದ್ದಿ ಹರಡುತ್ತಿದೆ. ಇನ್ನು ಈ ಐಟಂ ಸಾಂಗ್’ಗೆ ಹೆಜ್ಜೆ ಹಾಕಲು ಸಮಂತಾ ಅವರು ಮೊದಲು ಒಪ್ಪಿರಲಿಲ್ಲವಂತೆ. ಕೊನೆಗೆ ಅಲ್ಲು ಅರ್ಜುನ್ ಅವರೇ ನೇರವಾಗಿ ಸಮಂತಾ ಹತ್ತಿರ ಮಾತನಾಡಿ ಒಪ್ಪುವಂತೆ ಮಾಡಿದ್ದರು. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.