ಸಮಂತಾ ಅಕ್ಕಿನೇನಿ ದಕ್ಷಿಣ ಚಲನಚಿತ್ರೋದ್ಯಮದಲ್ಲಿ ಅತ್ಯಂತ ಸೊಗಸಾದ ನಟಿಯರಲ್ಲಿ ಒಬ್ಬರು. ಇದುವರೆಗೂ ಅವರು ಹಲವಾರು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ವಿಭಿನ್ನ ಪಾತ್ರಗಳಿಂದ ಪ್ರೇಕ್ಷಕರ ಹೃದಯಗಳನ್ನು ಗೆದ್ದಿದ್ದಾರೆ. ಸಮಂತ ಅವರು ರಾಣಾ ದಗ್ಗುಬಾಟಿ ಮತ್ತು ಮಿಹೀಕಾ ಬಜಾಜ್ ಮದುವೆ ಸಮಾರಂಭದಲ್ಲಿ ತುಂಬಾ ಮಿಂ’ಚುತ್ತಾ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅವರು ನೀಲಿ ಬಣ್ಣದ, ಹೂವಿನ ಪ್ರಿಂಟೆಡ್ ಇರುವ ರೇಷ್ಮೆ ಸೀರೆಯನ್ನು ಧರಿಸಿದ್ದರು. ಸೀರೆ ನೋಡಲು ಸರಳವಾಗಿ ಕಾಣುತ್ತಿತ್ತು. ಆದರೆ ಸಾಕಷ್ಟು ಸೊಗಸಾಗಿತ್ತು. ಸಮಂತಾ ಧರಿಸಿದ್ದ ಈ ರಾ ಮ್ಯಾಂಗೊ ಸಿಲ್ಕ್ ಸೀರೆ ಸಾಕಷ್ಟು ಕಡಿಮೆ ತೂಕ ಹೊಂದಿದೆ. ಅಂದಹಾಗೆ ಮದುವೆ ಸಮಾರಂಭಗಳಿಗೆ ಹೇಳಿಮಾಡಿಸಿದಂತಿರುವ ಈ ಸೀರೆಯ ಬೆಲೆ ಕೇಳಿದರೆ ಬಹುಶಃ ನೀವು ತಲೆ ತಿರುಗಿಬೀಳುವುದು ಗ್ಯಾರಂಟಿ.

ಹೌದು, ಇದರ ಬೆಲೆ ಸೀರೆಯಷ್ಟು ಹಗುರವಾಗಿರುವುದಿಲ್ಲ. ಈ ಬೆಲೆಯಲ್ಲಿ ನೀವು ಹೈಟೆಕ್ ಗೇಮಿಂಗ್ ಲ್ಯಾಪ್ ಟಾಪ್ ಅನ್ನೇ ಖರೀದಿಸಬಹುದು. ಹೌದು, ನಿಮಗೆ ಕೇಳಿ ಆ’ಶ್ಚರ್ಯವಾಗುತ್ತಿರಬೇಕಲ್ಲಾ?. ರಾಣಾ-ಮಿಹೀಕಾ ಅವರ ಮದುವೆಗೆ ಸಮಂತಾ ಧರಿಸಿದ್ದ ಈ ಹೂವಿನ ಸೀರೆ ಬೆಲೆ ಸುಮಾರು 75,000 ರೂ. ಜೊತೆಗೆ ಸಮಂತಾ ಸೀರೆಗೆ ಮ್ಯಾಚ್ ಆಗುವ ಹಾಗೆ ಚೋಕರ್ ಸೆಟ್ ಮತ್ತು ಕಿವಿಯೋಲೆಗಳನ್ನು ಧರಿಸಿದ್ದರು.

ಜೂನ್ ತಿಂಗಳಲ್ಲಿ ಸಮಂತಾ ತೆಲುಗು ಚಿತ್ರರಂಗದ ಅತ್ಯಂತ ಪ್ರೀತಿಯ ಫಿಮೇಲ್ ಸ್ಟಾರ್ ಆಗಿ ಆಯ್ಕೆಯಾದರು. ಲೇಡಿ ಸೂಪರ್ಸ್ಟಾರ್ ನಯನತಾರಾ, ಅನುಷ್ಕಾ ಶೆಟ್ಟಿ, ಕಾಜಲ್ ಅಗರ್’ವಾಲ್, ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ, ರಾಕುಲ್ ಪ್ರೀತ್ ಸಿಂಗ್, ಪೂಜಾ ಹೆಗ್ಡೆ, ಕೀರ್ತಿ ಸುರೇಶ್ ಮತ್ತು ತ್ರಿಶಾ ಕೃಷ್ಣನ್ ಅವರನ್ನು ಸೋಲಿಸಿ ಅವರು ವಿಜೇತರಾಗಿದ್ದರು. ಸಮಂತಾ ದಿ ಫ್ಯಾಮಿಲಿ ಮ್ಯಾನ್ 2 ಎಂಬ ವೆಬ್ ಸರಣಿಯಲ್ಲಿ ಸಹ ನಕ್ಸ’ಲೈಟ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಕೆಲವು ದಿನಗಳಿಂದ ಸಮಂತ ಅವರ ವೈವಾಹಿಕ ಜೀವನದಲ್ಲಿ ಬಿರುಕು ಬಿಟ್ಟಿದೆ ಅಂತ ವದಂತಿಗಳು ಕೇಳಿಬರುತ್ತಿವೆ. ಆದರೆ ಯಾವುದು ಸತ್ಯ ಯಾವುದು ಸುಳ್ಳು ಅಂತ ಗೊತ್ತಿಲ್ಲ. ಸಮಂತಾ ಅವರ ಬಗ್ಗೆ ನೀವೇನಂತಿರಾ ಸ್ನೇಹಿತರೆ..