Advertisements

ಜೀವನ ಕಟ್ಟಿಕೊಳ್ಳುವುದಕ್ಕೆ ಅಕ್ಕನ ಮನೆಗೆ ಬಂದ ತಂಗಿ! ಆದರೆ ಅದೇ ಮನೆಯಲ್ಲಿ ಏನಾಗಿ ಹೋದಳು ನೋಡಿ..

Kannada News

ಮೊನ್ನೆಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಸಂಗೀತಾ ಎನ್ನುವ ಮಹಿಳಾ ಟೆಕ್ಕಿ ಒಬ್ಬರು ತಾವು ಪ್ರೀತಿಸಿ ಮದುವೆಯಾದ ಗಂಡ ನೋವು ನೀಡುತ್ತಿದ್ದಾನೆಂದು ಜೀವ ಕಳೆದುಕೊಂಡ ಘಟನೆ ನಡೆದಿತ್ತು‌‌.. ಇನ್ನೂ ಸಹ ಆ ಘಟನೆ ಮಾಸುವ ಮುನ್ನವೇ ಇದೀಗ ಬೆಂಗಳೂರಿನಲ್ಲಿ ಮತ್ತೊಂದು ಘಟನೆ ನಡೆದಿದೆ.. ಆದರೆ ಇಲ್ಲಿ ಈಕೆಗೆ ಮದುವೆಯೂ ಆಗಿಲ್ಲ ಆಕೆ ಯಾರನ್ನು ಪ್ರೀತಿಯೂ ಮಾಡಿಲ್ಲ.. ಆದರೂ ಸಹ ಜೀವ ಕಳೆದುಕೊಳ್ಳುವಂತಾಯಿತು.. ನಿಜಕ್ಕೂ ಇದು ಆಕೆಯ ದುರ್ದೈವವೋ ಏನೋ ತಿಳಿಯದು.. ಹೌದು ಈಕೆಯ ಹೆಸರು ಸಾಕಮ್ಮ.. ಸಾಕ್ಷಿ ಎಂದು ಕರೆಯುತ್ತಿದ್ದರು.. ಈಕೆ ಮೂಲತಃ ಹಾಸನ ಜೀಲೆಯ ಚನ್ನರಾಯಪಟ್ಟಣದವಳು.. ತನ್ನ ಓದನ್ನು ಅಲ್ಲಿಯೇ ಮುಗಿಸಿ ಅಪ್ಪ ಅಮ್ಮನಿಗೆ ನೆರವಾಗಬೇಕು ಎಂದು ಬೆಂಗಳೂರಿನಲ್ಲಿ‌ ಕೆಲಸಕ್ಕೆ ಸೇರುವ ನಿರ್ಧಾರ ಮಾಡುತ್ತಾಳೆ..

Advertisements
Advertisements

ಬಹುಶಃ ಆ ದಿನ ಬೆಂಗಳೂರಿಗೆ ಬರುವ ನಿರ್ಧಾರ ಮಾಡದಿದ್ದರೆ ಇಂದು ಆಕೆ ಉಳಿಯುತ್ತಿದ್ದಳೋ ಏನೋ.. ಆದರೆ ಆಕೆ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬರುತ್ತಾಳೆ.. ಹೌದು ಬೆಂಗಳೂರಿನ ದೊಡ್ಡ ಬಿದರಕಲ್ಲು ಗ್ರಾಮದಲ್ಲಿ ಆಕೆಯ ಅಕ್ಕನ ಮನೆ ಇತ್ತು.. ಸಾಕ್ಷಿ ತನ್ನ ಅಕ್ಕನ ಮನೆಯಲ್ಲಿ ಇದ್ದುಕೊಂಡು ಯಶವಂತಪುರದ ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ ಮಾರ್ಕೆಟ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು.. ಜೀವನ ಚೆನ್ನಾಗಿ ಸಾಗುತಿತ್ತು.. ಅಪ್ಪ ಅಮ್ಮನಿಗೆ ನೆರವಾಗುವ ಸಂತೋಷವೂ ಆಕೆಗಿತ್ತು.. ಆದರೆ ಮುಂದೆ ನಡೆದದ್ದು ಮಾತ್ರ ಆಕೆಯ ಜೀವನವನ್ನೇ ಮುಕ್ತಾಯ ಮಾಡಿಬಿಟ್ಟಿತು.. ಹೌದು ಸಾಕ್ಷಿ ಕೆಲಸ ಮಾಡುತ್ತಿದ್ದ ಜಾಗದಲ್ಲಿ ಅರುಣ್ ಎಂಬಾತನ ಪರಿಚಯವಾಗಿತ್ತು..

ಆಕೆ ಎಲ್ಲರಂತೆ ಸಾಮಾನ್ಯವಾಗಿ ಮಾತನಾಡಿದಳು.. ಆದರೆ ಅರುಣ್ ಮಾತ್ರ ಸಾಕ್ಷಿಯನ್ನು ಪ್ರೀತಿಸಲು ಆರಂಭಿಸಿದ.. ಅದೂ ಸಹ ಅರ್ಥವಿಲ್ಲದ ಅತಿ ಪ್ರೀತಿಯಾಗಿತ್ತು.‌ ಆಕೆಯನ್ನೇ ಮದುವೆಯಾಗಬೇಕು ಎಂಬ ಹಟಕ್ಕೆ ಬಿದ್ದ.. ಇತ್ತ ಬರಿ ಮಾತನಾಡಿದ್ದಕ್ಕೆ ಯಾಕೆ ಈ ರೀತಿ ಮಾಡ್ತೀರಾ ಎಂದು ಸಾಕ್ಷಿ ಆತನನ್ನು ಅವಾಯ್ಡ್ ಮಾಡಿದ್ದಾಳೆ.. ಆತನ ತೊಂದರೆ ಅತಿಯಾದಾಗ ಅದನ್ನು ತನ್ನ ಅಕ್ಕನ ಮನೆಗೂ ತಿಳಿಸಿದ್ದಾಳೆ..ಆಗ ಈಕೆಗೆ ಬೇರೆ ಮದುವೆ ಮಾಡಿಬಿಟ್ಟರೆ ಎಲ್ಲವೂ ಸರಿ ಹೋಗುತ್ತದೆ ಎಂದು ಮನೆಯವರು ನಿರ್ಧಾರ ಮಾಡಿದರು. ಅದರಣ್ತೆ ಸಾಕ್ಷಿಗೆ ಹುಡುಗನನ್ನೂ ಸಹ ಹುಡುಕುತ್ತಿದ್ದರು.. ಆದರೆ ಈ ವಿಚಾರ ಅರುಣ್ ಗೆ ಗೊತ್ತಾಗಿದೆ.. ಆಕೆಯ ಮದುವೆಯನ್ನು ತಪ್ಪಿಸುವ ಸಲುವಾಗಿ ಕೆಳ ಮಟ್ಟದ ದಾರಿಯನ್ನು ಹಿಡಿದಿದ್ದಾನೆ..

ಹೌದು ಅರುಣ್ ತನ್ನ ಸ್ನೇಹಿತ ಗೋಪಾಲ ಎಂಬುವವನ ಜೊತೆ ಸೇರಿಕೊಂಡು ಪ್ಲ್ಯಾನ್ ಒಂದನ್ನು ಮಾಡಿದ.. ಹೌದು ಸಾಕ್ಷಿಯ ಅಕ್ಕನ ಗಂಡ ಪ್ರಜ್ವಲ್ ಗೆ ಅರುಣ್ ತನ್ನ ಸ್ನೇಹಿತ ಗೋಪಾಲನ ಕೈಯಲ್ಲಿ ನಾವು ಪೋಲೀಸರು ಎಂದು ಫೋನ್ ಮಾಡಿಸಿದ.. ನಕಲಿ‌ ಪೋಲೀಸ್ ಗೋಪಾಲ್ ಫೋನ್ ಮಾಡಿ ಬಸವೇಶ್ವರ ಪೊಲೀಸ್ ಠಾಣೆಯಿಂದ ಫೋನ್ ಮಾಡ್ತಿದ್ದೀನಿ.. ಅರುಣ್ ಎಂಬ ಹುಡುಗ ನಿಮ್ಮ ಹೆಸರು ಹೇಳಿ ಜೀವ ಕಳೆದುಕೊಳ್ಳಲು ಮುಂದಾಗಿದ್ದ.. ಈಗ ಹೇಗೋ ಉಳಿದುಕೊಂಡಿದ್ದಾನೆ.. ಅವನನ್ನು ನಿಮ್ಮ ಹುಡುಗಿಗೆ ಕೊಟ್ಟು ಮದುವೆ ಮಾಡಿಕೊಳ್ಳಿ.. ಇಲ್ಲವಾದರೆ ಎಫ್ ಐ ಆರ್ ದಾಖಲು ಮಾಡಬೇಕಾಗುತ್ತದೆ.. ಎಂದು ಹೆದರಿಸಿದ್ದ..

ಇದನ್ನೆಲ್ಲಾ ನೋಡಿದ ಸಾಕ್ಷಿ ತನ್ನಿಂದಲೇ ಇಷ್ಟೆಲ್ಲಾ ಆಗಿದ್ದು ತನ್ನಿಂದಲೇ ಮನೆಯವರಿಗೆ ತೊಂದರೆ ಎಂದು ಪೊಲೀಸರು ಫೋನ್ ಮಾಡಿದ್ದಕ್ಕೆ ತುಂಬಾ ಹೆದರಿಕೊಂಡಿದ್ದ ಸಾಕ್ಷಿ ದುಡುಕಿ ನಿರ್ಧಾರವೊಂದನ್ನು ಮಾಡಿಯೇ ಬಿಟ್ಟಳು.. ಹೌದು ಅಕ್ಕನ ಮನೆಯಲ್ಲಿಯೇ ಸಾಕ್ಷಿ ಜೀವ ಕಳೆದುಕೊಂಡು ಬಿಟ್ಟಳು.. ಇತ್ತ ಅರುಣ್ ಹಾಗೂ ನಕಲಿ‌ ಪೊಲೀಸ್ ಗೋಪಾಲನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.. ಆದರೆ ಸಾಕ್ಷಿ ಕುಟುಂಬದವರ ಗೋಳಾಟ ನೋಡಲಾಗದಂತಿತ್ತು..

ಹೌದು ತನ್ನ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದು ಅಕ್ಕನ ಮನೆಯಲ್ಲಿ ಉಳಿದುಕೊಂಡಳೋ ಅದೇ ಮನೆಯಲ್ಲಿ ತನ್ನ ಬದುಕನ್ನೇ ಅಂತ್ಯ ಮಾಡಿಕೊಂಡು ಬಿಟ್ಟಳು.. ಆಕೆಯಂತೂ ಮರಳಿ ಬರುವುದಿಲ್ಲ.. ಆಕೆಯ ಕುಟುಂಬಕ್ಕೆ ಇದೆಲ್ಲ ತಡೆಯುವ ಧೈರ್ಯ ನೀಡಲಿ.. ದಯವಿಟ್ಟು ಹೆಣ್ಣು ಮಕ್ಕಳು ಬಹಳ ಎಚ್ಚರವಾಗಿರಿ.. ಯಾರೇ ಆಗಲಿ ಹೊಸದಾಗಿ ಪರಿಚಯವಾದವರು ಅಥವಾ ಸಾಮಾಜಿಕ ಜಾಲತಾಣದಲ್ಲಿ‌ ಪರಿಚಯವಾದವರ ಜೊತೆ ಅತಿಯಾದ ಸಲುಗೆ ಬೇಡ.. ಮುಂದೊಂದು ದಿನ ಅದೇ ನಿಮಗೆ ಅಪಾಯ ತರಬಹುದು.. ಯಾರ ಬಳಿಯೂ ನಿಮ್ಮಗಳ ವಿಚಾರ ಹಂಚಿಕೊಳ್ಳುವಾಗ ಎಚ್ಚರಿಕೆಯಿಂದಿರಿ..