ಮನುಷ್ಯ ಯಾವಾಗ ಯಾವ ಸ್ಥಿತಿಗೆ ಬರುತ್ತಾನೆಂದು ಯಾರಿಗೆ ತಾನೆ ಗೊತ್ತು ಹೇಳಿ ಆದರೆ ಸ್ವಾಭಿಮಾನಿಗಳು ಎಂತಹ ಕಷ್ಟ ಬಂದರೂ ಅದನ್ನು ಎದುರಿಸುತ್ತಾರೆ. ಕೊನೆಗೆ ಜಯಿಸುತ್ತಾರೆ. ಹೋಟೆಲ್ ನಲ್ಲಿ ಸರ್ವರ್ ಆಗಿ ಕೆಲಸ ಮಾಡುತ್ತಿದ್ದ ಒಬ್ಬ ಖ್ಯಾತ ನಟ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು ಹೇಗೆ ಗೊತ್ತಾ, ಸಂಜಯ್ ಮಿಶ್ರಾ ಇವರ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಖ್ಯಾತ ಬಾಲಿವುಡ್ ನಟ ಈಗ ಸಹನಟನಾಗಿ ನಟಿಸುತ್ತಿದ್ದಾರೆ. ವರ್ಷಕ್ಕೆ ಏನಿಲ್ಲ ಅಂದರೂ ಇವರ 20 ಸಿನಿಮಾಗಳು ರಿಲೀಸ್ ಆಗುತ್ತವೆ.ಆದರೆ ಅವರ ಜೀವನದಲ್ಲಿ ಆಗಿದ್ದೇನು ಗೊತ್ತಾ, ಅದು 2008 ರ ವರ್ಷ ಆಗಾಗಲೇ ಸಂಜಯ್ ಮಿಶ್ರಾ ನಲವತ್ತೈದು ಚಿತ್ರಗಳಲ್ಲಿ ನಟಿಸಿದ್ದರು.
[widget id=”custom_html-5″]

ಸಡನ್ ಆಗಿ ಸಂಜಯ್ ಮಿಶ್ರಾ ತೀ’ವ್ರ ಅನಾರೋಗ್ಯಕ್ಕೆ ತುತ್ತಾದರು. ಆಗ ಮಗನ ಆರೈಕೆ ಮಾಡಿದ ಸಂಜಯ್ ಮಿಶ್ರಾ ಅವರ ತಂದೆ ಇರುವ ಆಸ್ತಿಪಾಸ್ತಿ ಮಾರಿ ಎಲ್ಲ ಹಣವನ್ನು ಖರ್ಚು ಮಾಡಿ ಮಗನನ್ನು ಉಳಿಸಿಕೊಂಡರು. ಆದರೆ ಸಂಜಯ್ ಮಿಶ್ರಾ ಅನಾರೋಗ್ಯದಿಂದ ಚೇತರಿಸಿಕೊಂಡ ಹದಿನೈದು ದಿನಕ್ಕೆ ತಂದೆ ತೀರಿಕೊಂಡರು. ಆಗ ಕೈಯಲ್ಲಿ ಒಂದು ಪೈಸೆ ಇಲ್ಲದ ಸ್ಥಿತಿಗೆ ಸಂಜಯ್ ಮಿಶ್ರಾ ತಲುಪಿದರು. ಇತರರ ಬಳಿ ಹೋಗಿ ಸಹಾಯ ಕೇಳುವುದಕ್ಕೆ ಅವರ ಸ್ವಾಭಿಮಾನ ಒಪ್ಪಲಿಲ್ಲ. ನೇರವಾಗಿ ರಿಷಿಕೇಶ್ ಗೆ ಹೋದ ಸಂಜಯ್ ಮಿಶ್ರಾ ಅಲ್ಲಿ ಒಂದು ಡಾಬಾ ಹೋಟೆಲ್ ನಲ್ಲಿ ಸರ್ವರ್ ಆಗಿ ಕೆಲಸಕ್ಕೆ ಸೇರಿಕೊಂಡರು. ದಿನಕ್ಕೆ 150 ರೂಪಾಯಿ ಕೂ’ಲಿ ಇನ್ನೂರು ತಟ್ಟೆ ಆಗೂ ಮುನ್ನೂರು ಗ್ಲಾಸ್ ತೊಳೆಯುವ ಕೆಲಸ ಬರುತ್ತಿದ್ದ ನೂರೈವತ್ತು ರೂಪಾಯಿಯಲ್ಲೆ ಆರಾಮಾಗಿ ಬದುಕುತ್ತಿದ್ದರು ಸಂಜಯ್ ಮಿಶ್ರಾ..
[widget id=”custom_html-5″]

ಆದರೆ ಆ ಹೊಟೇಲ್ ನಲ್ಲಿ ಊಟಕ್ಕೆ ಬರುತ್ತಿದ್ದವರು ಸಂಜಯ್ ಮಿಶ್ರಾ ರನ್ನು ಗುರುತಿಸಿ ಫೋಟೋಗಾಗಿ ಮುಗಿಬೀಳುತ್ತಿದ್ದರು. ಅದು ಹೇಗೋ ಸಂಜಯ್ ಮಿಶ್ರಾ ರಿಷಿಕೇಶ್ ನ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿರುವ ವಿಷಯ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿಗೆ ಗೊತ್ತಾಯಿತು. ತನ್ನ ಆಲ್ ದಿ ಬೆಸ್ಟ್ ಚಿತ್ರದಲ್ಲಿ ನಟಿಸುವಂತೆ ಸಂಜಯ್ ಮಿಶ್ರಾ ಗೆ ಒತ್ತಡ ಮಾಡಿದರು. ಒತ್ತಾಯಕ್ಕೆ ಮಣಿದು ಆ ಚಿತ್ರದಲ್ಲಿ ನಟಿಸಿದರು ಸಂಜಯ್ ಮಿಶ್ರಾರವರು ಆ ಚಿತ್ರ ಸೂಪರ್ ಹಿಟ್ ಆಯ್ತು. ಆನಂತರ ಸಂಜೆ ಮಿಶ್ರಾ ಹಿಂತಿರುಗಿ ನೋಡಲಿಲ್ಲ ವರ್ಷಕ್ಕೆ 20 ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸ್ವಾಭಿಮಾನ ಅಂದರೆ ಇದೇ ಅಲ್ಲವೇ..
[widget id=”custom_html-5″]