Advertisements

ಅಯ್ಯೋ ಇದೆಂತಾ ಪ್ರೀತಿ ಕಣ್ರೀ, ಸತ್ತ ಗಂಡನಿಂದ ಗರ್ಭವತಿ ಆಗಬೇಕು ಅಂದುಕೊಂಡ ಈ ಹಳ್ಳಿ ಮಹಿಳೆ ಏನು ಮಾಡಿದ್ದಾಳೆ ಗೊತ್ತಾ? ಬೆಚ್ಚಿಬಿದ್ದ ಜನತೆ!!

Kannada News

ನಮ್ಮ ಜಗತ್ತಿನಲ್ಲಿ ಅನೇಕ ಪ್ರೇಮ ಉದಾಹರಣೆಗಳಿವೆ. ಪ್ರೀತಿಗಾಗಿ ಎಂತೆಂತಹ ತ್ಯಾಗ ಮಾಡಿರುವ ಕಥೆಗಳನ್ನು ಕೇಳಿದ್ದೇವೆ. ಇನ್ನು ಪಡಬಾರದ ಕಷ್ಟ ಪಟ್ಟು ಯಾವುದಕ್ಕೂ ಹೆದರದೆ ತಮ್ಮ ಪ್ರೀತಿ ಗೆದ್ದ ಕಥೆಗಳನ್ನು ಕೂಡ ಕೇಳಿದ್ದೇವೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲೂ ಈಗೀಗ ಹತ್ತು ಹಲವು ಪ್ರೇಮ ಪ್ರಕರಣಗಳು ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ಇವತ್ತು ನಾವು ಹೇಳುತ್ತಿರುವ ಕಥೆ ಕೇಳಿದರೆ ನೀವು ಶಾಕ್ ಆಗೋದು ಮಾತ್ರ ಪಕ್ಕಾ. ಹೌದು, ಅವರಿಬ್ಬರೂ ಅನೇಕ ವರ್ಷಗಳಿಂದ ಪ್ರೀತಿಸಿ ಮದುವೆ ಆಗಿದ್ದರು.

Advertisements
Advertisements

ಆ ಇಬ್ಬರೂ ತುಂಬಾನೇ ಅನ್ಯೂನ್ಯವಾಗಿ ಜೀವನ ನಡೆಸುತ್ತಿದ್ದರು. ಆದರೆ ಇವರಿಬ್ಬರ ಸಂಸಾರಕ್ಕೆ ಅದು ಯಾರ ಕೆಟ್ಟ ದೃಷ್ಟಿ ಬಿತ್ತೋ, ಇದ್ದಕ್ಕಿದ್ದಂತೆ ಆಕೆಯ ಪತಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅದೇನೇ ಚಿಕಿತ್ಸೆ ಕೊಟ್ಟರೂ ಫಲಕಾರಿಯಾಗದೆ ಕೊನೆಗೆ ಪ್ರಾಣ ಬಿಟ್ಟಿದ್ದರು. ಇತ್ತ ಪತ್ನಿ ತನ್ನ ಗಂಡನ ಸಾವನ್ನು ಅರಗಿಸಲಾಗದೆ ಸ್ಥಿತಿಗೆ ಹೋಗಿದ್ದಳು. ಅವರಿಗೆ ಇನ್ನೂ ಮಕ್ಕಳಾಗಿರಲಿಲ್ಲ. ಇನ್ನು ತನ್ನ ಗಂಡನಿಂದಲೇ ತನಗೆ ಮಗು ಆಗಬೇಕು ಎಂದು ಬಯಸಿದ ಆಕೆ ಆ ನೋವಲ್ಲೂ ಕೋರ್ಟ್ ಮೊರೆ ಹೋಗಿ ತನ್ನ ಗಂಡನಿಂದ ತಾನು ಗರ್ಭಿಣಿ ಆಗಬೇಕು ಎಂದು ಕೋರಿಕೊಳ್ಳುತ್ತಾಳೆ.

ಇದಕ್ಕೆ ಅನುಮತಿ ನೀಡಬೇಕು ಎಂದು ಒತ್ತಾಯಿಸುತ್ತಾಳೆ. ನ್ಯಾಯಾಧೀಶರು ಈಕೆಯ ಪ್ರೀತಿಗೆ ತಲೆಬಾಗಿ ಈ ಕೋರಿಕೆಯನ್ನು ಮಂಜೂರು ಮಾಡುತ್ತಾರೆ. ಅದರಂತೆ ಈ ಆಧುನಿಕ ತಂತ್ರಜ್ಞಾನದಿಂದ ಅಂದರೆ ಇನ್ ವಿಟ್ರೋ ಫಲೀಕರಣ ಅಂದರೆ ಐವಿಎಫ್ ಮೂಲಕ ಸತ್ತ ಗಂಡನ ವೀರ್ಯಾಣು ತೆಗೆದು ಆಕೆಯ ಗರ್ಭಕ್ಕೆ ಅಳವಡಿಸಲಾಗುತ್ತದೆ. ಅದರಂತೆ ಆಕೆ ತನ್ನ ಗಂಡನಿಂದಲೇ ಗರ್ಭವತಿಯಾಗುತ್ತಾಳೆ. ಈಕೆಗೆ ತನ್ನ ಗಂಡನ ಮೇಲಿರುವ ಪ್ರೀತಿಯ ಆಳ ನೋಡಿ ನ್ಯಾಯಾಲಯ ಕೂಡ ಮೆಚ್ಚಿ ಆಕೆಗೆ ಇಂತಿಷ್ಟು ಮೊತ್ತ ಕೂಡ ಮಂಜೂರು ಮಾಡಿದೆ.

ಅದೇ ರೀತಿ ಈಕೆಯ ಪ್ರೇಮ ಕಹಾನಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಇನ್ನು ತನ್ನ ಗಂಡನದ್ದೇ ಸಂತಾನವನ್ನು ತನ್ನ ಹೊಟ್ಟೆಯಲ್ಲಿ ಮುತುವರ್ಜಿಯಿಂದ ಸಾಕಿದ ಆಕೆ, ತನ್ನ ಮಗುವನು ಯಾವುದೇ ಕೊರತೆ ಇಲ್ಲದಂತೆ ಸಾಕುತ್ತಿದ್ದಾಳೆ. ತನ್ನ ಮಗುವಿಗೆ ತಂದೆ ಇಲ್ಲ ಎಂಬ ಕೊರಗು ಯಾವತ್ತೂ ಬಾರದಂತೆ ತುಂಬಾನೇ ಪ್ರೀತಿಯಿಂದ ಸಾಕಿ, ಒಳ್ಳೆಯ ವಿದ್ಯಾಭ್ಯಾಸ ಕೂಡ ಕೊಡಿಸುತ್ತಿದ್ದಾಳೆ. ಈಕೆ ನಡೆದು ಬಂದ ದಾರಿ, ಸಂಸಾರ ಅಂದರೆ ನಾಲ್ಕು ದಿನದ ಆಟ ಅನ್ನುವಂತೆ ಜೀವನ ನಡೆಸುವ ಅನೇಕ ದಂಪತಿಗಳಿಗೆ ನಿಜಕ್ಕೂ ಮಾದರಿ ಅಂದರೆ ತಪ್ಪಾಗಲ್ಲ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.