Advertisements

ಅಕ್ಕನ ಮಗಳನ್ನೇ ಮದುವೆಯಾದ.. ತಾನು ಓದಿಲ್ಲ ಅಂತ ಹೆಂಡತಿಯನ್ನು ಕೆ ಎ ಎಸ್ ಅಧಿಕಾರಿಯನ್ನಾಗಿ ಮಾಡಿಸಿದ.. ಆದರೆ ಇಂದು ನಡೆದಿದ್ದೇ ಬೇರೆ.. ಈತ ನಿಜಕ್ಕೂ ಯಾರು ಗೊತ್ತಾ?

Kannada News

ಲವೊಂದು ಹೆಣ್ಣು ಮಕ್ಕಳು ಒಳ್ಳೆಯ ಗಂಡ ಸಿಗೋದಿಲ್ಲ.. ಇತ್ತ ಕೆಲ ಪುರುಷರಿಗೆ ಒಳ್ಳೆಯ ಪತ್ನಿ ಸಿಗೋದಿಲ್ಲ.. ಅಕಸ್ಮಾತ್ ಇಬ್ಬರೂ ಸಹ ಒಳ್ಳೆಯವರಾಗಿದ್ದು ಪರಸ್ಪರ ಪ್ರೀತಿಸುತ್ತಿದ್ದರೆ ಆ ದೇವರು ಒಟ್ಟಾಗಿ ಇರೋಕೆ ಬಿಡೋದಿಲ್ಲ.. ಈ ಜೀವನವೇ ಇಷ್ಟು.. ಎನ್ನುವಂತಾಗಿ ಬಿಡುತ್ತದೆ.. ಹೌದು ಇಲ್ಲೊಂದು ಅಂತಹುದೇ ಮನಕಲಕುವ ಘಟನೆ ನಡೆದಿದ್ದು ಕಣ್ಣಂಚಲ್ಲಿ ನೀರು ತರಿಸುತ್ತಿದೆ.. ಹೌದು ಆತ ವಿದ್ಯೆ ಕಲಿಯದೇ ಚಿಕ್ಕ ವಯಸ್ಸಿನಲ್ಲಿಯೇ ಜೀವನ ಸಾಗಿಸಲು ಬದುಕಿನ ದಾರಿ ಹಿಡಿದು ಹೊರಟವ‌.. ಆಕೆ ಹುಟ್ಟು ಪ್ರತಿಭಾವಂತೆ.. ಓದಿನಲ್ಲಿ ಸದಾ ಮುಂದು ಎನ್ನುವಂತಿದ್ದವಳು.. ಇಂತಹ ಇಬ್ಬರು ಮದುವೆಯಾದರು.. ಆದರೆ ಹೆಂಡತಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಗಂಡ ಆಕೆಗೆ ಅಷ್ಟೇ ಗೌರವವನ್ನೂ ಸಹ ನೀಡುತ್ತಿದ್ದ..

ಆಕೆಯ ಆಸೆಗಳಿಗೆ ಬೆಲೆ ಕೊಟ್ಟು ತಾನಂತೂ ಓದಲಿಲ್ಲ.. ತನ್ನ ಹೆಂಡತಿಯಾದರೂ ಓದಲಿ ಎಂದು ಆಕೆಯನ್ನು ಕೆ ಎ ಎಸ್ ಕೂಡ ಓದಿಸಿದ.. ಆಕೆಯೂ ಅಷ್ಟೇ ಗಂಡನನ್ನು ಅತಿಯಾಗಿ ಪ್ರೀತಿಸುತ್ತಿದ್ದಳು.. ಗಂಡನಿಗೆ ಗೌರವ ತರಬೇಕೆಂದು ಕಷ್ಟ ಪಟ್ಟು ಓದಿ ಕೆ ಎ ಎಸ್ ಪಾಸ್ ಮಾಡಿದಳು.. ಕಳೆದ ವರ್ಷ ಬೆಂಗಳೂರಿನಲ್ಲಿ ತಹಸೀಲ್ದಾರ್ ಆಗಿ ಹುದ್ದೆಗೇರಿದರು‌‌.. ಅದೊಂದು ಸುಂದರ ಸಂಸಾರವಾಗಿತ್ತು.. ಆದರೆ ಆ ಕುಟುಂಬದ ಮೇಲೆ ಅದ್ಯಾರ ಕಣ್ಣು ಬಿತ್ತೋ ಇಂದು ಇಬ್ಬರೂ ದೂರಾಗಿ ಹೋದರು.. ಹೌದು ಆತನ ಹೆಸರು ಸೀನಾ.. ಕಡ್ಡಿ ಸೀನಾ ಎಂದೇ ಸ್ನೇಹಿತರ ಬಳಗದಲ್ಲಿ ಹೆಸರುವಾಸಿಯಾಗಿದ್ದವ.. ಶಿವಮೊಗ್ಗದ ಸವಾರ್ ಲೈನ್ ರಸ್ತೆಯ ನಿವಾಸಿಯಾಗಿದ್ದರು..

ಸೀನ ತನ್ನ ಅಕ್ಕನ ಮಗಳು ಅಶ್ವಿನಿಯನ್ನೇ ವಿವಾಹವಾದನು.. ಅಶ್ವಿನಿ ಬಹಳ‌ ಚೆನ್ನಾಗಿ ಓದುತ್ತಿದ್ದುದರಿಂದ ನಾನಂತೂ ಓದಲಿಲ್ಲ.. ನೀನಾದರು ಓದು ಎಂದು ಓದಿಸಿದ್ದನು.. ಅಶ್ವಿನಿ ಕೂಡ ಗಂಡನ ಆಸೆಯಂತೆ ಕೆ ಎ ಎಸ್ ಪರೀಕ್ಷೆ ಬರೆದು ಕಳೆದ ವರ್ಷವಷ್ಟೇ ಬೆಂಗಳೂರಿನಲ್ಲಿ ತಹಸೀಲ್ದಾರ್ ಆಗಿ ನೇಮಕಗೊಂಡಿದ್ದರು.. ಇನ್ನು ಆ ಸಂಸಾರಕ್ಕೆ ಯಾವುದೇ ಕೊರತೆ ಇಲ್ಲ ಎನ್ನಿವಂತಿತ್ತು.. ಪರಸ್ಪರ ಗೌರವ ಪರಸ್ಪರ ಪ್ರೀತಿಯಿಂದ ಆ ಜೋಡಿ ಇತ್ತು.. ಆದರೆ ಅಷ್ಟೆಲ್ಲಾ ಪ್ರೀತಿಸುತ್ತಿದ್ದ ಜೋಡಿ ಇಂದು ದೂರಾಗಿ ಹೋಯ್ತು.. ಹೌದು ಕೆಲ ದಿನಗಳ ಹಿಂದಷ್ಟೇ ಸೀನಾ ಕೊರೊನಾ ಸೋಂಕಿಗೆ ತುತ್ತಾಗಿದ್ದನು‌‌.. ಗಂಡನನ್ನು ಉಳಿಸಿಕೊಳ್ಳಬೇಕೆಂದು ಸಾಕಷ್ಟು ಪ್ರಯತ್ನ ಪಟ್ಟರೂ ಸಹ ಅಶ್ವಿನಿ ಅವರ ಪ್ರಯತ್ನ ಫಲ ನೀಡಲಿಲ್ಲ..

ಚಿಕಿತ್ಸೆ ಫಲಕಾರಿಯಾಗದೆ ಸೀನಾ ಕೊನೆಯುಸಿರೆಳೆದಿದ್ದಾನೆ.. ತನ್ನ ಪ್ರೀತಿಯ ಗಂಡನನ್ನು ಕಳೆದುಕೊಂಡ ಅಶ್ವಿನಿಯ ನೋವು ನಿಜಕ್ಕೂ ಯಾರಿಗೂ ಬೇಡವೆನ್ನುವಂತಿತ್ತು.. ಸಂಸಾರದಲ್ಲಿ ಸಾಕಷ್ಟು ಕಷ್ಟ ಕೊಡುವ ಗಂಡ ಜೀವ ಕಳೆದುಕೊಂಡರೆ ನೋವು ಪಡುತ್ತಾರೆ.. ಆದರೆ ಇದ್ದಷ್ಟು ದಿನ ಅಷ್ಟೊಂದು ಪ್ರೀತಿಸಿ.. ಮುಂದಿನ ಜೀವನದ ಬಗ್ಗೆ ಅಶ್ವಿನಿ ಜೊತೆ ಸಾಕಷ್ಟು ಕನಸು ಕಂಡಿದ್ದ ಸೀನ ಕೊನೆಯುಸಿರೆಳೆದಿದ್ದು ಅಶ್ವಿನಿ ಅವರ ಆಕ್ರಂದನ ಮುಗಿಲು ಮುಟ್ಟಿತ್ತು.. ಕೊರೊನಾ ಎರಡನೇ ಅಲೆ ಬಂದ ನಂತರ ಈ ರೀತಿ ಸಾಕಷ್ಟು ನೂತನ ದಂಪತಿಗಳು ತಮ್ಮ ತಮ್ಮ ಪ್ರೀತಿಯ ಜೀವಗಳನ್ನು ಕಳೆದುಕೊಂಡಿದ್ದು ಅವರ ಮುಂದಿನ ಜೀವನ ನಿಜಕ್ಕೂ ಊಹಿಸಲಸಾಧ್ಯವಾಗಿದೆ.‌.

ಮೊನ್ನೆಯಷ್ಟೇ ಮಂಡ್ಯದಲ್ಲಿ ಕೊರೊನಾದಿಂದ ಗಂಡ ಕೊನೆಯುಸಿರೆಳೆದ ಎಂಬ ಕಾರಣಕ್ಕೆ ಕಳೆದ ವರ್ಷವಷ್ಟೇ ಮದುವೆಯಾಗಿದ್ದ ಹೆಂಡತಿಯೂ ಸಹ ಗಂಡನ ಅಂತ್ಯ ಸಂಸ್ಕಾರ ಮುಗಿಸಿ ಬಂದು ತನ್ನ ಜೀವವನ್ನೇ ಕಳೆದುಕೊಂಡುಬಿಟ್ಟಿದ್ದರು.. ಈ ರೀತಿ ರಾಜ್ಯದಲ್ಲಿ ಅನೇಕ ಘಟನೆಗಳು ನಡೆದಿದ್ದು ಆ ಕುಟುಂಬಗಳ ನೋವು ನೋಡಲಾಗದು.. ದಯವಿಟ್ಟು ನಿಮ್ಮವರಿಗಾಗಿ ಸುರಕ್ಷಿತವಾಗಿರಿ.. ನಾವು ಹೋದಮೇಲೆ ನಮಗೇನು ತಿಳಿಯದು.. ಆದರೆ ನಮ್ಮನ್ನು ನಂಬಿಕೊಂಡ ಜೀವಗಳ ನೋವು ಸಂಕಟ ಮಾತ್ರ ಅವರು ಇರುವ ತನಕವೂ ಸದಾ ಕಾಡುತಲಿರುತ್ತದೆ ಎಂಬುದು ನೆನಪಿನಲ್ಲಿರಲಿ..