Advertisements

ಪುನೀತ್ ಬಗ್ಗೆ ಶಕ್ತಿಧಾಮದ ಮಕ್ಕಳು ಏನ್ ಹೇಳಿದ್ದಾರೆ ನೋಡಿ!

Cinema

ನಮಸ್ಕಾರ ವೀಕ್ಷಕರೆ ಪುನೀತ್ ರಾಜಕುಮಾರ್ ಅವರ ಬಗ್ಗೆ ಎಷ್ಟು ಹೇಳಿದರು ಕಡಿಮೆ ಎಷ್ಟು ಮಾತ ನಾಡಿದರು ಕಡಿಮೆ ಅವರ ಬಗ್ಗೆ ತಿಳಿದುಕೊಂಡಷ್ಟು ಅವರ ಬಗ್ಗೆ ಗೊತ್ತಿಲ್ಲದ ವಿಷಯಗಳು ಹೊರಬೀಳು ತ್ತಿದ್ದಂತೆಯೇ ಇನ್ನಷ್ಟು ಪುನೀತ್ ಅವರ ಬಗ್ಗೆ ತಿಳಿದು ಕೊಳ್ಳಬೇಕು ಎಂದೆನಿಸುತ್ತದೆ. ಅಸಲಿಗೆ ಅವರು ಏನೆಲ್ಲ ಮಾಡಿ ಹೋಗಿದ್ದಾರೆ. ಒಬ್ಬ ಮನುಷ್ಯ ಇಷ್ಟು ಮಾಡಲಿಕ್ಕೆ ಸಾಧ್ಯಾನಾ ಎಂದು ಪ್ರತಿಯೊಬ್ಬರಲ್ಲಿ ಪ್ರಶ್ನೆ ಮೂಡುತ್ತದೆ. ಆದರೆ ಇದನ್ನೆಲ್ಲವನ್ನು ಸತ್ಯ ಮಾಡಿದವರು ಪ್ರೀತಿಯ ಪುನೀತ್ ರಾಜಕುಮಾರ್ ಅವರು. ಹೌದು ಪುನೀತ್ ಅವರು ಸಾಕಷ್ಟು ಜನರಿಗೆ ಬೇಕಾಗಿದ್ದ ಅಂತಹ ವ್ಯಕ್ತಿ ಮತ್ತು ಅವರ ವ್ಯಕ್ತಿತ್ವ, ಅವರ ಸುತ್ತಮುತ್ತಲಿನ ಜನರ ಪ್ರೀತಿ ಮತ್ತು ನಗುವನ್ನೆ ಹೆಚ್ಚು ಬಯಸುತ್ತಿದ್ದರು ಪುನೀತ್ ರಾಜಕುಮಾರ್ ಅವರು. ಸದಾ ಒಳ್ಳೆಯ ಗುಣ ಸರಳತೆಯನ್ನು ಮೈಗೂಡಿಸಿ ಕೊಂಡವರು ಅಪ್ಪು ಅವರು ಶಕ್ತಿದಾಮ ನೋಡಿ ಕೊಳ್ಳುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಈ ಶಕ್ತಿ ದಾಮದ ಮಕ್ಕಳು ಪುನೀತ್ ರಾಜಕುಮಾರ್ ಅವರ ಬಗ್ಗೆ ಇತ್ತೀಚೆಗಷ್ಟೇ ಸರಿಗಮಪ ವೇದಿಕೆಯಲ್ಲಿ ಅವರ ಗುಣ ಹೇಗಿತ್ತು ಎಂಬುದಾಗಿ ಹೇಳಿದ್ದಾರೆ.

Advertisements
Advertisements

ಒಬ್ಬ ಬಾಲಕಿ ಹೇಳುತ್ತಾಳೆ ನಾನು ಅಪ್ಪು ಅವರನ್ನು ನೋಡಿದ್ದು ಎರಡು ಸಾವಿರದ ಹದಿನೇಳರಲ್ಲಿ ನಮಗೆ ಏನು ಬೇಕು ಎಲ್ಲವನ್ನೂ ಅವರೇ ನೋಡಿಕೊಳ್ಳುತ್ತಿದ್ದರು. ಶಕ್ತಿ ಧಾಮಕ್ಕೆ ಎಂದಿಗೂ ಬರಿಗೈಯಲ್ಲಿ ಬಂದವರೆ ಅಲ್ಲ ಚೆನ್ನಾಗಿ ಓದಿ ಶಕ್ತಿ ಧಾಮಕ್ಕೆ ಒಳ್ಳೆಯ ಹೆಸರು ತರಬೇಕು ಎನ್ನುತ್ತಿದ್ದರು. ಎಲ್ಲರ ಜೊತೆ ತುಂಬಾ ಪ್ರೀತಿಯಿಂದ ಹೆಚ್ಚು ಸಮಯ ಕಳೆದು ನಮ್ಮ ಜೊತೆ ಮಾತನಾಡುತ್ತಿದ್ದರು ಎಂದು ಹೇಳಿದ್ದಾರೆ. ಇನ್ನೊಬ್ಬ ಬಾಲಕಿ ಅಪ್ಪು ಅವರು ಸ್ವಂತ ನಮಗೆ ಅಣ್ಣನ ರೀತಿಯೇ ಇದ್ದರು. ಒಂದು ಬಾರಿ ಸಿನಿಮಾ ನೋಡುತ್ತೇವೆ ಎಂದಾಗ ಮರುದಿನವೇ ಎಲ್ಲರಿಗೂ ಟಿಕೆಟ್ ಬುಕ್ ಮಾಡಿ ಥಿಯೇಟರ್ ನಲ್ಲಿ ಸಿನಿಮಾ ತೋರಿಸಿದರು.. ಆ ಸಿನಿಮಾ ಪುನೀತ್ ರಾಜಕುಮಾರ್ ಅಪ್ಪು ಅವರ ರಾಜಕುಮಾರ ಸಿನಿಮಾ ಅಂತಹ ವ್ಯಕ್ತಿ ಇದೀಗ ನಮ್ಮ ಜೊತೆ ಇಲ್ಲದಿರುವುದು ತುಂಬಾ ದುಃಖಕರವಾದ ವಿಷಯ..

ಅವರು ಎಲ್ಲಿಗೂ ಹೋಗಿಲ್ಲ ಬದಲಿಗೆ ಅಪ್ಪು ಅವರ ನೆನಪು ಸದಾ ನಮ್ಮ ಜೊತೆಯಲ್ಲಿ ಇರುತ್ತದೆ ಅವರ ಕನಸು ನನಸು ಮಾಡುತ್ತೇವೆ ಎಂದು ಭಾವುಕರಾಗಿ ಶಕ್ತಿ ಧಾಮದ ಮಕ್ಕಳು ಹೇಳಿದರು. ಏನೆಂದರೆ ಇಂತಹ ವ್ಯಕ್ತಿಯನ್ನು ಕರೆದುಕೊಂಡು ದೇವರು ನಮಗೆ ಮೊದಲನೇ ಸಲ ಮೋಸ ಮಾಡಿಬಿಟ್ಟ, ಇರಬೇಕಿತ್ತು ನಮ್ಮ ಜೊತೆ ಅವರ ನಗುವನ್ನು ಇನ್ನೂ ತುಂಬಾ ವರ್ಷಗಳ ಕಾಲ ನಾವು ನೋಡಬೇಕಿತ್ತು ಇನ್ನು ಎಷ್ಟು ಜನರಿಗೆ ಬದುಕು ರೂಪಿಸಿ ಕೊಡುತ್ತಿದ್ದರು ಕಷ್ಟದಲ್ಲಿದ್ದವರಿಗೆ ನೆರವಾಗುತ್ತಿದ್ದರು.. ಆದರೆ ಇದ್ಯಾವುದು ಇನ್ನುಮೇಲೆ ಆಗದಿರುವ ವಿಷಯ ಪುನೀತ್ ರಾಜ್ ಕುಮಾರ್ ಅವರು ಮಾತ್ರ ಪ್ರಪಂಚ ಇರುವತನಕ ಎಲ್ಲರ ಹೃದಯದಲ್ಲಿ ಶಾಶ್ವತ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ