ನಮಸ್ತೆ ಸ್ನೇಹಿತರೆ, ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯು ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿದೆ. ಎರಡನೇ ಟೆಸ್ಟ್ ಭಾರತದ ಅಂತಿಮ ದಿನದಾಟ ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ನಾಲ್ಕನೇ ದಿನದಲ್ಲಿ ಮೊದಲಿನಲ್ಲಿ ಬ್ಯಾಟಿಂಗ್ನಲ್ಲಿ ಆಘಾತ ಅನುಭವಿಸಿದ ಭಾರತ ಅಂತಿಮ ದಿನ ಮೈದಾನಕ್ಕೆ ಇಳಿದಾಗ ನಂತರ ತನ್ನ ಮತ್ತೆ ಎರಡು ವಿಕೆಟ್ಗಳನ್ನು ಕಳೆದುಕೊಂಡಿತ್ತು. ಈ ಮೂಲಕ ಇಂಗ್ಲೆಂಡ್ಗೆ ಭಾರತ ಸುಲಭ ಸವಾಲಾಗಲಿದೆ ಎಂದೇ ಎಲ್ಲಾ ಭಾವಿಸಿದ್ದರು. ಆದರೆ ಇಂಗ್ಲೆಂಡ್ ತಂಡದ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗುವಂತೆ ಮಾಡಿದ್ದು ಮಾತ್ರ ಇಬ್ಬರು ಭಾರತದ ಬೌಲರ್ಗಳಾದ ಬೂಮ್ರಾ ಮತ್ತು ಶಮಿ ಜೋಡಿ. ಈ ಸೂಪರ್ ಜೋಡಿ ಒಂದು ದಾಖಲೆಯನ್ನು ಸಹ ಸೃಷ್ಟಿಸಿದ್ದಾರೆ. ಆ ದಾಖಲೇ ಏನು ಅಂತ ನೋಡೋಣ ಬನ್ನಿ.

ಇನ್ನು ಈ ಪಂದ್ಯದಲ್ಲಿ 8ನೇ ವಿಕೆಟ್ಗೆ ಅಜೇಯ 89 ರನ್ಗಳ ಜೊತೆಯಾಟವನ್ನು ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬೂಮ್ರಾ ನೀಡಿದರು. ಈ ಜೊತೆಯಾಟ ಇಂಗ್ಲೆಂಡ್ ನೆಲದಲ್ಲಿ ಭಾರತ ತಂಡದ 8 ಕ್ರಮಾಂಕದ ಜೋಡಿ ನೀಡಿದ ಅತಿ ದೊಡ್ಡ ಜೊತೆಯಾಟವಾಗಿದೆ. ಈ ಮೂಲಕ ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬೂಮ್ರಾ ಲಾರ್ಡ್ಸ್ ಅಂಗಳದಲ್ಲಿ ದಾಖಲೆಯನ್ನು ಬರೆದಿದ್ದಾರೆ. ಇದು ಲಾರ್ಡ್ಸ್ ಅಂಗಳದಲ್ಲಿ ಹೊಸ ದಾಖಲೆಯಾಗಿದೆ.

ಈ ಇಬ್ಬರು ಜೋಡಿ ಆಡಿದ ಆಟ ಭಾರತದ ಪರ ತಿರುಗಿದ ಪಂದ್ಯ. ಲಾರ್ಡ್ಸ್ ಅಂಗಳದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯ ಎರಡು ತಂಡಗಳ ನಡುವಿನ ಜಿದ್ದಾಜಿದ್ದಿನ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಆರಂಭದ ದಿನದಿಂದಲೂ ಒಮ್ಮೆ ಭಾರತ ತಂಡ ಹಿಡಿತ ಸಾಧಿಸಿದರೆ ಬಳಿಕ ಇಂಗ್ಲೆಂಡ್ ತಂಡ ಮೇಲುಗೈ ಸಾಧಿಸಿತ್ತು. ಆದರೆ ನಾಲ್ಕನೇ ದಿನದಂತ್ಯಕ್ಕಾಗುವಾಗ ಪಂದ್ಯ ಸಂಪೂರ್ಣ ಇಂಗ್ಲೆಂಡ್ ಪರವಾಗಿತ್ತು. ಅಂತಿಮ ದಿನ ಇಂಗ್ಲೆಂಡ್ ತಂಡ ಗೆಲ್ಲಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಭಾರತ ಕನಿಷ್ಠ ಡ್ರಾ ಮಾಡಿಕೊಂಡರೂ ದೊಡ್ಡ ಸಾಧನೆಯಾಗಲಿದೆ ಎಂಬ ಭಾವನೆ ಸ್ವತಃ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಬಂದಿತ್ತು. ಆದರೆ ಅಂತಿಮ ದಿನ ಬೂಮ್ರಾ ಹಾಗೂ ಶಮಿ ನಿಡಿದ ಪ್ರದರ್ಶನ ಈ ಎಲ್ಲಾ ಅಭಿಪ್ರಾಯಗಳನ್ನು ಬದಲಿಸಿತ್ತು. ಭಾರತದ ಮೇಲಿದ್ದ ಒತ್ತಡ ಇಂಗ್ಲೆಂಡ್ ತಂಡಕ್ಕೆ ವಾಲಿತ್ತು. ಕೊನೆಗೆ ಈ ಜೋಡಿಯ ಅದ್ಭುತ ಆಟ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದೂಟ ತಿಂದಂಗೆ ಹಾಗಿದೆ. ಇದರ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಕಮೆಂಟ್ ಮಾಡಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ..