ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗವನ್ನು ಬೇರೆ ಮಟ್ಟಕ್ಕೆ ಕರೆದುಕೊಂಡು ಬಂದ ಮರೆಯಲಾಗದ ಮಾಣಿಕ್ಯ ಕರಾಟೆ ಕಿಂಗ್ ಶಂಕರ್ ನಾಗ್ ಅವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಶಂಕರ್ ನಾಗ್ ಅವರು ನಮ್ಮನ್ನು ಬಿಟ್ಟು 30 ವರ್ಷಗಳೇ ಕಳೆದರು ಇಂದಿಗೂ ಸಹ ಕನ್ನಡಿಗರ ಹೃದಯದಲ್ಲಿ ಜೀವಂತವಾಗಿದ್ದಾರೆ. ಕನ್ನಡ ಚಿತ್ರರಂಗ ಕಂಡ ಚಾಣಾಕ್ಷ ನಟ, ನಿರ್ದೇಶಕ ಎಂದರೆ ಯಾವುದೇ ತ’ಪ್ಪಿಲ್ಲ.. ಶಂಕರ್ ನಾಗ್ ಪ್ರತಿಕ್ಷಣ ಸಿನಿಮಾಗಳಲ್ಲಿ ಹೊಸತನವನ್ನು ತರಬೇಕು ಅಂತ ಯೋಚಿಸುತ್ತಿದ್ದರು. ಶಂಕರ್ ನಾಗ್ ಅವರು ನವೆಂಬರ್ 9, 1954 ರಂದು ಉತ್ತರ ಕನ್ನಡದ ಹೊನ್ನಾವರದಲ್ಲಿ ಜನಿಸಿದರು. ಮತ್ತೆ ಸಿನಿಮಾ ರಂಗಪ್ರವೇಶ, ಮುಂದೆ ನಡೆದಿದ್ದಲ್ಲ ಅದ್ಭುತ..

ಶಂಕರ್ ನಾಗ್ ಅವರ ವೈಯಕ್ತಿಕ ಜೀವನದ ವಿಷಯಕ್ಕೆ ಬಂದರೆ, ಶಂಕರ್ ನಾಗ್ ಅವರು ಅರುಂಧತಿ ನಾಗ್ ಅವರನ್ನು ವಿವಾಹವಾದರು. ಶಂಕರ್ ನಾಗ್ ಈ ದಂಪತಿಗೆ ಕಾವ್ಯ ನಾಗ್ ಎಂಬ ಮಗಳಿದ್ದಾಳೆ. ಶಂಕರ್ ನಾಗ್ ಅವರು ಅಗಲಿ ಸುಮಾರು ವರ್ಷಗಳು ಕಳೆದ ನಂತರ ಬೆಂಗಳೂರಿನಲ್ಲಿ ಶಂಕರ್ ನಾಗ್ ಅವರ ಹೆಸರಿನಲ್ಲಿ ರಂಗಮಂದಿರ ನಿರ್ಮಿಸಿ, ಅದಕ್ಕೆ ರಂಗಶಂಕರ ಎಂದು ಹೆಸರಿಟ್ಟರು. ಶಂಕರ್ ನಾಗ್ ಅವರ ಮಗಳು ಕಾವ್ಯ ಈಗ ಏನು ಮಾಡುತ್ತಿದ್ದಾರೆ ಗೊತ್ತಾ? ಮುಂದೆ ಓದಿ.!

ಶಂಕರನಾಗ್ ಅವರ ಮಗಳು ವೈ’ಲ್ಡ್ ಲೈಫ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಂತರ ಕಾವ್ಯ ಮದುವೆಯಾಗಿ ವಿದೇಶಕ್ಕೆ ತೆರಳಿದರು. ಆದರೆ ಕಾವ್ಯರಿಗೆ ತಾಯ್ನಾಡಿನಲ್ಲಿ ಏನಾದರೂ ಮಾಡಬೇಕೆಂಬ ಆಸೆಯಿಂದ, ಬೆಂಗಳೂರಿಗೆ ಬಂದು ಇಲ್ಲಿ ಹೊಸದಾದ ಸಂಸ್ಥೆಯೊಂದನ್ನು ಶುರು ಮಾಡಿದ್ದಾರೆ. ಕೋ’ಕೋನೆಸ್ ಎಂಬ ಹೆಸರಿನ ಸಂಸ್ಥೆಯನ್ನು ಶುರು ಮಾಡಿದ್ದಾರೆ, ಅಲ್ಲಿ ಶುದ್ಧ ತೆಂಗಿನ ಎಣ್ಣೆಯನ್ನು ತಯಾರಿಸುತ್ತಾರೆ. ವರ್ಜಿನ್ ಎಣ್ಣೆಯನ್ನು ಕಾವ್ಯ ನಾಗ್ ಅವರ ಕಂಪನಿಯಲ್ಲಿ ಉತ್ಪಾದಿಸಲಾಗುತ್ತದೆ. ಇವರ ಸಂಸ್ಥೆಯಲ್ಲಿ ತಯಾರಿಸುವ ವರ್ಜಿನ್ ಎಣ್ಣೆಯು ಬೆಂಗಳೂರಿನ ಹಲವಾರು ಅಂಗಡಿಗಳಲ್ಲಿ ಸಿಗುತ್ತದೆ. ಇವರ ಸಂಸ್ಥೆಯಲ್ಲಿ ತಯಾರಾಗುವ ಎಣ್ಣೆಯಿಂದ ಬಾಣಂತಿಯರಿಗೆ ಮತ್ತು ಮಕ್ಕಳ ಆರೋಗ್ಯಕ್ಕೆ ಒಳಿತಾಗಿದೆ.